ಮಂಗಳೂರು ಹಡಗು ಮೇಲೆ ನಾವು ದಾಳಿ ಮಾಡಿಲ್ಲ, ಅಮೆರಿಕ ಆರೋಪ ಸುಳ್ಳು: ಇರಾನ್‌ ಸ್ಪಷ್ಟನೆ

Published : Dec 26, 2023, 11:53 AM ISTUpdated : Dec 26, 2023, 11:54 AM IST
ಮಂಗಳೂರು ಹಡಗು ಮೇಲೆ ನಾವು ದಾಳಿ ಮಾಡಿಲ್ಲ, ಅಮೆರಿಕ ಆರೋಪ ಸುಳ್ಳು: ಇರಾನ್‌ ಸ್ಪಷ್ಟನೆ

ಸಾರಾಂಶ

ಸೌದಿ ಅರೇಬಿಯಾದಿಂದ ತೈಲ ತುಂಬಿಸಿಕೊಂಡು ಮಂಗಳೂರಿಗೆ ಹೊರಟಿದ್ದ ‘ಚೆಮ್‌ ಪ್ಲುಟೊ’ ಹಡಗಿನ ಮೇಲೆ ಇರಾನ್‌ ಡ್ರೋನ್‌ ದಾಳಿ ಮಾಡಿದೆ ಎಂದು ಅಮೆರಿಕದ ಪೆಂಟಗನ್‌ ಮಾಡಿದ್ದ ಆರೋಪವನ್ನು ಇರಾನ್‌ ಸ್ಪಷ್ಟವಾಗಿ ತಳ್ಳಿಹಾಕಿದೆ.

ನವದೆಹಲಿ (ಡಿ.26): ಸೌದಿ ಅರೇಬಿಯಾದಿಂದ ತೈಲ ತುಂಬಿಸಿಕೊಂಡು ಮಂಗಳೂರಿಗೆ ಹೊರಟಿದ್ದ ‘ಚೆಮ್‌ ಪ್ಲುಟೊ’ ಹಡಗಿನ ಮೇಲೆ ಇರಾನ್‌ ಡ್ರೋನ್‌ ದಾಳಿ ಮಾಡಿದೆ ಎಂದು ಅಮೆರಿಕದ ಪೆಂಟಗನ್‌ ಮಾಡಿದ್ದ ಆರೋಪವನ್ನು ಇರಾನ್‌ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇರಾನ್‌ನ ವಿದೇಶಾಂಗ ಇಲಾಖೆ ‘ಅಮೆರಿಕ ಮಾಡಿರುವ ಆರೋಪ ಆಧಾರರಹಿತವಾಗಿದ್ದು, ಆ ದಾಳಿಗೂ ನಮಗೂ ಸಂಬಂಧವಿಲ್ಲ’ ಎಂದು ಉತ್ತರಿಸಿದ್ದಾರೆ.

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ನಡೆದ ಡ್ರೋನ್‌ ದಾಳಿಯ ಹಿಂದೆ ಇರಾನ್‌ ಕೈವಾಡವಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಫೋಟಕ ಹೇಳಿಕೆ ನೀಡಿತ್ತು. ಗುಜರಾತ್‌ನಿಂದ 200 ಕಿ.ಮೀ. ದೂರದ ಅಂತಾರಾಷ್ಟ್ರೀಯ ಸಮುದ್ರದ ವಲಯದಲ್ಲಿ ಭಾರತಕ್ಕೆ ಬರುತ್ತಿದ್ದ ಲೈಬೀರಿಯಾದ ‘ಚೆಮ್‌ ಪ್ಲೂಟೋ’ ಹಡಗಿನ ಮೇಲೆ ನಿಗೂಢ ದಾಳಿ ನಡೆದಿತ್ತು. ಈ ಹಡಗು ಸೌದಿಯಿಂದ ನವ ಬಂಗಳೂರು ಬಂದರಿಗೆ ತೈಲ ಹೊತ್ತು ತರುತ್ತಿತ್ತು. ಈ ವೇಳೆ ಹಡಗಿಗೆ ಬೆಂಕಿ ಹೊತ್ತಿಕೊಂಡರೂ ಅದನ್ನು ಕೆಲವೇ ಕ್ಷಣಗಳಲ್ಲಿ ಶಮನ ಮಾಡಲಾಗಿತ್ತು. ದಾಳಿ ಮಾಡಿದ್ಯಾರು ಎಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ಭಾನುವಾರ ಅಮೆರಿಕ ವಿದೇಶಾಂಗ ವಕ್ತಾರರು ಹೇಳಿಕೆ ನೀಡಿ, ‘ಚೆಮ್‌ ಪ್ಲೂಟೋ’ ಹಡಗಿನ ಮೇಲೆ ಡ್ರೋನ್‌ ಹಾರಿ ಬಂದಿದ್ದು ಇರಾನ್‌ನಿಂದ’ ಎಂದಿದ್ದರು. ಆದರೆ ಈ ಎಲ್ಲಾ ಆರೋಪವನ್ನು ಇರಾನ್‌ ತಳ್ಳಿ ಹಾಕಿದೆ.

ಎಬಿಪಿ ನ್ಯೂಸ್‌ ಸಮೀಕ್ಷಾ ವರದಿ , ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಮರಳಿ ಅಧಿಕಾರಕ್ಕೆ

ಶನಿವಾರ ಕೂಡ ದಾಳಿ: ಇನ್ನು ಕೆಂಪು ಸಮುದ್ರದಲ್ಲಿ ಬರುತ್ತಿದ್ದ ಭಾರತದ ಕಚ್ಚಾತೈಲ ಹಡಗು ‘ಎಂವಿ ಸಾಯಿಬಾಬಾ’ ಸೇರಿಸಂತೆ ಸೇರಿದಂತೆ 2 ಹಡಗುಗಳ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ಡ್ರೋನ್‌ ದಾಳಿ ನಡೆಸಿದ್ದಾರೆ.

ಡಿಸೆಂಬರ್ 23ರಂದು (ಶನಿವಾರ) ದಕ್ಷಿಣ ಕೆಂಪು ಸಮುದ್ರದಲ್ಲಿನ ಅಂತರರಾಷ್ಟ್ರೀಯ ಹಡಗು ಮಾರ್ಗದಲ್ಲಿ ಈ ಹಡಗುಗಳು ಸಾಗುತ್ತಿದ್ದವು. ಆಗ ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶಗಳಿಂದ ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದ್ದಾರೆ. ಆದರೆ ಈ ಕ್ಷಿಪಣಿಗಳಿಂದ ಹಡಗುಗಳಿಗೆ ಯಾವುದೇ ಹಾನಿ ಆಗಿಲ್ಲ. ಯಾರಿಗೂ ಗಾಯಗಳಾಗಿಲ್ಲ. ಭಾರತದ ಸಾಯಿಬಾಬಾ ಹಡಗಿನಲ್ಲಿದ್ದ ಎಲ್ಲ 25 ಭಾರತೀಯ ಹಡಗು ಸಿಬ್ಬಂದಿ ಪಾರಾಗಿದ್ದಾರೆ ಎಂದು ಭಾರತದ ಸೇನಾಪಡೆ ಹಾಗೂ ಅಮೆರಿಕ ಸೆಂಟ್ರಲ್‌ ಕಮಾಂಡ್‌ಗಳ ಪ್ರತ್ಯೇಕ ಹೇಳಿಕೆಗಳು ತಿಳಿಸಿವೆ.

ಇದಲ್ಲದೆ ದಾಳಿಯ ಸೂಚನೆ ಅರಿತು, ಇದೇ ಸಮುದ್ರದಲ್ಲಿ ಕಣ್ಗಾವಲು ಕಾಯುತ್ತಿದ್ದ ಅಮೆರಿಕದ ‘ಯುಎಸ್ಎಸ್‌ ಲಬೂನ್‌’ ನೌಕಾಪಡೆ ಹಡಗು ಸ್ಥಳಕ್ಕೆ ಧಾವಿಸಿ ಯೆಮೆನ್‌ ಕಡೆಯಿಂದ ಬಂದ 4 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಶನಿವಾರ ರಾತ್ರಿ ಮಧ್ಯಾಹ್ನ 3 ಮತ್ತು 8 ಗಂಟೆಯ ನಡುವೆ (ಯೆಮೆನ್‌ ಸಮಯ) 2 ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಪ್ರಧಾನಿ ಸ್ಥಾನಕ್ಕೆ ಖರ್ಗೆ ಹೆಸರಿಗೆ ನನ್ನ ತಕರಾರಿಲ್ಲ, ನನಗೆ ಇಂಡಿಯಾ ಕೂಟದ ಸಂಚಾಲಕ ಹುದ್ದೆಯೂ ಬೇಡ: ನಿತೀಶ್‌ ಕುಮಾರ್

ಮೊದಲಿಗೆ ನಾರ್ವೆ ಧ್ವಜ ಹೊಂದಿದ್ದ ‘ಎಂವಿ ಬ್ಲಾಮಾನೆನ್‌’ ಹೆಸರಿನ ರಾಸಾಯನಿಕ/ತೈಲ ಟ್ಯಾಂಕರ್‌ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಆಗ ಕೂದಲೆಳೆ ಅಂತರದಲ್ಲಿ ಬ್ಲಾಮಾನೆನ್‌ ಹಡಗು ಪಾರಾಗಿದೆ.

ಬಳಿಕ ಗ್ಯಾಬೋನ್‌ ದೇಶದ ಒಡೆತನಕ್ಕೆ ಸೇರಿದ, ಆದರೆ ಭಾರತದಲ್ಲಿ ನೋಂದಣಿ ಆಗಿರುವ ಭಾರತೀಯ ಧ್ವಜ ಹೊಂದಿದ ನೌಕೆಯಾದ ‘ಎಂವಿ ಸಾಯಿಬಾಬಾ’ ಮೇಲೆ ಕ್ಷಿಪಣಿ ದಾಳಿ ನಡೆದಿದೆ. ಆದರೆ ಸಾಯಿಬಾಬಾ ಹಡಗಿನಲ್ಲಿರುವ ಯಾರಿಗೂ ಗಾಯಗಳಾಗಿಲ್ಲ.

ಈ ವೇಳೆ, ಯೆಮೆನ್‌ ಕಾಲಮಾನ ರಾತ್ರಿ 8 ಗಂಟೆ (ಯೆಮೆನ್‌ ಸಮಯ) ಸುಮಾರಿಗೆ, ಯುಎಸ್ ನೌಕಾಪಡೆಯ ಸೆಂಟ್ರಲ್ ಕಮಾಂಡ್, ದಕ್ಷಿಣ ಕೆಂಪು ಸಮುದ್ರದಲ್ಲಿನ ಎರಡು ಹಡಗುಗಳು ದಾಳಿಗೆ ಒಳಗಾಗಿವೆ ಎಂಬ ಮಾಹಿತಿ ಲಭಿಸಿದೆ. ಕೂಡಲೇ ಅದು, ಈ ವಲಯದಲ್ಲೇ ಗಸ್ತು ನಡೆಸುತ್ತಿದ್ದ ತನ್ನ ‘ಯುಎಸ್ಎಸ್‌ ಲಬೂನ್‌’ ಹೆಸರಿನ ನೌಕಾಪಡೆ ಹಡಗನ್ನು ಘಟನಾ ಸ್ಥಳಕ್ಕೆ ಕಳಿಸಿದೆ. ಆಗ ಲಬೂನ್‌ ನೌಕೆಯು ಯೆಮೆನ್‌ನ ಹೌತಿ ನಿಯಂತ್ರಿತ ಪ್ರದೇಶಗಳಿಂದ ಬಂದ 4 ಮಾನವರಹಿತ ವೈಮಾನಿಕ ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

ಈ ದಾಳಿಗಳು ಅ.17ರಂದು ಹೌತಿ ಉಗ್ರಗಾಮಿಗಳು ನಡೆಸಿದ ಹಡಗುಗಳ ಮೇಲಿನ ನಡೆದ ದಾಳಿಯನ್ನೇ ಹೋಲುತ್ತವೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿದೆ. ಇಸ್ರೇಲ್-ಹಮಾಸ್ ಸಂಘರ್ಷ ನಡೆಯುತ್ತಿರುವ ನಡುವೆ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿಯನ್ನು ಹೆಚ್ಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ