
ನ್ಯೂಯಾರ್ಕ್(ಆ. 25) ಬಿಗ್ ಬಾಸ್ ಮನೆಯಲ್ಲಿ ವ್ಯಕ್ತಿಗಳ ಜೀವನ ಶೈಲಿಯನ್ನು ಲೈವ್ ಆಗಿ ತೋರಿಸುತ್ತಾರೆ ಆದರೂ ಬಾತ್ ರೂಂ ನಲ್ಲಿಮ ಕ್ಯಾಮರಾ ಇಡಲ್ಲ. ನಿಮ್ಮ ಇಡೀ ದಿನದ ಬದುಕು..ಊಟ-ತಿಂಡಿ, ನಿದ್ರೆ, ಕೆಲಸ, ಮಲ-ಮೂತ್ರ ವಿಸರ್ಜನೆ ಎಲ್ಲವೂ ಲೈವ್ ಆಗಿ ಪ್ರಸಾರವಾಗುತ್ತಿದ್ದರೆ! ಊಹೆ ಮಾಡಿಕೊಳ್ಳುವುದಕ್ಕೂ ಕಷ್ಟ ಆಗುತ್ತಿದೆ ಅಲ್ಲವೇ?
ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಎ ಟು ಜಡ್ ಬದುಕನ್ನು ಒಂದು ವರ್ಷ ಲೈವ್ ನೀಡಿದ್ದಾನೆ. ಅಮೆರಿಕದ ಮೈಕಲ್ ಗ್ಯಾರಿ ಒಂದು ವರ್ಷ ಕಾಲ ತನ್ನ ಇಡೀ ಬದುಕಿನ ಕ್ಷಣಗಳನ್ನು ಲೈವ್ ನೀಡಿ ಸುದ್ದಿ ಮಾಡಿದ್ದಾನೆ. ನಾನು ಯಾಕೆ ಹೀಗೆ ಮಾಡಿದೆ ಎನ್ನುವುದಕ್ಕೆ ಇಂದಿಗೂ ನನಗೆ ಉತ್ತರ ಸಿಕ್ಕಿಲ್ಲ ಎಂದು ಮೈಕಲ್ ಹೇಳಿದ್ದಾರೆ.
ಆನ್ ಲೈನ್ ಮೀಟಿಂಗ್ ಮಧ್ಯೆಯೇ ಜೋಡಿಯ ಮುಕ್ತ ಸೆಕ್ಸ್
ಕಾಲೇಜಿನಿಂದ ಡ್ರಾಪ್ ಔಟ್ ಆದ ಮೈಕಲ್ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಮಾಡಿದ್ದರು. ಇದೆಲ್ಲದರಿಂದ ಹೊರಬರಬೇಕು ಎಂದಾಗ ಲೈವ್ ಹೋಗುವ ಐಡಿಯಾ ಅವರ ತಲೆಗೆ ಬಂತು.
ಮನೆಯ ಎಲ್ಲ ಮೂಲೆಗಳಲ್ಲಿಯೂ ಕ್ಯಾಮರಾ ಅಳವಡಿಕೆ ಮಾಡಿ ಜೀವನ ಶುರು ಮಾಡಿದರು. ತಿನ್ನುವುದು, ಮಲಗುವುದು ಎಲ್ಲವೂ ಲೈವ್, ಲೈವ್ ..ಲೈವ್..
ಅರಿಯಾ ಇಂಥಾವೊಂಗ್ ಎಂಬುವರು ಈ ಲೈವ್ ಸ್ಟ್ರೀಮ್ ಅಲ್ಲ ಲೈಫ್ ಸ್ಟ್ರೀಮ್ ಗೆ ನನಗೆ ಪ್ರೇರಣೆಯಾದರು. ಒಂದು ವಾರ ಕಾಲ ಅವರು ಎಲ್ಲವನ್ನು ಲೈವ್ ಮಾಡಿದ್ದರು. ಇದೊಂದು ಕುತೂಹಲಕಾರಿ ಅಂಶ ಎಂದು ನನಗೆ ಅನ್ನಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನನ್ನ ಲೈವ್ ಸ್ಟ್ರೀಮ್ ನಾನೇ ನೋಡಿಕೊಂಡು ಜೀವನ ಶೈಲಿಯಲ್ಲಿ ಕೆಲ ಮಾರ್ಪಾಡು ಮಾಡಿಕೊಂಡೆ. ಮದ್ಯ ಮತ್ತು ಮಾದಕ ವಸ್ತು ಸೇವನೆಯನ್ನು ನಿಲ್ಲಿಸಿದೆ ಎಂದು ತಿಳಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ