
ದೇಶಗಳಲ್ಲಿ ಭಾರತೀಯರು ಮಾಡುವ ಕೆಲವು ಕೆಟ್ಟ ಕೆಲಸಗಳು ಇಡೀ ದೇಶದ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾಗುವಂತೆ ಮಾಡುತ್ತದೆ. ಹಾಗೆಯೇ ಇಲ್ಲೊಂದು ಕಡೆ ವಿದೇಶಕ್ಕೆ ಹೋದ ಪ್ರವಾಸಿಗರು ಅಲ್ಲಿ ತಾವು ಉಳಿದಿದ್ದ ಹೊಟೇಲ್‌ನಲ್ಲಿ ಇಟ್ಟಿದ ವಸ್ತುಗಳನ್ನು ಎಬ್ಬಿಸಿ ಬ್ಯಾಗ್‌ಗೆ ತುಂಬಿಸಿಕೊಂಡು ಸಿಕ್ಕಿಬಿದ್ದಿದ್ದಾರೆ. ಇದರಿಂದ ದೇಶದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಪ್ರವಾಸಕ್ಕೆ ಹೋದವರು ಹೊಟೇಲ್‌ನಲ್ಲಿ ಉಳಿದು ವಾಪಸ್ ಹೋಗುವ ವೇಳೆ ಅಲ್ಲಿರುವ ಕೆಲವು ಸೋಪ್‌ಗಳು ಬ್ರಶ್‌ಗಳು ಟೀ ಬ್ಯಾಗ್‌ಗಳನ್ನು ಹೊತ್ತುಕೊಂಡು ಹೋಗುತ್ತಾರೆ. ಅದನ್ನು ಅಲ್ಲಿ ಉಳಿಯುವ ಪ್ರವಾಸಿಗರಿಗಾಗಿಯೇ ಇಡಲಾಗಿದ್ದು, ಅದನ್ನು ತೆಗೆದುಕೊಂಡು ಹೋದರೆ ಹೊಟೇಲ್ ಸಿಬ್ಬಂದಿ ಬೇಸರಿಸುವುದಿಲ್ಲ. ಆದರೆ ಅಲ್ಲಿದ್ದ ದುಬಾರಿ ವಸ್ತುಗಳನ್ನು ಕೂಡ ನೀವು ಬ್ಯಾಗ್‌ಗೆ ತುಂಬಿಕೊಂಡು ಹೋದರೆ ಹೇಗಿರುತ್ತದೆ. ಇಲ್ಲೊಂದು ಕಡೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಹೋದ ಭಾರತೀಯ ಪ್ರವಾಸಿಗರು ಅಲ್ಲಿಂದ ಕೆಲವು ಅಮೂಲ್ಯವಾದ ವಸ್ತುಗಳನ್ನು ಬ್ಯಾಗ್‌ಗೆ ತುಂಬಿಕೊಂಡು ಹೊರಟಿದ್ದಾರೆ. ಇದನ್ನು ಹೊಟೇಲ್ ಸಿಬ್ಬಂದಿ ಗಮನಿಸಿದ್ದು ಅವರನ್ನು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಬಾಲಿಟೈಮ್ಸ್ ವರದಿಯ ಪ್ರಕಾರ ಏಪ್ರಿಲ್ 19ರಂದು ಈ ಘಟನೆ ನಡೆದಿದೆ. ಉಬುದ್‌ನ ಅಸ್ವಾರ ರೆಸಾರ್ಟ್‌ನಲ್ಲಿ ನಾಲ್ವರು ಭಾರತೀಯ ಪ್ರವಾಸಿಗರು ಏಪ್ರಿಲ್ 16ರಂದು ಆ ರೆಸಾರ್ಟ್‌ನ ಹೊಟೇಲ್‌ಗೆ ಬಂದಿದ್ದರು. ಆದರೆ ಅವರು ಏಪ್ರಿಲ್ 19ರಂದು ಅಲ್ಲಿಂದ ಹೊರಟಾಗ ಅವರು ತಂಗಿದ್ದ ಕೊಠಡಿಯನ್ನು ಗಮನಿಸಿದ ಹೊಟೇಲ್ ಸಿಬ್ಬಂದಿಗೆ ಶಾಕ್ ಅಗಿತ್ತು. ಅಲ್ಲಿದ್ದ ಹಲವು ವಸ್ತುಗಳು ನಾಪತ್ತೆಯಾಗಿದ್ದವು.
ಇದನ್ನೂ ಓದಿ: ಮನೆಯಲ್ಲೇ IRS ಅಧಿಕಾರಿ ಪುತ್ರಿ ಕೊಲೆ ಪ್ರಕರಣ: ಆರೋಪಿ ಮನೆ ಕೆಲಸದವನ ಬಂಧನ: ಹಲವು ಸ್ಫೋಟಕ ವಿಚಾರ ಬೆಳಕಿಗೆ
ಹೀಗಾಗಿ ಹೊಟೇಲ್ ಸಿಬ್ಬಂದಿ ಅತಿಥಿಗಳ ಬ್ಯಾಗನ್ನು ಚೆಕ್ ಮಾಡಿದಾಗ ಅದರಲ್ಲಿ ಸ್ನಾನ ಮಾಡುವ ಟವೆಲ್‌ಗಳು, ಹೇರ್ ಡ್ರಯರ್‌ಗಳು, ಡೋರ್‌ಮ್ಯಾಟ್‌ಗಳು, ಟಿವಿ ರಿಮೋಟ್ ಬಾಕ್ಸ್‌ಗಳು, ಸ್ನಾನ ಮಾಡಿದ ನಂತರ ಧರಿಸುವ ಬಟ್ಟೆ, ಟಿವಿ, ರಿಮೋಟ್ ಬಾಕ್ಸ್, ಊಟ ಮಾಡುವ ಪಾತ್ರೆಗಳು ಕಂಡು ಬಂದಿದೆ. ಇದರಿಂದ ಆತಂಕಗೊಂಡ ಹೊಟೇಲ್ ಸಿಬ್ಬಂದಿ ಚೆಕ್ಔಟ್ ಪ್ರಕ್ರಿಯೆಯನ್ನು ಆ ಕ್ಷಣದಲ್ಲಿ ತಡೆದಿದ್ದು, ಅತಿಥಿಗಳ ಬ್ಯಾಗನ್ನು ಮತ್ತಷ್ಟು ತಪಾಸಣೆ ಮಾಡುವುದಕ್ಕೆ ತೊಡಗಿದ್ದಾರೆ.
ಪರಿಸ್ಥಿತಿಯ ಗಂಭೀರತೆಯ ಹೊರತಾಗಿಯೂ ಹೊಟೇಲ್ ಸ್ಟಾಪ್ ಕಾನೂನು ಕ್ರಮ ಕೈಗೊಳ್ಳುವ ಬದಲು ಪರಸ್ಪರ ಒಪ್ಪಂದಗಳ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾದರು ಎಂದು ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪೊಲೀಸರು ಹೇಳಿದ್ದಾರೆ. ತಾವು ಬ್ಯಾಗ್‌ಗೆ ತುಂಬಿಸಿಕೊಂಡಿದ್ದ ಹೊಟೇಲ್‌ನ ಎಲ್ಲಾ ವಸ್ತುಗಳನ್ನು ಪ್ರವಾಸಿಗರು ಹೊಟೇಲ್ ಸಿಬ್ಬಂದಿಗೆ ಹಿಂದಿರುಗಿಸಲು ಮುಂದಾದರು ಹೀಗಾಗಿ ಹೊಟೇಲ್ ಸಿಬ್ಬಂದಿ ಅವರ ವಿರುದ್ಧ ಕೇಸ್ ದಾಖಲಿಸದೇ ಅವರನ್ನು ಬಿಟ್ಟು ಕಳುಹಿಸಿತು.
ಆದರೆ ಈ ಘಟನೆಯ ವೀಡಿಯೋ ಭಾರಿ ವೈರಲ್ ಆಗಿದ್ದು, ಭಾರತೀಯ ಪ್ರವಾಸಿಗರ ಈ ನಾಚಿಕೆಗೇಡಿನ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಸೇರಿದಂತೆ ಅನೇಕ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರ ಈ ವರ್ತನೆಯಿಂದಾಗಿ ಭಾರತದ ಘನತೆಗೆ ವಿದೇಶದಲ್ಲಿ ಧಕ್ಕೆಯಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು, ಇವರಿಗೆ ವಿದೇಶ ಪ್ರವಾಸಕ್ಕೆ ಹೋಗುವುದಕ್ಕೆ ಕಾಸಿದೆ ಆದರೆ ಸ್ಪೂನ್ ಟವೆಲ್ ಖರೀದಿಸಲು ದುಡ್ಡು ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ನೋಡಿ ತೀವ್ರ ಮುಜುಗರ ಆಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಒಬ್ಬರು ಇವರು ಹಾಸಿಗೆ ಹಾಗೂ ನೆಲಹಾಸು ಟೈಲ್ಸ್‌ನ್ನು ಏಕೆ ಬಿಟ್ಟು ಹೋಗಿದ್ದಾರೆ ಎಂದು ಹಾಸ್ಯಮಯವಾಗಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ ಬ್ರೇಕ್ ಫೇಲ್ ಆಗಿ ಬೊಲೆರೋಗೆ ಡಿಕ್ಕಿ: 11 ಜನರ ದಾರುಣ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ