1500 ಹಮಾಸ್‌ ಉಗ್ರರ ಶವ ಪತ್ತೆ: ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕ್ಯಾಂಪ್‌ ಮೇಲೂ ಇಸ್ರೇಲ್‌ ದಾಳಿ

By Kannadaprabha News  |  First Published Oct 11, 2023, 9:01 AM IST

ಸುಮಾರು 24 ಲಕ್ಷ ನಾಗರಿಕರಿರುವ ಗಾಜಾ ಪ್ರದೇಶದಲ್ಲಿ ಸುಮಾರು 1.8 ಲಕ್ಷ ಜನರು ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕೇಂದ್ರಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ. ಉಳಿದವರು ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದಾಗಿ ರಕ್ಷಣೆ ಸಿಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.


ಗಾಜಾ: ಸುಮಾರು 24 ಲಕ್ಷ ನಾಗರಿಕರಿರುವ ಗಾಜಾ ಪ್ರದೇಶದಲ್ಲಿ ಸುಮಾರು 1.8 ಲಕ್ಷ ಜನರು ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕೇಂದ್ರಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ. ಉಳಿದವರು ನಿರಂತರವಾಗಿ ನಡೆಯುತ್ತಿರುವ ದಾಳಿಯಿಂದಾಗಿ ರಕ್ಷಣೆ ಸಿಗದೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ಇಸ್ರೇಲ್‌ ಗಾಜಾಪಟ್ಟಿಯ ಮೇಲೆ ಪ್ರತಿದಾಳಿ ಆರಂಭಿಸಿದ್ದು, ಈ ಪ್ರದೇಶದಲ್ಲಿ ಕ್ಷಣಕ್ಷಣಕ್ಕೂ ಬಾಂಬ್‌ಗಳ ಸುರಿಮಳೆಯಾಗುತ್ತಿದೆ. ಜೊತೆಗೆ ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕೇಂದ್ರಗಳ ಮೇಲೂ ದಾಳಿ ನಡೆದಿದೆ. ಹೀಗಾಗಿ ಈ ದಾಳಿಗಳಿಂದ ತಪ್ಪಿಸಿಕೊಳ್ಳಲು ಸೂಕ್ತ ಸ್ಥಳ ದೊರಕದ ಪರಿಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. ಈ ಕುರಿತಾಗಿ ಮಹಿಳೆಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ‘ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹತ್ತಿರದಲ್ಲೇ ರಾಕೆಟ್‌ವೊಂದು ಸ್ಫೋಟಿಸಿತು. ಆದರೆ ರಕ್ಷಣೆಗಾಗಿ ಅಡಗಿಕೊಳ್ಳಲು ಸಹ ನಮ್ಮಲ್ಲಿ ಸೂಕ್ತ ಸ್ಥಳಗಳಿಲ್ಲ. 3 ದಿನಗಳಿಂದ ನಿರಂತರವಾಗಿ ಮಕ್ಕಳನ್ನು ಎತ್ತಿಕೊಂಡು ಅಲೆಯುತ್ತಿದ್ದೇನೆ. ಅವರಿಗಾಗಿಯಾದರೂ ನಾನು ಬದುಕುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

Tap to resize

Latest Videos

ಹಮಾಸ್ ಬಳಿ ಇರುವ 150 ಇಸ್ರೇಲಿ ಒತ್ತೆಯಾಳುಗಳ ಕಥೆ ಏನು?

ಇಸ್ರೇಲ್‌ ದಾಳಿ ಆರಂಭವಾಗುತ್ತಿದ್ದಂತೆ ಗಾಜಾದಲ್ಲಿನ (Gaza Strip) ಬಹುತೇಕ ನಾಗರಿಕರು ದಕ್ಷಿಣದತ್ತ ವಲಸೆ ಬಂದರು. ಆದರೆ ಅವರು ಇಲ್ಲಿ ತಲುಪುತ್ತಿದ್ದಂತೆ ಇಲ್ಲೂ ರಾಕೆಟ್‌ ದಾಳಿ ಆರಂಭವಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. ಹಮಾಸ್‌ ಉಗ್ರರು ಗಾಜಾ ಪಟ್ಟಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಅಲ್ಲಿನ ಜನರನ್ನು ರಕ್ಷಿಸಲು ವಿಶ್ವಸಂಸ್ಥೆ ಹಲವು ನಿರಾಶ್ರಿತ ಕೇಂದ್ರಗಳನ್ನು (UN refugee camps) ತೆರೆದಿದ್ದು, ಯುದ್ಧದ ಸಮಯದಲ್ಲಿ ರಕ್ಷಣೆಯನ್ನು ಒದಗಿಸುತ್ತಿದೆ. ಆದರೆ ಈ ಬಾರಿ ಈ ಕೇಂದ್ರಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ವಿಶ್ವಸಂಸ್ಥೆ (United Nation) ಹೇಳಿದೆ. ಇಸ್ರೇಲ್‌ ಮತ್ತು ಈಜಿಪ್ಟ್‌ಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ಗಾಜಾಪಟ್ಟಿ ತೊರೆದು ಹೋಗುವುದು ಸಹ ಅಲ್ಲಿನ ಜನರಿಗೆ ಸಾಧ್ಯವಿಲ್ಲ.

ಇಸ್ರೇಲ್‌ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಳಕೆ?

ನಮ್ಮನ್ನು ಸ್ಥಳಾಂತರಿಸಿ ಗಾಜಾದಲ್ಲಿನ ಭಾರತೀಯರ ಮನವಿ

ಜೆರುಸಲೇಂ: ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾ ಪ್ರದೇಶದಿಂದಲೂ ಭಾರತೀಯರನ್ನು ಸ್ಥಳಾಂತರ ಮಾಡಬೇಕೆಂದು ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ. ಹಮಾಸ್‌ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಸಹ ದಾಳಿ ನಡೆಸುತ್ತಿರುವುದರಿಂದ ಗಾಜಾದಲ್ಲಿ ಭಯಾನಕ ಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

'ನಾವು ಇಲ್ಲಿ ಅಮಾನುಷವಾದ ಯುದ್ಧವನ್ನು ಎದುರಿಸುತ್ತಿದ್ದೇವೆ. ಬಾಂಬ್‌ ದಾಳಿಗೆ ಎಲ್ಲವೂ ಸಹ ಕ್ಷಣಗಳಲ್ಲೇ ನಾಶವಾಗುತ್ತಿವೆ. ಈ ಬಿಕ್ಕಟ್ಟಿನಿಂದಾಗಿ ನಾವು ತೊಂದರೆಗೆ ಸಿಲುಕಿಕೊಂಡಿದ್ದೇವೆ. ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ' ಎಂದು ಗಾಜಾದಲ್ಲಿ ವಾಸಿಸುತ್ತಿರುವ ಜಮ್ಮು ಕಾಶ್ಮೀರದ ಲುಬ್ನಾ ನಜೀರ್‌ ಶಾಬೂ ಹೇಳಿದ್ದಾರೆ. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ಸಂಘರ್ಷ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಮಾಸ್‌ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್‌ ಸಹ ಗಾಜಾದ ಮೇಲೆ ವಾಯುದಾಳಿ ನಡೆಸುತ್ತಿದೆ.

ಹಮಾಸ್ ಉಗ್ರರಿಂದ 40 ಮಕ್ಕಳ ಶಿರಚ್ಛೇಧ, ಕಾರ್ಯಾಚರಣೆಗೆ ಇಸ್ರೇಲ್‌ಗೆ ಬಂದಿಳಿದ ಅಮೆರಿಕ ಪಡೆ!

1500 ಹಮಾಸ್‌ ಉಗ್ರರ ಶವ ಪತ್ತೆ: ಇಸ್ರೇಲ್‌ ಸೇನೆ
ಜೆರುಸಲೇಂ: ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ. ಗಾಜಾಪಟ್ಟಿಯೊಂದಿಗಿನ ಗಡಿ ಭಾಗವಾದ ಇಸ್ರೇಲ್‌ಗೆ ಸೇರಿದ ಪ್ರದೇಶದಲ್ಲಿ ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಸೇನೆ ಹೇಳಿದೆ.  ಇದೇ ವೇಳೆ ಕಳೆದ ರಾತ್ರಿಯಿಂದೀಚೆಗೆ ಯಾವುದೇ ಪ್ಯಾಲೆಸ್ತೀನಿಗಳು ನಮ್ಮ ಗಡಿ ದಾಟಿ ಬಂದಿಲ್ಲ. ನಾವು ನಮ್ಮ ಗಡಿಯನ್ನು ಸಂಪೂರ್ಣವಾಗಿ ರಕ್ಷಿಸಿಕೊಂಡಿದ್ದೇವೆ. ಗಡಿಯ ಸುತ್ತಲಿನ ಎಲ್ಲಾ ಸಮುದಾಯಗಳ ಸ್ಥಳಾಂತರಿಸುವಿಕೆಯನ್ನು ಸೇನೆಯು ಬಹುತೇಕ ಪೂರ್ಣಗೊಳಿಸಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಪ್ಯಾಲೆಸ್ತೀನ್‌ ಮಾತ್ರ ಈವರೆಗೆ ಇಸ್ರೇಲ್‌ ದಾಳಿಯಲ್ಲಿ ತನ್ನ 700 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ

'ಗಾಜಾಕ್ಕೆ ಸಹಾಯ ನೀಡುವ ಟ್ರಕ್‌ ಬಂದಲ್ಲಿ ಬಾಂಬ್‌ ಬೀಳುತ್ತದೆ..' ಈಜಿಪ್ಟ್‌ಗೆ ಇಸ್ರೇಲ್‌ ಎಚ್ಚರಿಕೆ!

click me!