Asianet Suvarna News Asianet Suvarna News

ಇಸ್ರೇಲ್‌ ಜೊತೆ ಉತ್ತಮ ಸಂಬಂಧ, ಸೌದಿ ರಾಜನಿಗೆ ಶುರುವಾಯ್ತು ಜೀವಭಯ!

ಇಸ್ರೇಲ್‌ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಕಾರಣಕ್ಕೆ ಸೌದಿಯ ಕ್ರೌನ್‌ ಪ್ರಿನ್ಸ್‌ ಮೊಹಮದ್‌ ಬಿನ್‌ ಸಲ್ಮಾನ್‌ಗೆ ಈಗ ಜೀವ ಭಯ ಕಾಡುತ್ತಿದೆ ಎಂದು ಅಮೆರಿಕ ಮ್ಯಾಗಝೀನ್‌ ವರದಿ ಮಾಡಿದೆ.

Iran Rival Saudi crown prince Mohammed bin Salman fears assassination says US magazine san
Author
First Published Aug 15, 2024, 9:46 PM IST | Last Updated Aug 15, 2024, 9:48 PM IST

ನವದೆಹಲಿ (ಆ.15): ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಜೀವ ಭಯ ಶುರುವಾಗಿದೆ. ಇಸ್ರೇಲ್‌ ಸರ್ಕಾರದೊಂದಿಗೆ ಸ್ನೇಹಪರ ಸಂಬಂಧ ಹೊಂದಿರುವ ಕಾರಣಕ್ಕಾಗಿಯೇ ನನ್ನನ್ನು ಹತ್ಯೆ ಮಾಡಬಹುದು ಎನ್ನುವ ಅತಂಕ ಅವರಿಗೆ ಎದುರಾಗಿದೆ ಎಂದು ವರದಿಯಾಗಿದೆ. ಅಮೇರಿಕನ್ ಆನ್‌ಲೈನ್ ಸುದ್ದಿ ನಿಯತಕಾಲಿಕೆ ಪೊಲಿಟಿಕೊ ಬುಧವಾರ ಪ್ರಕಟವಾದ ಅಂಕಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ, ಅಮೆರಿಕದ ಸೆನೆಟರ್‌ಗಳ ಜೊತೆ ಇತ್ತೀಚೆಗೆ ಸೌದಿಯ ರಾಜಮನೆತನದ ವ್ಯಕ್ತಿಗಳ ಭೇಟಿಯನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ. 'ಸೌದಿ ಹಾಗೂ ಇಸ್ರೇಲ್‌ ಸಂಬಂಧವನ್ನು ತಿಳಿಗೊಳಿಸುವುದರೊಂದಿಗೆ ಅಮೆರಿಕ ಹಾಗೂ ಇಸ್ರೇಲ್‌ ಜೊತೆ ಉತ್ತಮ ಸಂಬಂಧವನ್ನೂ ಹೊಂದಿರುವ ಮೂಲಕ ನನ್ನ ಜೀವನವನ್ನೇ ಅಪಾಯಕ್ಕೆ ಸಿಲುಕಿಸಿದ್ದೇನೆ ಎಂದು ಸೌದಿ ರಾಜ ಕಾಂಗ್ರೆಸ್‌ನ ಸದಸ್ಯರಿಗೆ ತಿಳಿಸಿದ್ದಾರೆ ಎಂದು ಬರೆಯಲಾಗಿದೆ. ಒಂದು ಹಂತದಲ್ಲಂತೂ ಇಸ್ರೇಲ್‌ನೊಂದಿಗೆ   ಶಾಂತಿ ಒಪ್ಪಂದವನ್ನು ಮಾಡಿಕೊಂಡ ನಂತರ ಕೊಲ್ಲಲ್ಪಟ್ಟ ಈಜಿಪ್ಟ್ ನಾಯಕ ಅನ್ವರ್ ಸಾದತ್ ಅವರನ್ನುಉಲ್ಲೇಖಿಸಿದ್ದಾರೆ. ಈ ವೇಳೆ ಸಾದತ್‌ ಅವರನ್ನು ರಕ್ಷಣೆ ಮಾಡಲು ಅಮೆರಿಕ ಏನು ಮಾಡಿದೆ ಎಂದೂ ಪ್ರಶ್ನೆ ಮಾಡಿದ್ದಾರೆ.

2020 ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಸುಡಾನ್ ಮತ್ತು ಮೊರಾಕೊ ಆಡಳಿತದೊಂದಿಗೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿದ್ದವು. ವಾಷಿಂಗ್ಟನ್ ತನ್ನ ಅತ್ಯಂತ ಪ್ರೀತಿಯ ಮಿತ್ರರಾಷ್ಟ್ರವಾದ ಇಸ್ರೇಲ್‌ಗೆ ಪ್ರಾದೇಶಿಕ ಬೆಂಬಲವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ರಿಯಾದ್ ಅನ್ನು ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ಸೌದಿಯಲ್ಲಿ 11 ಇಸ್ಲಾಮಿಕ್‌ ದೇಶಗಳಿಗೆ ಯೋಗ ಶಿಬಿರ: ಕಟ್ಟಾ ಇಸ್ಲಾಮಿಕ್‌ ದೇಶದಲ್ಲಿ ಮೊದಲ ಬಾರಿ ಶಿಬಿರ

ಕಳೆದ ಜುಲೈನಲ್ಲಿ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಆಡಳಿತವು ಸೌದಿ ಅರೇಬಿಯಾ ಹಾಗೂ ಇಸ್ರೇಲ್‌ ನಡುವೆ ಸಾಮಾನ್ಯ ಸ್ನೇಹಪರ ಸಂಬಂಧದ ಅಗತ್ಯವನ್ನು ಘೋಷಣೆ ಮಾಡಿತ್ತು. ಆ ಬಳಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಸೌದಿ ಅಧಿಕಾರಿಗಳೊಂದಿಗೆ ಕಿಂಗ್‌ಡಮ್‌ನ ಬಂದರು ನಗರವಾದ ಜೆಡ್ಡಾದಲ್ಲಿ ಮಾತುಕತೆ ನಡೆಸಿದರು.

3 ಸಾವಿರ ಕೋಟಿ ರೂಪಾಯಿ ಮೌಲ್ಯದ ಐಪಿಎಲ್‌ನಲ್ಲಿ ಪಾಲು ಖರೀದಿಸಲು ಮುಂದಾದ ಸೌದಿ ಅರೇಬಿಯಾ!

ಆದರೆ, ಸೆಪ್ಟೆಂಬರ್‌ನಲ್ಲಿ, ಪ್ಯಾಲೆಸ್ಟೀನಿಯಾದವರಿಗೆ ಯಾವುದೇ ರಿಯಾಯಿತಿಗಳನ್ನು ನೀಡಲು ಇಸ್ರೇಲಿ ಕ್ಯಾಬಿನೆಟ್ ಇಷ್ಟವಿಲ್ಲದ ಕಾರಣ ಸ್ನೇಹಪರ ಒಪ್ಪಂದದ ಮೇಲಿನ ಎಲ್ಲಾ ಮಾತುಕತೆಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಯುನೈಟೆಡ್ ಸ್ಟೇಟ್ಸ್‌ಗೆ ಸೌದಿ ಅರೇಬಿಯಾ ತಿಳಿಸಿತು ಎಂದು ವರದಿಯಾಗಿದೆ.

Latest Videos
Follow Us:
Download App:
  • android
  • ios