ಬೈರೂತ್: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಸಂಘರ್ಷ ಕೊನೆಗಾಣಿಸಲು ಜಾಗತಿಕ ಪ್ರಯತ್ನ ನಡೆದಿರುವಾಗಲೇ, ಇಡೀ ವಿಶ್ವವೇ ಬೆಚ್ಚಿಬೀಳುವಂಥ ಘಟನೆಯೊಂದು ಮಂಗಳವಾರ ಸಂಭವಿಸಿದೆ. ಹಮಾಸ್ ಉಗ್ರರಿಗೆ ಬೆಂಬಲವಾಗಿ ನಿಂತಿರುವ ಸಾವಿರಾರು ಹಿಜ್ಜುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್‌ಗಳನ್ನು ಮಂಗಳ ವಾರ ಏಕಕಾಲಕ್ಕೆ ಸ್ಫೋಟಿಸಲಾಗಿದೆ. ಲೆಬನಾನ್ ಮತ್ತು ಸಿರಿಯಾದಲ್ಲಿ ಈ ಸಾಮೂಹಿಕ ಸ್ಪೋಟ ಸಂಭವಿಸಿದೆ.
ಈ ಪೇಜರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಿಜ್ಜುಲ್ಲಾ ಉಗ್ರರು, ನಾಗರಿಕರು ಮತ್ತು ಲೆಬನಾನ್‌ನಲ್ಲಿನ ಇರಾನ್ ರಾಯಭಾರಿ ಮೊಜಬಾ ಅಮಾನಿ ಕೂಡಾ ಸೇರಿದ್ದಾರೆ. ಮೊದಲ ಸೋಟ ಸಂಭವಿಸಿದ ನಂತರ 30 ನಿಮಿಷಗಳವರೆಗೆ ಸತತವಾಗಿ ಪೇಜರ್‌ಗಳು ಏಕಾಏಕಿ ಬಿಸಿ ಆಗಿ ಸೋಟಗೊಂಡಿವೆ. ಪೇಜರ್‌ಗಳ ಸ್ಪೋಟವು ಇಸ್ರೇಲ್ ನೊಂದಿಗಿನ ಸುಮಾರು 1 ವರ್ಷದ ಯುದ್ಧದಲ್ಲಿ ನಾವು ಎದುರಿಸಿದ ಅತಿದೊಡ್ಡ ಭದ್ರತಾ ವೈಫಲ್ಯ ಎಂದು ಹಿಜ್ಜುಲ್ಲಾ ಮುಖಂಡನೊಬ್ಬ ಹೇಳಿದ್ದಾನೆ.
ಇದನ್ನೂ ಓದಿ:ಇಸ್ರೇಲ್ ದಾಳಿಗೆ ನಡುಗಿದ ಹಿಜ್ಬುಲ್ಲಾ ಉಗ್ರರು;100 ವಿಮಾನ ಬಳಸಿ ಭಾರೀ ಪ್ರಮಾಣದ ಕ್ಷಿಪಣಿ ದಾಳಿ!
ಮೊಬೈಲ್‌ಗೆ ಗುಡ್ ಬೈ: ಕೆಲ ತಿಂಗಳ ಹಿಂದಷ್ಟೇ ಹಿಜ್ಜುಲ್ಲಾ ಉಗ್ರ ಸಂಘಟನೆಯು, ಸಂವಹನದಲ್ಲಿನ ಗೌಪ್ಯತೆ ಕಾಪಾಡಲು ತನ್ನ ಉಗ್ರರಿಗೆ ಮೊಬೈಲ್ ತ್ಯಜಿಸಲು ಸೂಚಿಸಿತ್ತು. ಮೊಬೈಲ್ ಬಳಸಿದರೆ ಅದರ ಆಧಾರದಲ್ಲಿ ಇಸ್ರೇಲಿ ಸೇನೆ ನಮ್ಮ ಚಲನವಲನದ ಮೇಲೆ ಕಣ್ಣಿಡಬಹುದು ಮತ್ತು ಮೊಬೈಲ್ ಗುರಿಯಾಗಿಸಿ ದಾಳಿ ನಡೆಸಬಹುದು ಎಂದು ಎಚ್ಚರಿಸಿ ಪೇಜರ್ ಬಳಕೆಗೆ ಸೂಚಿಸಿತ್ತು. ಆದರೆ ಇದೀಗ ಪೇಜರ್‌ಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದೆ. 2 ತಿಂಗಳ ಹಿಂದಷ್ಟೇ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೇ ಇರಾನ್‌ಗೆ ಭೇಟಿ ನೀಡಿದಾಗ ಅಲ್ಲಿ ನಡೆದ ನಿಗೂಢ ದಾಳಿಯಲ್ಲಿ ಸಾವನ್ನಪ್ಪಿದ್ದರು. ಅದರಲ್ಲೂ ಇಸ್ರೇಲ್ ಕೈವಾಡದ ಶಂಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಈ ಸಾಮೂಹಿಕ ಪೇಜರ್ ಸ್ಪೋಟ ಸಂಭವಿಸಿದೆ.
Simultaneous Pager blast of 2500+ Hezbollah terrorists have put on Chaos. Have to say the Israel intelligence agency is the most efficient intelligence agency in the world and nobody can match their intelligence. https://t.co/SqazBDfL2B pic.twitter.com/I1KNPEmXNM
— Ganesh (@me_ganesh14)
ಸೇಡಿಗಾಗಿ ಕ್ರಮ?: ಈ ಸ್ಪೋಟಕ್ಕೆ ಕಾರಣ ಏನು ಎಂದು ತಿಳಿದು ಬಂದಿಲ್ಲವಾದರೂ, ಸೇಡಿಗಾಗಿ ಇಸ್ರೇಲ್, ಬಹುಶಃ ಪೇಜರ್‌ಗಳನ್ನು ಹ್ಯಾಕ್ ಮಾಡಿ, ಬ್ಯಾಟರಿ ಬಿಸಿ ಮಾಡಿ ಸ್ಪೋಟಿಸಿರಬಹುದು ಎನ್ನಲಾಗಿದೆ. ಇಂಥ ನಿಗೂಢ ದಾಳಿಗೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಕುಖ್ಯಾತವಾಗಿದ್ದು, ಈ ಘಟನೆಯ ಹಿಂದೆಯೂ ಅದರ ಕೈವಾಡ ಶಂಕಿಸಲಾಗಿದೆ.
ರಸ್ತೆಯಲ್ಲಿ ಸಾಗುವ ವ್ಯಕ್ತಿಯ ಬಳಿಯ ಪೇಜರ್, ಅಂಗಡಿಯಲ್ಲಿ ವ್ಯಕ್ತಿಗಳು ಇಟ್ಟುಕೊಂಡಿದ್ದಪೇಜರ್‌ಗಳು ಸ್ಫೋಟವಾಗಿ ರಸ್ತೆ ಹಾಗೂ ಅಂಗಡಿಗಳಲ್ಲಿನ ಜನರು ಕಕ್ಕಾಬಿಕ್ಕಿಯಾಗಿ ಓಡುವ ವಿಡಿಯೋ ವೈರಲ್ ಆಗಿವೆ. ರಸ್ತೆಯಲ್ಲಿ ಪೇಜರ್ ಸ್ಪೋಟಗೊಂಡು ಪರಿಣಾಮ ರಕ್ತಸಿಕ್ತನಾದ ವ್ಯಕ್ತಿಯ ಚಿತ್ರಗಳೂ ಲಭ್ಯವಾಗಿವೆ. ಜೊತೆಗೆ ಆಸ್ಪತ್ರೆಗಳಲ್ಲಿ ಸಾವಿರಾರು ಜನರು ಚಿಕಿತ್ಸೆ ಪಡೆಯುತ್ತಿರುವ ಫೋಟೋಗಳನ್ನು ಲೆಬನಾನ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಉತ್ತರ ಇಸ್ರೇಲ್‌ನ ಸೇನಾ ನೆಲೆಗಳ ಮೇಲೆ ಹಿಜ್ಬುಲ್ಲಾ ಉಗ್ರರ ಡ್ರೋನ್ ದಾಳಿ
ಏನಿದು ಪೇಜರ್?
ಮೊಬೈಲ್‌ಗಿಂತ ಮೊದಲು ಪೇಜರ್ ಗಳು ಸಂವಹನಕ್ಕೆಂದು ಬಂದಿದ್ದವು. ವ್ಯಕ್ತಿಗಳು ಮೊಬೈಲ್ ರೀತಿಯೇ ಇವನ್ನು ಇಟ್ಟುಕೊಂಡು ಸಂಚರಿಸಬಹುದು. ಆದರೆ ಇವುಗಳ ಮೂಲಕ ಸಂದೇಶ ಮಾತ್ರ ಕಳಿಸಬಹುದು. ಮೊಬೈಲ್ ರೀತಿ ಮಾತನಾಡಲು ಆಗದು. ವಿಶ್ವಾದ್ಯಂತ ಇವು ಔಟ್ ಡೇಟೆಡ್ ಆದರೂ ಹಿಜ್ಜುಲ್ಲಾ ಉಗ್ರರು ಈಗಲೂ ಇವನ್ನು ಸಂವಹನದಲ್ಲಿ ಗೌಪ್ಯತೆ ಕಾಪಾಡಲು ಬಳಸುತ್ತಿದ್ದರು.
ಸ್ಫೋಟ ನಡೆಸಿದ್ದು ಹೀಗಿರಬಹುದು?
ಪೇಜರ್‌ಗಳು ಹಳೆಯ ಸಾಫ್ಟ್‌ವೇರ್ ಬಳಸುತ್ತವೆ. ಇದನ್ನು ಹ್ಯಾಕ್ ಮಾಡುವುದು ಸುಲಭ. ಇದನ್ನು ಗಮನಿಸಿ, ಸಾಫ್ಟ್‌ವೇರ್ ಹ್ಯಾಕ್ ಮಾಡಿ ಪೇಜರ್‌ಗಳಲ್ಲಿ ಬಳಸುವ ಲೀಥಿಯಂ ಅಯಾನ್ ಬ್ಯಾಟರಿಗಳನ್ನು ಅಗತ್ಯಕ್ಕಿಂತ ಹೆಚ್ಚು ಚಾರ್ಜ್ ಆಗುವಂತೆ ಮಾಡಲಾಗಿದೆ. ಹೀಗಾಗಿ ಭಾರೀ ಹೀಟ್ ಆದ ಬಳಿಕ ಬ್ಯಾಟರಿ ಸ್ಫೋಟಗೊಳ್ಳುವಂತೆ ಮಾಡಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಸಾಂಪ್ರದಾಯಿಕ ದಾಳಿಗಿಂತ ಭೀಕರ
ನವದೆಹಲಿ: ಗ್ರೆನೇಡ್, ಬಾಂಬ್, ಗುಂಡಿನ ದಾಳಿ ನಡೆಸುವುದು ಸಾಂಪ್ರದಾಯಿಕ ಮಾದರಿಯ ದಾಳಿಗೆ ಉದಾಹರಣೆ. ಇವು ಸೀಮಿತ ಪ್ರದೇಶ, ಸೀಮಿತ ಜನಸಂಖ್ಯೆಗೆ ಸೀಮಿತ. ಆದರೆ ತಂತ್ರಜ್ಞಾನ ಬಳಸಿ ನಡೆಸುವಂಥ ಪೇಜರ್ ಬಾಂಬ್‌ನಂಥ ಘಟನೆಗಳು ತಂತ್ರಜ್ಞಾನದ ದುರ್ಬಳಕೆಗೊಂದು ದೊಡ್ಡ ಸಾಕ್ಷಿ. ಜೊತೆಗೆ ಭವಿಷ್ಯದಲ್ಲಿ ಯಾವುದೇ ವ್ಯಕ್ತಿ, ಯಾವುದೇ ಉಗ್ರ ಸಂಘಟನೆ ಅಥವಾ ಯಾವುದೇ ದೇಶವೊಂದು ತನ್ನ ಶತ್ರುಗಳನ್ನು ಗುರಿಯಾಗಿಸಿ ಏಕಕಾಲಕ್ಕೆ ದಾಳಿ ನಡೆಸಿ ಭೀಕರ ಅನಾಹುತಕ್ಕೆ ಕಾರಣವಾಗಬಲ್ಲ ಸಂಭವನೀಯತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
Pager blast of 2500+ Hezbollah terrorists have put on Chaos. Have to say the Israel intelligence agency is the most efficient intelligence agency in the world and nobody can match their intelligence.
This is how getting explode in Lebanon.! pic.twitter.com/a23zGnMfdu