
ವಾಷಿಂಗ್‌ಟನ್(ಆ. 26)ಭಾರತದ ಸುಧಾ ಸುಂದರಿ ನಾರಾಯಣನ್ ಅಮೆರಿಕದ ಪ್ರಜೆಯಾಗಿ ಟ್ರಂಪ್ ಸಮ್ಮುಖದಲ್ಲಿಯೇ ಪ್ರಮಾಣ ತೆಗೆದುಕೊಂಡಿದ್ದಾರೆ.
ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮೂಲದ ಮಹಿಳೆ ಸೇರಿದಂತೆ ಒಟ್ಟು ಐದು ವಿವಿಧ ದೇಶಗಳ ನಾಗರಿಕರು ಅಮೆರಿಕದ ಪ್ರಜೆಗಳಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಅಮೆರಿಕದ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸುಧಾ ಸುಂದರಿ ನಾರಾಯಣನ್ ಗೆ ಗೌರವ ಸಿಕ್ಕಿದೆ.
ಪೋರ್ನ್ ತಾರೆಯೊಂದಿಗೆ ಸಂಬಂಧ ಹೊಂದಿದ್ದರಾ ಅಧ್ಯಕ್ಷ?
ಭಾರತದ ಸುಧಾ ಸುಂದರಿ ನಾರಾಯಣನ್ ಸೇರಿದಂತೆ, ಬೋಲಿವಿಯಾ, ಲೆಬನಾನ್ ಸುಡಾನ್, ಘಾನಾದ ಪ್ರಜೆಗಳು ಅಮೆರಿಕದ ಪ್ರಜೆಗಳಾಗಿ ಪ್ರತಿಜ್ಞೆ ಸ್ವೀಕರಿಸಿದರು. ಬಲಗೈ ಎತ್ತಿನ ಹಿಡಿದು ಎಡಗೈನಲ್ಲಿ ಅಮೆರಿಕದ ಧ್ವಜ ಹಿಡಿದರು. 13 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದ ಸುಧಾ ಇದೀಗ ಅಧಿಕೃತವಾಗಿ ಅಲ್ಲಿನ ಪ್ರಜೆಯಾಗಿದ್ದಾರೆ.
ಇದು ಸಾಧಾರಣ ಸಾಧನೆ ಅಲ್ಲ. ರಾಷ್ಟ್ರದ ಪ್ರಗತಿಯಲ್ಲಿ ಎಲ್ಲರ ಕೊಡಗುಗೆಯೂ ಇದೆ. ಜಾತಿ, ಮತ, ಲಿಂಗ, ಬಣ್ಣ ತಾರತಮ್ಯ ಮೀರಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದೇ ನಮ್ಮ ಉದ್ದೇಶ ಎಂದು ಟ್ರಂಪ್ ಇದೇ ಸಂದರ್ಭದಲ್ಲಿ ಸಾರಿದರು.
ಅಮೆರಿಕ ಉಪಾಧ್ಯಕ್ಷ ರೇಸ್ ನಲ್ಲಿ ಇಡ್ಲಿ ತಿಂದು ಬೆಳೆದ ಭಾರತೀಯ ಮೂಲದ ಕಮಲಾ
ಅಮೆರಿಕದ ಆರ್ಥವ್ಯವಸ್ಥೆಯ ಮೇಲೆಯೂ ಕೊರೋನಾ ಕರಿನೆರಳು ಬೀರಿದೆ. ನೇರ ವಲಸೆ ಮೇಲೆ ಟ್ರಂಪ್ ಕೆಲ ನಿರ್ಬಂಧವನ್ನು ವಿಧಿಸಿದ್ದರು. ವೀಸಾ ವಿಚಾರದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದ ಟ್ರಂಪ್ ಅಮೆರಿಕದ ಪ್ರಜೆಗಳಿಗೆ ಉದ್ಯೋಗ ನೀಡುವುದಕ್ಕೆ ತಮ್ಮ ಮೊದಲ ಆದ್ಯತೆ ಎಂದು ಹೇಳಿದ್ದರು.
H1B ವೀಸಾ ಹೋದಿರುವ ಭಾರತದ ಅನೇಕ ಐಟಿ ಕ್ಷೇತ್ರದವರು ಗ್ರೀನ್ ಕಾರ್ಡ್ ಗಾಗಿ ದಶಕಗಳಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಅಮೆರಿಕ ಅಧ್ಯಕ್ಷ ಚುನಾವಣೆ ಬಂದಿದ್ದು ಎರಡೂ ಪಕ್ಷಗಳು ಭಾರತೀಯರ ಓಲೈಕೆ ಮಾಡುತ್ತಿರುವುದು ಮಾತ್ರ ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ