ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!

By Suvarna News  |  First Published Dec 8, 2020, 4:21 PM IST

ಕೊರೋನಾ ವಿರುದ್ದ ಬ್ರಿಟನಲ್ಲಿ ಲಸಿಕೆ  ಆರಂಭ| ವಿಶ್ವದ ಮೊದಲ ಕೊರೋನಾ ಲಸಿಕೆ ಪಡೆದ ಮಾರ್ಗರೆಟ್| 90 ವರ್ಷದ ವೃದ್ಧೆಗೆ ವಿಶ್ವದ ಮೊದಲ ಫೈಝರ್ ಲಸಿಕೆ


ಲಂಡನ್(ಡಿ.08): ಕೊರೋನಾ ಮಹಾಮಾರಿ ವಿರುದ್ಧ ಹೋರಾಟವಾಗಿ ಸದ್ಯ ಲಸಿಕೆ ನೀಡುವ ಹಂತ ಆರಂಭಗೊಂಡಿದೆ. ‌ಬ್ರಿಟನಿನ 90 ವರ್ಷದ ಮಹಿಳೆ ಮಾರ್ಗರೆಟ್ ಕೀನನ್ ಪೈಝರ್ ಕೊರೋನಾ ಲಸಿಕೆ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಅವರು ಇಂಗ್ಲೆಂಡ್‌ನ ಕೋವೆಂಟ್ರೀಯಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಬೆಳಗ್ಗೆ 6.31ಕ್ಕೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಮಾರ್ಗರೆಟ್ ಜ್ಯುವೆಲ್ಲರಿ ಶಾಪ್‌ನ ಮಾಜಿ ಸಹಾಯಕಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಯೂನಿವರ್ಸಿಟಿ ಹಾಸ್ಪಿಟಲ್ ಕೋವೆಂಟ್ರಿಯಲ್ಲಿ ವ್ಯಾಕ್ಸಿನ್ ನೀಡಲಾಗಿದೆ.

ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ತುರ್ತು ಬಳಕೆ ಅನುಮತಿ ಕೇಳಿದ ಸೀರಂ!

Latest Videos

undefined

ಒಂದು ವಾರದ ಹಿಂದಷ್ಟೇ ಹುಟ್ಟುಹಬ್ಬ

ಒಂದು ವಾರದ ಹಿಂದಷ್ಟೇ ಮಾರ್ಗರೆಟ್ ತಮ್ಮ 91ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬ್ರಿಟನ್‌ನಲ್ಲಿ ಮಂಗಳವಾರದಿಂದ ಫೈಝರ್ ಹಾಗೂ ಬಯೋಟೆಕ್‌ ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ನೀಡಲು ಆರಂಭಿಸಲಾಗಿದೆ. ಇನ್ನು ಲಸಿಕೆ ಪಡೆದ ಮಾರ್ಗರೆಟ್ ನನಗೆ ಕೊರೋನಾ ವಿರುದ್ಧದ ಮೊದಲ ಲಸಿಕೆ ಪಡೆಯುವ ಅದೃಷ್ಟ ಸಿಕ್ಕಿದೆ. ಇದು ನನ್ನ ಜನ್ಮದಿನದ ಈವರೆಗಿನ ಬೆಸ್ಟ್ ಗಿಫ್ಟ್ ಆಗಿದೆ ಎಂದಿದ್ದಾರೆ.

ಭೀತಿ ದೂರಕ್ಕೆ ಸ್ವತಃ ಲಸಿಕೆ ಪಡೆಯಲಿರುವ ಒಬಾಮಾ, ಕ್ಲಿಂಟನ್‌, ಬುಷ್‌!

ವೈರಸ್‌ನಿಂದ ಅಪಾಯವಿದ್ದವರಿಗೆ ಮೊದಲ ಆದ್ಯತೆ

ಎಲ್ಲಕ್ಕಿಂತ ಮೊದಲು ಈ ಲಸಿಕೆಯನ್ನು ನ್ಯಾಷನಲ್ ಹೆಲ್ತ್ ಸರ್ವಿಸ್‌ನ ಫ್ರಂಟ್ ಲೈನ್ ಸ್ಟಾಫ್‌ಗಳಿಗೆ ನೀಡಲಾಗುತ್ತದೆ. ಜೊತೆಗೆ 80 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೂ ಮಹತ್ವ ನೀಡಲಾಗುತ್ತದೆ. ಯಾರಿಗೆಲ್ಲಾ ಈ ವೈರಸ್‌ನಿಂದ ಹೆಚ್ಚು ಅಪಾಯವಿದೆಯೋ ಅವರಿಗೂ ಮೊದಲ ಆದ್ಯತೆ ನೀಡಲಾಗುತ್ತದೆ.

click me!