
ಸೌದಿ ಅರೇಬಿಯಾ: ಬರೋಬ್ಬರಿ ಆರು ತಿಂಗಳು ನಿದ್ದೆ ಮಾಡಿದ ಕುಂಭಕರ್ಣನ ಕತೆ ನಮಗೆ ಗೊತ್ತು, ಆದರೆ ಕಳೆದ 30 ವರ್ಷಗಳಿಂದ ತುಸುವೂ ನಿದ್ದೆಯೇ ಮಾಡದ ವ್ಯಕ್ತಿಯ ಬಗ್ಗೆ ಕೇಳಿದ್ದೀರಾ? ಅಚ್ಚರಿ ಆದರೂ ಈ ವಿಚಾರ ಸತ್ಯ. ಸೌದಿಯ 70 ವರ್ಷದ ವೃದ್ಧರೊಬ್ಬರಿಗೆ ಕಳೆದ 70 ವರ್ಷಗಳಿಂದ ನಿದ್ರೆ ಎಂದರೆ ಏನು ಎಂಬುದೇ ತಿಳಿಯದಾಗಿದೆ. ಈತನ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೈದ್ಯರು ಕೂಡ ಈತನ ನಿದ್ರಾ ಹೀನತೆಗೆ ಕಾರಣ ಹುಡುಕಲು ಪರದಾಡುತ್ತಿದ್ದಾರೆ.
ಸೌದ್ ಬಿನ್ ಮುಹಮ್ಮದ್ ಅಲ್-ಘಮ್ದಿ (Saud Bin Muhammad Al-Ghamdi) ಎಂಬ 70 ರ ಇಳಿ ವಯಸ್ಸಿನ ವೃದ್ಧನಿಗೆ ನಿದ್ರೆ ಬರುವಂತೆ ಮಾಡಲು ವೈದ್ಯರು ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಈತನ ವಿಚಾರವೂ ಅನೇಕರಲ್ಲಿ ಧಿಗ್ಬ್ರಮೆ ಹುಟ್ಟಿಸಿದೆ. ಅನೇಕರು ಆತನನ್ನು ಅಚ್ಚರಿಯಿಂದ ಕುತೂಹಲದಿಂದ ನೋಡಲು ಶುರು ಮಾಡಿದ್ದಾರೆ ಎಂದು ಸ್ವತಃ ಮೊಹಮ್ಮದ್ ಅಲ್ ಘಮ್ಡಿ ಹೇಳಿಕೊಂಡಿದ್ದಾರೆ.
ಮಾನವನಿಗೆ ಊಟ ನೀರು ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ನಿದ್ದೆ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಶಕ್ತಿಯನ್ನು ತುಂಬಲು ಅಗತ್ಯವಾದ ಸಮಯ ನಿದ್ದೆ. ರಾತ್ರಿ ಮಲಗಿದವರು ಮರುದಿನ ಬೆಳಗ್ಗೆ ಎದ್ದಾಗ ಒಂದು ರೀತಿಯ ಸಾಮಾಧಾನ ತಾಜಾತನವನ್ನು ಅನುಭವಿಸುತ್ತಾರೆ. ಆದರೆ ನಿದ್ದೆಗೆಡುವುದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ರೆ ಮಾಡದಿದ್ದರೆ ಕೆಲವು ಆಘಾತಕಾರಿ ನಕಾರಾತ್ಮಕ ಫಲಿತಾಂಶಗಳು ದೇಹದ ಮೇಲಾಗುವ ಸಾಧ್ಯತೆಗಳಿವೆ. ಹೀಗಿರುವಾಗ ಕಳೆದ 30 ವರ್ಷಗಳಿಂದ ನಿದ್ರೆಯನ್ನೇ ಕಾಣದ ಮೊಹಮ್ಮದ್ ಕತೆ ಏನಾಗಬೇಡ,
ಮೊಹಮ್ಮದ್ ಕೂಡ ನಿದ್ದೆ ಬಾರದ ತನ್ನ ಸ್ಥಿತಿಗೆ ಕಾರಣ ಏನಿರಬಹುದು ಎಂದು ತಿಳಿದುಕೊಳ್ಳಲು ಹಲವು ಪ್ರಯತ್ನ ಮಾಡಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ನಿದ್ರೆ ಬಾರದ ಸ್ಥಿತಿ ಆತನಿಗೆ ಕೆಲವೊಮ್ಮೆ ಬಹಳ ಕಿರಿಕಿರಿ ಉಂಟು ಮಾಡುತ್ತಿದೆಯಂತೆ. ಅಲ್ ಬಹಾದ ನಿವಾಸಿಯಾಗಿರುವ ಮುಹಮ್ಮದ್ ಅಲ್ ಘಮ್ದಿ 2018ರಲ್ಲಿ ಒಮ್ಮೆ ತನ್ನ ಈ ಆರೋಗ್ಯ ಸಮಸ್ಯೆಯನ್ನು ಮೊದಲ ಬಾರಿ ಟಿವಿ ಮಾಧ್ಯಮಗಳ ಮುಂದೆ ಹೇಳಿಕೊಂಡ ನಂತರ ಭಾರಿ ಸುದ್ದಿಯಾಗಿದ್ದರು.
ಸಣ್ಣ ಶಬ್ಧವಾದರೂ ಎಚ್ಚರವಾಗುತ್ತಾ, ನಿಮ್ಮ ನಿದ್ರೆಗೆ ನಿದ್ರೆಯೇ ಆಗಬಹುದು ಅಡ್ಡಿ!?
ಇತ್ತೀಚೆಗೆ ಟಿವಿಯಲ್ಲಿ ಅವರ ಮತ್ತೊಂದು ಸಂದರ್ಶನ ಪ್ರಸಾರವಾದ ಬಳಿಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದಾರೆ.'ಎಂಬಿಸಿ ಇನ್ ಎ ವೀಕ್' ಎಂಬ ಕಾರ್ಯಕ್ರಮದಲ್ಲಿ ಅವರು ತಾನು ಕಳೆದ 30 ವರ್ಷಗಳಿಂದ ನಿದ್ದೆಯೇ ಇಲ್ಲದೇ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಗಂತ ನಾನು ಮಾನಸಿಕವಾಗಿ ಅಸ್ವಸ್ಥನಾಗಿಯೋ ಹುಚ್ಚನಾಗಿಯೋ ಇಲ್ಲ, ಕೇವಲ ನಿದ್ರೆ ಬಾರದ ಓರ್ವ ಮನುಷ್ಯನಾಗಿ ನಾನಿದ್ದೇನೆ. ಎಲ್ಲರಂತೆ ನಿದ್ರೆ ಮಾಡುವ ಅದೃಷ್ಟ ನನಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಮಿಲಿಟರಿ ಕ್ಷೇತ್ರದಲ್ಲಿ (military field) ಕೆಲಸ ಮಾಡಿದ ಅಲ್-ಘಮ್ಡಿ ಅವರಿಗೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಆರಂಭಿಕ ವರ್ಷಗಳಲ್ಲಿ, ಕಾರ್ಯಾಚರಣೆಯೊಂದರ ಕಾರಣಕ್ಕೆ ಮೊದಲ ಬಾರಿ 20 ದಿನಗಳು ನಿದ್ದೆ ಇಲ್ಲದೇ ಕಳೆದಿದ್ದೆ ಎಂಬುದನ್ನು ನೆನಪಿಸಿಕೊಂಡರು. ಇದಾದ ಬಳಿಕ ನಂತರವ ವರ್ಷಗಳಲ್ಲಿ ಅವರ ಜೀವನದಲ್ಲಿ ನಿದ್ರೆ ಇಲ್ಲದ ಸಮಸ್ಯೆ ಶುರುವಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಈ ಸ್ಥಿತಿಗೆ ಕಾರಣ ಪತ್ತೆ ಮಾಡಲು ಘಮ್ಡಿ ಹಲವು ಆಸ್ಪತ್ರೆಗಳಿಗೆ (hospital) ಅಲೆದಿದ್ದಾರೆ. ಅಲ್ಲದೇ ಅಲ್ಲಿನ ವೈದ್ಯರು ಅವರಿಗೆ ಅನೇಕ ಚಿಕಿತ್ಸೆಗಳನ್ನು ಕೂಡ ಮಾಡಿದ್ದಾರೆ. ಆದರೆ ಅದ್ಯಾವುದು ಪ್ರಯೋಜನಕ್ಕೆ ಬಂದಿಲ್ಲ, ನಿದ್ರೆಯೇ ಇಲ್ಲದ ಕಾರಣದಿಂದಾಗಿ ಆತಂಕ (anxiety) ಹಾಗೂ ಅಸ್ವಸ್ಥತೆಯ ಆತಂಕವನ್ನು ಅವರು ಅನುಭವಿಸುತ್ತಿರುವುದಾಗಿ ಘಮ್ಡಿ ಹೇಳಿಕೊಂಡಿದ್ದಾರೆ.
ಕೆಲವು ವೈದ್ಯರು ಇವರ ಈ ಸ್ಥಿತಿಯನ್ನು ಮಾನಸಿಕ ಖಿನ್ನತೆ ಎಂದು ಗುರುತಿಸಿ ಚಿಕಿತ್ಸೆ (treatments) ಪಡೆಯಲು ಸೂಚಿಸಿದರು. ಆದರೆ ಅದು ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಲಿಲ್ಲ ಎಂದು ಘಮ್ಡಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚಿಸಲು ಅವರು ಹಲವು ಶೇಕ್‌ಗಳನ್ನು ಭೇಟಿಯಾದರು ಆದರೆ ಅವರಿಗೆ ಪರಿಹಾರದ ಭರವಸೆ ಸಿಕ್ಕಿರಲಿಲ್ಲ. ಈ ವಿಚಾರ ತಿಳಿದ ಅನೇಕರು ಅಚ್ಚರಿ ಪಟ್ಟರೆ ಮತ್ತೆ ಕೆಲವರು ಇದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಮನುಷ್ಯ ನಿದ್ದೆಯೇ ಮಾಡದೆ ಎಷ್ಟು ದಿನ ಬದುಕಬಹುದು ಗೊತ್ತಾ?
ಈ ಮನುಷ್ಯನನ್ನು ತಿಳಿದಿರುವವನು, ಆತನಿಗೆ ಸಕ್ಕರೆ ತಿನ್ನುವುದನ್ನು ಮತ್ತು ಚಹಾವನ್ನು ಕುಡಿಯುವುದನ್ನು ನಿಲ್ಲಿಸಲು ಹೇಳಿ ಎಂದು ಓರ್ವ ಸಾಮಾಜಿಕ ಜಾಲತಾಣಿಗರು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಈ ಸಮಸ್ಯೆಯನ್ನು ದೇವರೆ ಪರಿಹರಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಆತನನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಚಿಕಿತ್ಸೆಗೆ (medical treatment) ಕಳುಹಿಸುವಂತೆ ಸಲಹೆ ನೀಡಿದ್ದಾರೆ. ಈ ವಿಚಾರವೀಗ ಸೌದಿಯ ಸಾಮಾಜಿಕ ಜಾಲತಾಣಗಳಲ್ಲಿ (social networking sites) ಸಂಚಲನ ಸೃಷ್ಟಿಸಿದೆಯಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ