ರಹಸ್ಯ ದಾಖಲೆ ಲೀಕ್? ಭಾರತೀಯ ಮೂಲದ ರಕ್ಷಣಾ ತಂತ್ರಜ್ಞನ ಬಂಧಿಸಿದ ಅಮೆರಿಕಾ

Published : Oct 15, 2025, 11:04 AM IST
Defence Expert Ashley Tellis Arrested

ಸಾರಾಂಶ

Allegations against Ashley Tellis: ಅಮೆರಿಕಾದಲ್ಲಿ ರಕ್ಷಣಾ ತಜ್ಞರಾಗಿರುವ ಭಾರತೀಯ ಮೂಲದ ಆಶ್ಲೇ ಜೆ. ಟೆಲ್ಲಿಸ್ ಅವರನ್ನು, ರಹಸ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರು ಯುಎಸ್-ಭಾರತ ಸಂಬಂಧಗಳ ಪ್ರಮುಖ ತಜ್ಞರಾಗಿದ್ದರು

ಅಮೆರಿಕಾದಲ್ಲಿ ಭಾರತೀಯ ಮೂಲದ ಆಶ್ಲೇ ಟೆಲ್ಲೀಸ್ ಅರೆಸ್ಟ್

ರಹಸ್ಯ ದಾಖಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕಾದಲ್ಲಿ ರಕ್ಷಣಾ ತಜ್ಞನಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಆಶ್ಲೇ ಟೆಲ್ಲಿಸ್ ಎಂಬುವವರನ್ನು ಬಂಧಿಸಲಾಗಿದೆ. ಆಶ್ಲೇ ಟೆಲ್ಲೀಸ್ ಪ್ರಖ್ಯಾತ ಶೈಕ್ಷಣಿಕ ಮತ್ತು ನೀತಿ ಸಾಧಕರಾಗಿದ್ದು, ದಕ್ಷಿಣ ಏಷ್ಯಾದ ಭದ್ರತೆ ಮತ್ತು ಅಮೆರಿಕ ಭಾರತ ಸಂಬಂಧಗಳ ಬಗ್ಗೆ ಅರಿವಿರುವ ವಾಷಿಂಗ್ಟನ್‌ನ ಅಗ್ರಗಣ್ಯ ತಜ್ಞರಲ್ಲಿ ಒಬ್ಬರೆಂದು ದೀರ್ಘಕಾಲದಿಂದ ಗುರುತಿಸಲ್ಪಟ್ಟಿದ್ದಾರೆ.

ವರ್ಜೀನಿಯಾದ ಪೂರ್ವ ಜಿಲ್ಲೆಯ ಯುಎಸ್ ಅಟಾರ್ನಿ ಕಚೇರಿಯ ಪ್ರಕಾರ, ಭಾರತೀಯ ಮೂಲದ ಪ್ರಖ್ಯಾತ ವಿದೇಶಾಂಗ ನೀತಿ ವಿದ್ವಾಂಸ ಮತ್ತು ರಕ್ಷಣಾ ತಂತ್ರಜ್ಞರಾಗಿರುವ ಆಶ್ಲೇ ಜೆ ಟೆಲ್ಲಿಸ್ ಅವರ ವಿರುದ್ಧ ಕಾನೂನು ಬಾಹಿರವಾಗಿ ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ಉಳಿಸಿಕೊಂಡಿರುವ ಆರೋಪ ಹೊರಿಸಲಾಗಿದೆ.

ರಕ್ಷಣಾ ಸಂಬಂಧಿತ ದಾಖಲೆಗಳನ್ನು ಅನಧಿಕೃತವಾಗಿ ಹೊಂದಿದ ಆರೋಪ

ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನಲ್ಲಿ ಟಾಟಾ ಸ್ಟ್ರಾಟೆಜಿಕ್ ಅಫೇರ್ಸ್ ಅಧ್ಯಕ್ಷರಾಗಿರುವ 64 ವರ್ಷದ ಟೆಲ್ಲಿಸ್ ಅವರನ್ನು ನಿರ್ಬಂಧಿತ ಸರ್ಕಾರಿ ಸಾಮಗ್ರಿಗಳನ್ನು ನಿರ್ವಹಿಸಿದ್ದಕ್ಕಾಗಿ ಫೆಡರಲ್ ತನಿಖೆಯ ನಂತರ ವಾರಾಂತ್ಯದಲ್ಲಿ ಬಂಧಿಸಲಾಗಿದೆ. ಟೆಲ್ಲಿಸ್ ಅವರು ಯುಎಸ್ ಕಾಯ್ದೆಯಾಗಿರುವ 18 USC § 793(e) ಅನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಆರೋಪಿಸಲಾಗಿದೆ. ಈ ಕಾಯ್ದೆಯಡಿ ರಕ್ಷಣಾ ಸಂಬಂಧಿತ ದಾಖಲೆಗಳನ್ನು ಅನಧಿಕೃತವಾಗಿ ಹೊಂದಿರುವುದು ಅಥವಾ ಉಳಿಸಿಕೊಳ್ಳುವುದು ಕಾನೂನು ಬಾಹಿರ ಅಪರಾಧವಾಗಿದೆ.

ಚೀನಾದ ಅಧಿಕಾರಿಗಳ ಭೇಟಿ ಮಾಡಿದ ಆರೋಪ

ಟೆಲ್ಲಿಸ್ ಸುರಕ್ಷಿತ ಸ್ಥಳಗಳಿಂದ ವರ್ಗೀಕೃತ ದಾಖಲೆಗಳನ್ನು ತೆಗೆದು ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ ಆರೋಪವೂ ಇದ್ದೂ, ಈ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಮೆರಿಕದ ಅಟಾರ್ನಿ ಲಿಂಡ್ಸೆ ಹ್ಯಾಲಿಗನ್ ಅವರು ಸುದ್ದಿಗೋಷ್ಠಿ ನಡೆಸಿ ಈ ಆರೋಪ ಹೊರಿಸಿದ್ದು, ಟೆಲ್ಲೀಸ್ ಅವರ ಈ ಆಪಾದಿತ ನಡವಳಿಕೆಯು ನಮ್ಮ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡಿದೆ ಎಂದು ಹ್ಯಾಲಿಗನ್ ಹೇಳಿದ್ದಾರೆ.

ಈ ಆರೋಪ ಸಾಬೀತಾದರೆ, ಟೆಲ್ಲಿಸ್ ಅವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, $250,000 ಲಕ್ಷ ಡಾಲರ್ ದಂಡ ಮತ್ತು ಅವರು ಹೊಂದಿರುವ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಪ್ರಸ್ತುಯ ಈ ದೂರು ಒಂದು ಆರೋಪವಾಗಿದ್ದು, ತನಿಖೆಯ ನಂತರ ಅವರು ತಪ್ಪಿತಸ್ಥನೆಂದು ಸಾಬೀತಾಗುವವರೆಗೂ ಟೆಲ್ಲಿಸ್ ನಿರಪರಾಧಿ ಎಂದು ಭಾವಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಆಶ್ಲೇ ಜೆ ಟೆಲ್ಲಿಸ್ ಯಾರು?

ಅಮೆರಿಕಾದಲ್ಲಿ ಒಬ್ಬ ವಿಶಿಷ್ಟ ಶೈಕ್ಷಣಿಕ ಮತ್ತು ನೀತಿ ನಿರೂಪಕರಾಗಿರುವ ಟೆಲ್ಲಿಸ್ ದಕ್ಷಿಣ ಏಷ್ಯಾದ ಭದ್ರತೆ ಮತ್ತು ಅಮೆರಿಕ ಭಾರತ ಸಂಬಂಧಗಳ ಕುರಿತು ಅರಿವಿರುವಂತಹ ವಾಷಿಂಗ್ಟನ್‌ನ ಅಗ್ರಗಣ್ಯ ತಜ್ಞರಲ್ಲಿ ಒಬ್ಬರೆಂದು ದೀರ್ಘಕಾಲದಿಂದ ಗುರುತಿಸಲ್ಪಟ್ಟಿದ್ದಾರೆ. ಅವರು ಅಮೆರಿಕ ಸರ್ಕಾರದೊಳಗೆ ಹಲವಾರು ಪ್ರಭಾವಶಾಲಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿನ ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿಯ ಹಿರಿಯ ಸಲಹೆಗಾರರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಅವರು ಅಮೆರಿಕ-ಭಾರತ ನಾಗರಿಕ ಪರಮಾಣು ಒಪ್ಪಂದದ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹಾಗೆಯೇ ಜಾರ್ಜ್ ಡಬ್ಲ್ಯೂ. ಬುಷ್ ಅಧ್ಯಕ್ಷರಾಗಿದ್ದ ವೇಳೆ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷರ ವಿಶೇಷ ಸಹಾಯಕರಾಗಿ ಮತ್ತು ಕಾರ್ಯತಂತ್ರದ ಯೋಜನೆ ಮತ್ತು ನೈಋತ್ಯ ಏಷ್ಯಾದ ಹಿರಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸರ್ಕಾರಿ ಸೇವೆಗೆ ನಿಯೋಜನೆಗೊಳ್ಳುವುದಕ್ಕೂ ಮೊದಲು ಟೆಲ್ಲಿಸ್ ಆರ್‌ಎಎನ್‌ಡಿ ಕಾರ್ಪೊರೇಷನ್‌ನಲ್ಲಿ ಹಿರಿಯ ನೀತಿ ವಿಶ್ಲೇಷಕ ಮತ್ತು ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಅವರು ಹಲವು ಪುಸ್ತಕಗಳನ್ನು ಬರೆದಿದ್ದು, ಸ್ಟ್ರೈಕಿಂಗ್ ಅಸಿಮ್ಮೆಟ್ರೀಸ್: ನ್ಯೂಕ್ಲಿಯರ್ ಟ್ರಾನ್ಸಿಶನ್ಸ್ ಇನ್ ಸೌತರ್ನ್ ಏಷ್ಯಾ ಮತ್ತು ರಿವೈಸಿಂಗ್ ಯುಎಸ್ ಗ್ರ್ಯಾಂಡ್ ಸ್ಟ್ರಾಟಜಿ ಟುವರ್ಡ್ ಚೀನಾ ಮುಂತಾದ ಪುಸ್ತಕಗಳು ಸೇರಿವೆ.

ಅಮೆರಿಕದ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, ವೃತ್ತಿಪರ ಮತ್ತು ಶೈಕ್ಷಣಿಕ ವಿನಿಮಯದ ಸಮಯದಲ್ಲಿ ಟೆಲ್ಲಿಸ್ ಚೀನಾದ ಅಧಿಕಾರಿಗಳೊಂದಿಗೆ ನಡೆಸಿದ ಸಂವಹನಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಹಂತದಲ್ಲಿ ಬೇಹುಗಾರಿಕೆಯ ಯಾವುದೇ ಸೂಚನೆಯಿಲ್ಲದಿದ್ದರೂ, ಅವರು ವರ್ಗೀಕೃತ ವಸ್ತುಗಳನ್ನು ಇಟ್ಟುಕೊಂಡಿರುವುದು ಫೆಡರಲ್ ಭದ್ರತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ.

ಇದನ್ನೂ ಓದಿ:  ಕೇರಳ: ಡ್ರಗ್ ಮಾರಿ ಕಂಡವರ ಮಕ್ಕಳ ಬಾವಿಗೆ ತಳ್ಳುತ್ತಿದ್ದ ಮಹಿಳಾ ವಕೀಲೆ, 18 ವರ್ಷದ ಪುತ್ರ ಅರೆಸ್ಟ್

ಇದನ್ನೂ ಓದಿ: ಕೆಬಿಸಿಯಲ್ಲಿ ಅಮಿತಾಭ್‌ಗೆ ಅವಮಾನಿಸಿದ ಬಾಲಕ: ಇದು ADHD ಸಮಸ್ಯೆನಾ ಏನಿದರ ಲಕ್ಷಣಗಳು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌