ಹಮಾಸ್‌ ಉಗ್ರರಿಗೆ ಸಮುದ್ರ, ಸುರಂಗ ಮಾರ್ಗದಿಂದ ಶಸ್ತ್ರಾಸ್ತ್ರ ಪೂರೈಕೆ?

By Kannadaprabha News  |  First Published Oct 11, 2023, 7:30 AM IST

ಏಕಾಏಕಿ ಇಸ್ರೇಲ್‌ನಂತಹ ಬೃಹತ್‌ ರಾಷ್ಟ್ರದ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಬೇಕಾದರೆ, ಅವರ ಶಸ್ತ್ರಾಸ್ತ್ರದ ಮೂಲ ಏನು ಎಂಬುದು.  ಆದರೆ ಮೆಡಿಟೇರಿಯನ್‌ ಸಮುದ್ರ ಹಾಗೂ ಸುರಂಗ ಮಾರ್ಗಗಳಿಂದ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲಾಗುತ್ತಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.



ಜೆರುಸಲೇಂ: ಏಕಾಏಕಿ ಇಸ್ರೇಲ್‌ನಂತಹ ಬೃಹತ್‌ ರಾಷ್ಟ್ರದ ಮೇಲೆ ಹಮಾಸ್‌ ಉಗ್ರರು ದಾಳಿ ನಡೆಸಬೇಕಾದರೆ, ಅವರ ಶಸ್ತ್ರಾಸ್ತ್ರದ ಮೂಲ ಏನು ಹಾಗೂ ಅವುಗಳ ಸಂಗ್ರಹಣೆ ಹೇಗೆ ಮಾಡಲಾಗಿದೆ ಎಂಬುದು.  ಆದರೆ ಮೆಡಿಟೇರಿಯನ್‌ ಸಮುದ್ರ ಹಾಗೂ ಸುರಂಗ ಮಾರ್ಗಗಳಿಂದ ಹಮಾಸ್‌ ಉಗ್ರರಿಗೆ ಶಸ್ತ್ರಾಸ್ತ್ರ ಪೂರೈಸಲಾಗುತ್ತಿದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ಗಾಜಾ ಪಟ್ಟಿಯು ಎರಡು ಕಡೆಗಳಲ್ಲಿ ಇಸ್ರೇಲ್‌ನಿಂದ ಸುತ್ತವರೆದಿದ್ದು, ಒಂದು ಬದಿಯಲ್ಲಿ ಈಜಿಪ್ಟ್‌ ಗಡಿ ಇದೆ. ಈ ಎರಡೂ ರಾಷ್ಟ್ರಗಳೂ ಭಾರೀ ತಡೆಬೇಲಿ ಹೊಂದಿದ್ದು, ಇದನ್ನು ದಾಟಿ ಹಮಾಸ್‌ ಉಗ್ರರು ಶಸ್ತ್ರಾಸ್ತ್ರ ಸಂಗ್ರಹಿಸುವುದು ಅಸಾಧ್ಯ. ಆದರೆ ಗಾಜಾ ಪಟ್ಟಿಯ ಒಂದು ಭಾಗ ಸಮುದ್ರ ತೀರವನ್ನು ಹೊಂದಿದೆ. ಈ ಮಾರ್ಗದ ಮೂಲಕ ಇತರ ದೇಶಗಳಿಂದ ಹಮಾಸ್‌ ಉಗ್ರರು ಶಸ್ತ್ರಾಸ್ತ್ರ ಸಂಗ್ರಹಿಸುತ್ತಾರೆ. ಇನ್ನೊಂದೆಡೆ ಸುರಂಗ ಮಾರ್ಗಗಳ ಮೂಲಕವೂ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಲಾಗುತ್ತಿದೆ.

Tap to resize

Latest Videos

ಇಸ್ರೇಲ್‌ನ ವಿರೋಧಿ ರಾಷ್ಟ್ರಗಳಾದ ಇರಾನ್‌ ಮತ್ತು ಸಿರಿಯಾದಂತಹ ರಾಷ್ಟ್ರಗಳು ಈ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿವೆ. ಇನ್ನು  ತಾಲಿಬಾನ್‌, ಅಫ್ಘಾನಿಸ್ತಾನದಿಂದಲೂ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಹಮಾಸ್ ಬಳಿ ಇರುವ 150 ಇಸ್ರೇಲಿ ಒತ್ತೆಯಾಳುಗಳ ಕಥೆ ಏನು?

click me!