ಹಾಲಿವುಡ್‌ ಸ್ಟೈಲಲ್ಲಿ ಭಾರತದ ನೌಕೆ ವಶಕ್ಕೆ ಪಡೆದ ಇರಾನ್: ವೀಡಿಯೋ ಬಿಡುಗಡೆ : ಟ್ರಂಪ್‌ಗೆ ಪರೋಕ್ಷ ಟಾಂಗ್‌?

Published : Apr 24, 2026, 07:28 AM IST
masked Iranian commandos seized India-bound ship in Hormuz

ಸಾರಾಂಶ

ಹೋರ್ಮುಜ್ ಜಲಸಂಧಿಯಲ್ಲಿ ಭಾರತದತ್ತ ಸಾಗುತ್ತಿದ್ದ ನೌಕೆಯನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದು, ಈ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದೆ. ಇದು ಹೋರ್ಮುಜ್ ಮೇಲಿನ ತಮ್ಮ ಹಿಡಿತವನ್ನು ಸಾಬೀತುಪಡಿಸುವ ಇರಾನ್‌ನ ಪ್ರಯತ್ನವೆಂದು ವಿಶ್ಲೇಷಿಸಲಾಗಿದೆ.

ಹಾಲಿವುಡ್‌ ಸ್ಟೈಲಲ್ಲಿ ಭಾರತದ ನೌಕೆ ವಶಕ್ಕೆ ಪಡೆದ ಇರಾನ್

ಟೆಹ್ರಾನ್: ನಿರ್ಬಂಧದ ಹೊರತಾಗಿಯೂ ಹೋರ್ಮುಜ್ ಜಲಸಂಧಿ ದಾಟಿ ಭಾರತದತ್ತ ಹೊರಟಿದ್ದ ನೌಕೆಯನ್ನು ಬುಧವಾರ ವಶಪಡಿಸಿಕೊಂಡಿದ್ದ ಇರಾನ್, ಆ ಕಾರ್ಯಾಚರಣೆಗೆ ಹೇಗಿತ್ತು ಎಂಬುದರ ವಿಡಿಯೋ ಬಿಡುಗಡೆ ಮಾಡಿದೆ. ದುಬೈನಿಂದ ತೈಲ ಹೊತ್ತು ಗುಜರಾತ್‌ ನತ್ತ ತೆರಳುತ್ತಿದ್ದ ಎಪಾಮಿನೊಂಡಾಸ್ ಸೇರಿ 3 ಹಡಗುಗಳು ಎಚ್ಚರಿಕೆ ಧಿಕ್ಕರಿಸಿದಾಗ, ಇರಾನ್‌ನ ಅರಸೇನಾಪಡೆ ಅವುಗಳ ಗುಂಡು ಹಾರಿಸಿ, ಗ್ರೆನೇಡ್ ತೂರಿ ಬಳಿಕ ವಶಕ್ಕೆ ಪಡೆದಿತ್ತು.

ವಿಡಿಯೋದಲ್ಲೇನಿದೆ?: 

ಸಾಗರದಲ್ಲಿ ನಿಂತಿರುವ ಎಂಎಸ್‌ಸಿ-ಫ್ರಾನ್ಸೆಸ್ಕಾ ಎಂಬ ಹಡಗಿನತ್ತ ಸಣ್ಣ ದೋಣಿಯೊಂದು ವೇಗವಾಗಿ ನುಗ್ಗಿ ಬರುತ್ತದೆ. ಬಳಿಕ ಅದರಲ್ಲಿ ಮುಖಕ್ಕೆ ಮಾಸ್ಕ್ ಧರಿಸಿ ಬೆನ್ನಲ್ಲಿ ಬಂದೂಕ ಧರಿಸಿದ್ದ ಐಆರ್‌ಜಿಸಿ ಯೋಧರೆಲ್ಲಾ ಹಾಲಿವುಡ್ ದೃಶ್ಯ ನೆನಪಿಸುವಂತೆ ಏಣಿ ಹಿಡಿದು ನೌಕೆ ಏರತೊಡಗುತ್ತಾರೆ. ಇದೇ ಮಾದರಿಯಲ್ಲಿ ಇನ್ನೊಂದು ಸ್ಪೀಡ್ ಬೋಟ್ ಎಪಾಮಿನೊಂಡಾಸ್‌ನತ್ತ ನುಗ್ಗುತ್ತದೆ ಹಾಗೂ ಯೋಧರು ಅದರ ಒಳಗೆ ಹೊಕ್ಕು, ಎಂಜಿನ್ ಕೋಣೆಯಲ್ಲಿ ಶೋಧ ನಡೆಸುತ್ತಾರೆ. ಬಳಿಕ ಅದರ ಪೂರ್ಣ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ಕೊನೆಗೆ ಆ ಹಡಗುಗಳನ್ನು ಇರಾನ್‌ ದಡಕ್ಕೆ ಕರೆದೊಯಲಾಗುತ್ತದೆ.

ಟ್ರಂಪ್‌ಗೆ ಪರೋಕ್ಷ ಟಾಂಗ್ ?: ಅಧ್ಯಕ್ಷ ಟ್ರಂಪ್‌ ಗೆ ಸವಾಲೆಸೆಯಲು ಇರಾನ್ ಸೇನೆ ಈ ವಿಡಿಯೋ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಕಾರಣ, ಹೋರ್ಮುಜ್‌ನಲ್ಲಿ ದೊಡ್ಡ ದೊಡ್ಡ ಯುದ್ಧನೌಕೆಗಳನ್ನು ತಂದಿಟ್ಟುಕೊಂಡು, ಅದು ನಮ್ಮ ನಿಯಂತ್ರಣದಲ್ಲಿದೆ ಎಂದು ಅಮೆರಿಕ ಬೀಗುತ್ತಿತ್ತು. ಇದಕ್ಕೆ ಟಕ್ಕರ್ ಕೊಡುವಂತೆ ಅದೇ ಪ್ರದೇಶದಲ್ಲಿ 3 ನೌಕೆಗಳನ್ನು ವಶಕ್ಕೆ ಪಡೆಯುವ ಮೂಲಕ, ಹೋರ್ಮುಜ್ ಹಾಗೂ ಅದರ ಮೇಲಿನ ಹಿಡಿತ ನಮ್ಮದು ಎಂದು ಇರಾನ್ ನೆನಪಿಸಿದೆ.

ಇರಾನ್ ನಂಟಿನ ಮತ್ತೊಂದು ಟ್ಯಾಂಕ‌ರ್ ವಶ: ಅಮೆರಿಕ

ದುಬೈ: ತೈಲ ಕಳ್ಳಸಾಗಣೆ ಮಾಡುತ್ತಿದ್ದ ಇರಾನ್‌ನ ಟ್ಯಾಂಕರ್ ಒಂದನ್ನು ಮತ ಪಡಿಸಿಕೊಂಡಿದ್ದಾಗಿ ಅಮೆರಿಕ ಹೇಳಿದೆ. ಹಿಂದೂ ಮಹಾಸಾಗರದಲ್ಲಿ ಮೆಜಿಸ್ಟಿಕ್ ಎಕ್ಸ್‌ನ ಟ್ಯಾಂಕರ್ ಅಮೆರಿಕ ಸೇನೆ ವಶವಾಗಿದೆ. ಆದರೆ ಈ ಬಗ್ಗೆ ಇರಾನ್ ಪ್ರತಿಕ್ರಿಯೆ ನೀಡಿಲ್ಲ. ಬುಧವಾರವಷ್ಟೇ ಹೋರ್ಮುಜ್‌ನಲ್ಲಿ ಅಮೆರಿಕ ಇರಾನ್‌ನ ರೆವೆಲ್ಯೂಷನ್‌ ಗಾರ್ಡ್‌ ಎರಡು ಹಡಗುಗಳನ್ನು ವಶಕ್ಕೆ ಪಡೆದುಕೊಂಡಿತ್ತು.

ಕದನಸ್ಥಗಿತ ವಿಸ್ತರಣೆ: ಇಂದು ಲೆಬನಾನ್-ಇಸ್ರೇಲ್ ಚರ್ಚೆ

ಬೈರೂತ್: ಕದನ ವಿರಾಮ ವಿಸ್ತರಣೆ ಸಾಧ್ಯತೆ ಬಗ್ಗೆ ಚರ್ಚಿಸಲು ಇಸ್ರೇಲ್ ಮತ್ತು ಲೆಬನಾನ್ ಪ್ರತಿನಿಧಿಗಳು ಶುಕ್ರವಾರ ಅಮೆರಿಕದಲ್ಲಿ ಮಾತುಕತೆ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಉಭಯ ದೇಶಗಳ ನಡುವೆ ಘೋಷಣೆ ಆಗಿದ್ದ 10 ದಿನ ಕದನ ವಿರಾಮ ಮುಕ್ತಾಯ ಆಗುತ್ತಿರುವ ಬೆನ್ನಲ್ಲೇ 1 ತಿಂಗಳ ಅವಧಿಗೆ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ. ಇತ್ತೀಚೆಗೆ ನಡೆದ ಮೊದಲ ಮಾತುಕತೆ 30 ವರ್ಷದಲ್ಲೇ ಮೊದಲನೆಯದ್ದು.

ಇದನ್ನೂ ಓದಿ: India Latest News Live: ಕಮರಿದ ಅಮೆರಿಕ ಕನಸು: ಅಮೆರಿಕ ಬಿಡಲು 40% ಭಾರತೀಯರು ಸಿದ್ಧ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

9ನೇ ತಿಂಗಳಲ್ಲಿ ಅಮೆರಿಕಾಗೆ ಬಂದು ಮಗು ಹೆರುತ್ತಾರೆ: ಭಾರತ, ಚೀನಾ ವಲಸಿಗರ ವಿರುದ್ಧ ಟ್ರಂಪ್ ಮತ್ತೆ ಆಕ್ರೋಶ
ನಿಮ್ಮ ಬಾಯಿಗೂ ಟ್ರೈನಿಂಗ್ ಬೇಕು! ಇಂಥದ್ದೊಂದು ಹೇಳಿಕೆ ಕೊಟ್ಟಿದ್ಯಾಕೆ ಹಾಲಿವುಡ್ ಸ್ಟಾರ್ ಪ್ರಿಯಾಂಕಾ ಚೋಪ್ರಾ?!