ಇಸ್ರೇಲ್‌ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಳಕೆ?

By Kannadaprabha News  |  First Published Oct 11, 2023, 7:18 AM IST

ಇಸ್ರೇಲ್‌-ಪ್ಯಾಲೆಸ್ತೀನ್‌ ಕದನ ತಾರಕಕ್ಕೇರುತ್ತಿರುವ ನಡುವೆಯೇ ಇಸ್ರೇಲ್‌ ಸೇನೆ ಐಡಿಎಫ್‌ ಗಾಜಾ಼ ಪ್ರದೇಶದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಾಂಬ್‌ಗಳನ್ನು ಬಳಕೆ ಮಾಡುತ್ತಿದೆ ಎಂದು ವರದಿಯಾಗಿದೆ.


ನವದೆಹಲಿ: ಇಸ್ರೇಲ್‌-ಪ್ಯಾಲೆಸ್ತೀನ್‌ ಕದನ ತಾರಕಕ್ಕೇರುತ್ತಿರುವ ನಡುವೆಯೇ ಇಸ್ರೇಲ್‌ ಸೇನೆ ಐಡಿಎಫ್‌ ಗಾಜಾ಼ ಪ್ರದೇಶದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಾಂಬ್‌ಗಳನ್ನು ಬಳಕೆ ಮಾಡುತ್ತಿದೆ ಎಂದು ವರದಿಯಾಗಿದೆ. ಲಭ್ಯವಾಗಿರುವ ಹಲವಾರು ಚಿತ್ರಗಳು, ವಿಡಿಯೋಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಹೇಳಿಕೆಗಳನ್ನು ಗಮನಿಸಿದಾಗ ಇದು ನಿಜವೇ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವೈಟ್‌ ಫಾಸ್ಫರಸ್‌ ಎಂದರೇನು?

Tap to resize

Latest Videos

ವೈಟ್‌ ಫಾಸ್ಫರಸ್‌ (white Phosphorus) ಎಂಬುದು ಒಂದು ರೀತಿಯ ಅಪಾಯಕಾರಿ ರಾಸಾಯನಿಕವಾಗಿದ್ದು, ಹಳದಿ ಬಣ್ಣದಲ್ಲಿದ್ದು, ಬೆಳ್ಳುಳ್ಳಿ ರೀತಿಯ ವಾಸನೆಯನ್ನು ಹೊರಸೂಸುತ್ತದೆ. ಅದನ್ನು ಗಾಳಿಯಲ್ಲಿ ಪಸರಿಸಿದಾಗ ಅತ್ಯಂತ ವೇಗವಾಗಿ ಮತ್ತು ಸ್ಪಷ್ಟವಾಗಿ ದಹನಕ್ರಿಯೆಯಲ್ಲಿ ತೊಡಗುತ್ತದೆ. ಇದನ್ನು ಅಮೆರಿಕ ಸೇನೆ ಸೇರಿದಂತೆ ಹಲವಾರು ದೇಶಗಳು ಬಳಕೆ ಮಾಡುತ್ತಿದ್ದುದಕ್ಕೆ ನಿದರ್ಶನಗಳಿವೆ. ಈ ರಾಸಾಯನಿಕವು 815 ಡಿಗ್ರಿಯಷ್ಟು ಉಷ್ಣ ಹವೆ ಉತ್ಪಾದಿಸಲಿದ್ದು, ಬಿಳಿ ಬಣ್ಣದಲ್ಲಿ ಹೊಗೆಯನ್ನು ಹೊರಸೂಸುತ್ತದೆ. ಇದನ್ನು ಯುದ್ಧದಲ್ಲಿ ಹೊಗೆಮಿಶ್ರಿತ ಪ್ರದೇಶವನ್ನು ಕೃತಕವಾಗಿ ನಿರ್ಮಿಸಲು ಬಳಕೆ ಮಾಡಲಾಗುತ್ತದೆ.

ಇದು ಮನುಷ್ಯರಲ್ಲಿ ಶಾಶ್ವತ ಅಂಗವೈಕಲ್ಯವನ್ನು ಉಂಟು ಮಾಡುವ ಸಾಧ್ಯತೆಯನ್ನು ಹೊಂದಿರುತ್ತದೆ ಹಾಗೂ ದೇಹದ ಮೂಳೆಗಳಿಗೂ ವ್ಯಾಪಿಸಬಹುದಾದಷ್ಟು ಶಕ್ತಿಯುತವಾಗಿದೆ. ಇದನ್ನು 1972ರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿಷೇಧ ಮಾಡಲಾಗಿತ್ತಾದರೂ ನಂತರ ಅನೇಕ ಬಾರಿ ಹಲವು ದೇಶಗಳು ಯುದ್ಧದ ಸಮಯದಲ್ಲಿ ನಿಯಮವನ್ನು ಉಲ್ಲಂಘಿಸಿವೆ.

ಗಾಜಾ ಗಡಿ ಮೇಲೆ ಹಿಡಿತ ಸಾಧಿಸಿದ ಇಸ್ರೇಲ್‌ಗೆ ಹಮಾಸ್ ಉಗ್ರರ ತಿರುಗೇಟು, ಒತ್ತೆಯಾಳುಗಳ ಹತ್ಯೆ ಬೆದರಿಕೆ!

 

 

click me!