ಹಲಾಲ್ ಪ್ರಮಾಣೀಕೃತ ಕೊರೋನಾ ಲಸಿಕೆಗೆ ಮಾತ್ರ ಇಂಡೋನೇಷ್ಯಾದಲ್ಲಿ ಅವಕಾಶ!

By Suvarna News  |  First Published Dec 8, 2020, 6:24 PM IST

ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೋನಾ ಲಸಿಕೆಗಾಗಿ ಕಾಯುತ್ತಿದೆ. ಅಷ್ಟರ ಮಟ್ಟಿಗೆ ಕೊರೋನಾ ವರೈಸ್ ಆರ್ಭಟಿಸುತ್ತಿದೆ. ಇದೀಗ ಇಂಗ್ಲೆಂಡ್ ಸೇರಿದಂತೆ ಕೆಲ ದೇಶಗಳಲ್ಲಿ ಕೊರೋನಾ ಲಸಿಕೆ ನೀಡುವಿಕೆ ಆರಂಭಗೊಂಡಿದೆ. ಆದರೆ ಇಂಡೋನೇಷ್ಯಾ ಹಲಾಲ್ ಪ್ರಮಾಣೀಕೃತ ಲಸಿಕೆಗೆ ಮಾತ್ರ ಅವಕಾಶ ಎಂದಿದೆ.


ಇಂಡೋನೇಷ್ಯಾ(ಡಿ.08)  ಬಹುತೇಕ ಎಲ್ಲಾ ದೇಶದಲ್ಲಿ ಕೊರೋನಾ ಲಸಿಕೆ ಪ್ರಯೋಗ ನಡೆಯುತ್ತಿದೆ. ಪ್ರಾಯೋಗಿಕ ಹಂತದಲ್ಲಿ ಬಹಳ ಎಚ್ಚರಿಕೆ ವಹಿಸಲಾಗುತ್ತಿದೆ. ಭಾರತದಲ್ಲಿ ಬಹುತೇಕ ಲಸಿಕೆಗಳು ಅಂತಿಮ ಹಂತದ ಪ್ರಯೋಗದಲ್ಲಿದೆ. ಇತ್ತ ಇಂಡೇನೇಷ್ಯಾದಲ್ಲೂ ಲಸಿಕೆ ಪ್ರಯೋಗ ನಡೆಯುತ್ತಿದೆ. ಇದೀಗ ಚೀನಾದ ಸೈನೋವಾಕ್ ಬಯೋಟೆಕ್ ಫಾರ್ಮ್ ಅಭಿವೃದ್ಧಿಪಡಿಸಿದ ಕೊರೋನಾ ಲಸಿಕೆ ಪ್ರಯೋಗಕ್ಕೆ ಇಂಡೋನೇಷ್ಯಾ ಹಲಾಲ್ ಪ್ರಮಾಣೀಕರಣ ಕೇಳಿದೆ.

Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

Latest Videos

undefined

ಇಂಡೋನೇಷ್ಯಾದ ಮುಸ್ಲಿಂ ಧಾರ್ಮಿಕ ಸಂಸ್ಥೆ ಈ ಪ್ರಕಟಣೆ ಹೊರಡಿಸಿದೆ. ಸೈನೋವಾಕ್ ಬಯೋಟೆಕ್ ಸಂಸ್ಥೆ ಕೊರೋನಾ ಲಸಿಕೆ ಪ್ರಯೋಗ ಮಾಡಲು ಈ ಲಸಿಕೆ ಹಲಾಲ್ ಪ್ರಮಾಣೀಕೃತ ಕಡ್ಡಾಯವಾಗಿ ನೀಡಬೇಕು ಎಂದು ಮುಸ್ಲಿಂ ಕ್ಲರಿಕಲ್ ಸಂಸ್ಥಗೆ ಸೂಚಿಸಿದೆ. ಇದರಂತೆ ಸೈನೋವಾಕ್ ಹಲಾಲ್ ಪ್ರಮಾಣೀಕೃತ ಪತ್ರ ಇಂಡೋನೇಷ್ಯಾಗೆ ನೀಡಿದೆ.

ಹಲಾಲ್ ಪ್ರಮಾಣೀಕೃತ ಪತ್ರದ ಕುರಿತು ಇಂಡೋನೇಷ್ಯಾ ಸಚಿವ ಮುಹಾಜಿರ್ ಎಫನ್ಡಿ ಮಾಹಿತಿ ನೀಡಿದ್ದಾರೆ. ಹಲಾಲ್ ಕುರಿತ ದಾಖೆಲೆಗಳನ್ನು ಸಲ್ಲಿಸಲಾಗಿದೆ ಎಂದಿದ್ದಾರೆ. ಇಂಡೋನೇಷಿಯಾದಲ್ಲಿ ಕೊರೋನಾ ಲಸಿಕೆ ಮಾತ್ರವಲ್ಲ, ಯಾವುದೇ ಲಸಿಕೆ ಹಾಗೂ ಔಷಧಿಗಳ  ಬಳಕೆಗೆ ಹಲಾಲ್ ಪ್ರಮಾಣೀಕೃತ ಪತ್ರ ಅಗತ್ಯವಾಗಿದೆ.

ಸೈನೋವಾಕ್ ಬಯೋಟೆಕ್ ಲಸಿಕೆ ಚೀನಾದಲ್ಲಿ ವಿತರಣೆ ನಡೆಯುತ್ತಿದೆ. ಇಂಡೋನೇಷ್ಯಾದಲ್ಲಿ ಇನ್ನಷ್ಟೇ ವಿತರಣೆ ಆರಂಭಗೊಳ್ಳಬೇಕಿದೆ. ಇದಕ್ಕಾಗಿ 10 ಲಕ್ಷ ಡೊಸೇಜ್ ಆಮದು ಮಾಡಿಕೊಳ್ಳಲಾಗಿದೆ. 

click me!