ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ: ರುಬಿಯೋ ಹೇಳಿಕೆ ಬೆನ್ನಲೇ ದಾಳಿ ತೀವ್ರಗೊಳಿಸಿದ ಇಸ್ರೇಲ್

Published : Sep 16, 2025, 12:26 PM IST
Israel Intensified Airstrikes on Gaza after US foreign secretary visit Jerusalem

ಸಾರಾಂಶ

Israel Intensified Airstrikes: ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ ನಂತರ, ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಈ ದಾಳಿಯಿಂದಾಗಿ ಅಲ್ಲಿನ, ನಾಗರಿಕರು ಇಸ್ರೇಲ್- ಹಮಾಸ್ ನಡುವೆ ಸಿಲುಕಿ ನರಳುತ್ತಿದ್ದಾರೆ.

ಇಸ್ರೇಲ್ ಹಮಾಸ್ ಯುದ್ಧಕ್ಕೆ ತುಪ್ಪ ಸುರಿದ ಅಮೆರಿಕಾ

ಅಮೆರಿಕಾ ಬೆಂಬಲ ತೀವ್ರಗೊಳಿಸುತ್ತಿದ್ದಂತೆ ಇಸ್ರೇಲ್‌ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಇಸ್ರೇಲ್ ದಾಳಿಗೆ ಗಾಜಾದಲ್ಲಿರುವು ಕಟ್ಟಡಗಳು ಹೊತ್ತಿ ಉರಿಯುತ್ತಿರುವ ವೀಡಿಯೋಗಳು ವೈರಲ್ ಆಗಿವೆ. ಹಮಾಸ್‌ನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೊಸ ಮಿಲಿಟರಿ ದಾಳಿಗೆ ಅಮೆರಿಕಾ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಭರವಸೆ ನೀಡಿದ ಕೆಲ ಗಂಟೆಗಳಲ್ಲಿ ಇಸ್ರೇಲ್ ಗಾಜಾದ ಮೇಲೆ ಭಾರಿ ವಾಯುದಾಳಿ ನಡೆಸಿದೆ.

ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ಎಂದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ

ನಿನ್ನೆ ಸೋಮವಾರ ಜೆರುಸೆಲೆಮ್‌ಗೆ ಭೇಟಿ ನೀಡಿದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ, ಯುದ್ಧದಿಂದ ಹಾನಿಗೊಳಗಾದ ಪ್ಯಾಲೇಸ್ತೀನ್ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿಸುವ ಇಸ್ರೇಲ್, ನಮ್ಮ ಅಚ್ಚಲ ಬೆಂಬಲದ ಮೇಲೆ ನಂಬಿಕೆ ಇಡಬಹುದು ಎಂದ ಅವರು ಕತಾರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಪ್ರಯತ್ನಗಳನ್ನು ತಿರಸ್ಕರಿಸಿದಲ್ಲದೇ ಹಮಾಸ್‌ ಅನ್ನು ಅನಾಗರಿಕ ಪ್ರಾಣಿ ಎಂದು ಕರೆದಿದ್ದಾರೆ. ನವರೋ ಈ ಹೇಳಿಕೆಯ ನಂತರ ಗಾಜಾದ ಮೇಲೆ ಇಸ್ರೇಲ್ ತನ್ನ ದಾಳಿ ತೀವ್ರಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮಾರ್ಕೋ ರುಬಿಯೋ ಹೇಳಿಕೆ ಬೆನ್ನಲೇ ದಾಳಿ ತೀವ್ರಗೊಳಿಸಿದ ಇಸ್ರೇಲ್

ಗಾಜಾದಲ್ಲಿದ್ದ ವಸತಿ ಕಟ್ಟಡಗಳು ಇಸ್ರೇಲ್‌ ದಾಳಿಯಿಂದ ಸಂಪೂರ್ಣ ಧ್ವಂಸಗೊಂಡಿದ್ದು, ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ನಾವು ಅವರ ಕಿರುಚಾಟವನ್ನು ಕೇಳಿದೆವು ಎಂದು 25 ವರ್ಷ ನಿವಾಸಿ ಅಹ್ಮದ್ ಗಜಲ್ ಹೇಳಿದ್ದಾರೆ. ಗಾಜಾದ ಮೇಲೆ ರಾತ್ರಿ ಇಡೀ ನಡೆದ ವೈಮಾನಿಕ ದಾಳಿಯ ನಂತರ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಇಂದು ಹೇಳಿಕೆ ನೀಡಿದ್ದು, ಗಾಜಾ ಹೊತ್ತಿ ಉರಿಯುತ್ತಿದೆ. ಇಸ್ರೇಲ್ ಈ ಪ್ರದೇಶದ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದರು. ಹೆಚ್ಚಿನ ದಾಳಿ ನಡೆಸುವ ಮೊದಲು ಇಸ್ರೇಲ್ ಸೇನೆ ಅಲ್ಲಿದ್ದ ನಾಗರಿಕರಿಗೆ ಹೊರ ಹೋಗುವಂತೆ ಒತ್ತಾಯಿಸಿದೆ. ಈಗಾಗಲೇ ಗಾಜಾದಿಂದ ಲಕ್ಷಾಂತರ ಜನ ವಲಸೆ ಹೋಗಿದ್ದಾರೆ. ಆದರೆ ಅಷ್ಟೇ ಜನ ಅಲ್ಲಿ ಇನ್ನೂ ಇದ್ದಾರೆ. ಅಲ್ಲಿರುವ ಜನರಿಗೆ ಹಮಾಸ್ ಸ್ಥಳದಲ್ಲೇ ಇರುವಂತೆ ಕರೆ ನೀಡಿದ್ದು, ಇದರಿಂದ ಮೊದಲೇ ಸರಿಯಾದ ಅನ್ನಾಹಾರವಿಲ್ಲದೇ ಬಳಲುತ್ತಿರುವ ಗಾಜಾದ ನಿವಾಸಿಗಳಿಗೆ ಧರ್ಮ ಸಂಕಟವಾಗಿದೆ. ಒಂದೋ ಅಲ್ಲೇ ಇದ್ದು ಸಾಯಬೇಕು, ಅಥವಾ ಓಡಿ ಹೋಗುವ ಪ್ರಯತ್ನ ಮಾಡಿದರು ಬದುಕುಳಿಯುತ್ತೇವೆ ಎಂಬ ಯಾವ ಭರವಸೆಯೂ ಇಲ್ಲವಾಗಿದೆ.

ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಸಿಲುಕಿ ನಲುಗುತ್ತಿರುವ ಗಾಜಾ ನಾಗರಿಕರು 

ಇಲ್ಲಿ ಇಸ್ರೇಲಿ ಪಡೆಗಳು ಈಗಾಗಲೇ ಕನಿಷ್ಠ ನಾಲ್ಕು ಪೂರ್ವ ಉಪನಗರಗಳಲ್ಲಿ ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಅವುಗಳಲ್ಲಿ ಮೂರು ಭಾಗಗಳ ದೊಡ್ಡ ಭಾಗಗಳನ್ನು ತಮ್ಮ ದಾಳಿಯಿಂದಾಗಿ ಬಂಜರು ಭೂಮಿಯಾಗಿ ಪರಿವರ್ತಿಸುಸಿವೆ. ಸೈನ್ಯವು ಈಗ ಮಧ್ಯ ಮತ್ತು ಪಶ್ಚಿಮ ಗಾಜಾವನ್ನು ಸಮೀಪಿಸುತ್ತಿದ್ದು, ಆ ಪ್ರದೇಶದಲ್ಲಿ ಹೆಚ್ಚಿನ ಸ್ಥಳಾಂತರಗೊಂಡ ಜನರು ಆಶ್ರಯ ಪಡೆದಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮಾನವೀಯ ವಲಯ ಎಂದು ಗೊತ್ತುಪಡಿಸಿರುವ ದಕ್ಷಿಣದಲ್ಲಿಯೂ ಸುರಕ್ಷತೆ ಅಥವಾ ಸ್ಥಳಾವಕಾಶದ ಕೊರತೆ ಇದೆ. ಹೀಗಾಗಿ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಅನೇಕ ನಾಗರಿಕರು ಹೇಳುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹಾಗೆಯೇ ಇತರರು ಕೂಡ ತಮಗೆ ಸ್ಥಳಾಂತರಗೊಳ್ಳುವಷ್ಟು ಸಾಮರ್ಥ್ಯ ನಮ್ಮಲ್ಲಿ ಇಲ್ಲ ಎಂದು ಹೇಳುತ್ತಿದ್ದು, ಕತಾರ್‌ನಲ್ಲಿ ಸಭೆ ಸೇರುವ ಅರಬ್ ನಾಯಕರು ಇಸ್ರೇಲ್ ತನ್ನ ಯೋಜನೆಗಳನ್ನು ನಿಲ್ಲಿಸುವಂತೆ ಒತ್ತಡ ಹೇರಬಹುದು ಎಂಬ ಆಶಾಭಾವನೆಯಲ್ಲಿದ್ದಾರೆ.

ಕಳೆದ ವಾರದಲ್ಲಿ ಗಾಜಾ ನಗರದ ಮೇಲೆ ಐದು ಸುತ್ತಿನ ವಾಯುದಾಳಿಗಳನ್ನು ನಡೆಸಿದ್ದು, 500 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲಿ ಸೇನೆ ಹೇಳಿದೆ. ಇವುಗಳಲ್ಲಿ ಹಮಾಸ್ ವಿಚಕ್ಷಣ ಮತ್ತು ಸ್ನೈಪರ್ ಸ್ಥಾನಗಳು, ಸುರಂಗಗಳು ಮತ್ತು ಶಸ್ತ್ರಾಸ್ತ್ರಗಳ ಡಿಪೋಗಳು ಸೇರಿವೆ ಎಂದು ಇಸ್ರೇಲ್ ಹೇಳಿದೆ. ಇತ್ತ ಭಾನುವಾರ ಈ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 11 ರಿಂದ ಇಸ್ರೇಲಿ ಪಡೆಗಳು ಕನಿಷ್ಠ 1,600 ವಸತಿ ಕಟ್ಟಡಗಳು ಹಾಗೂ 13,000 ಡೇರೆಗಳನ್ನು ನಾಶಪಡಿಸಿದೆ ಎಂದು ಹಮಾಸ್ ಹೇಳಿದೆ.

ಎರಡು ವರ್ಷಗಳಿಂದ ನಡೆಯುತ್ತಲೇ ಇದೆ ಯುದ್ಧ: 64,900 ಕ್ಕೂ ಹೆಚ್ಚು ಸಾವು

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ದಾಳಿಯ ನಂತರ ಇಸ್ರೇಲ್ ತನ್ನ ಪ್ರತೀಕಾರದ ಕಾರ್ಯಾಚರಣೆ ಪ್ರಾರಂಭಿಸಿದ್ದು, ಎರಡು ವರ್ಷಗಳೇ ಕಳೆದರು ಈ ದಾಳಿ ನಿಂತಿಲ್ಲ. ಈ ಯುದ್ಧದಲ್ಲಿ ಮಕ್ಕಳು ಮಹಿಳೆಯರಾದಿಯಾಗಿ 64,900 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಹಾಗೆಯೇ ಹಮಾಸ್ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,219 ಜನರು ಸಾವನ್ನಪ್ಪಿದ್ದರು ಮತ್ತು 251 ಜನರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

ಗಾಜಾದಲ್ಲಿ ಯುದ್ಧದಿಂದ ಬರಗಾಲ ಎಂದ ವಿಶ್ವಸಂಸ್ಥೆ, ನಿರಾಕರಿಸಿ ಇಸ್ರೇಲ್

ಮತ್ತೊಂದೆಡೆ ಯುದ್ಧದಿಂದಾಗಿ  ಗಾಜಾದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನರು ಬರಗಾಲ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಆದರೆ ಇಸ್ರೇಲ್ ಈ ಸಂಶೋಧನೆಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ದಾಖಲೆಯ ಏರಿಕೆ ಕಂಡ ಚಿನ್ನದ ದರ: ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ: ಹೇಗಿದೆ ಇಂದು ಬೆಳ್ಳಿ ಬಂಗಾರ ದರ

ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಮತ್ತೆ ಮೇಘಸ್ಫೋಟ ಪ್ರವಾಹ: ತಪಕೇಶ್ವರ ದೇವಾಲಯ ಜಲಾವೃತ: ಹಲವರು ನಾಪತ್ತೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕಾದ ಬಳಿಕ ಈಗ ಮೆಕ್ಸಿಕೋದಿಂದಲೂ ಭಾರತದ ಮೇಲೆ ಶೇ.50 ಸುಂಕ: ಜನವರಿ 1ರಿಂದಲೇ ಹೊಸ ತೆರಿಗೆ ಜಾರಿ
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!