ಟೀ ಸರ್ವ್‌ ಮಾಡುತ್ತಿರುವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ

Published : Jul 11, 2022, 11:31 AM IST
ಟೀ ಸರ್ವ್‌ ಮಾಡುತ್ತಿರುವ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ

ಸಾರಾಂಶ

ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರು ಪತ್ರಕರ್ತರಿಗೆ ಚಹಾ ನೀಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರು ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

ಇಂಗ್ಲೆಂಡ್‌: ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿರುವ ಹಿನ್ನೆಲೆ ಮುಂದಿನ ಪ್ರಧಾನಿ ಯಾರಾಗ್ತಾರೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಶುರುವಾಗಿದೆ.  ಇದರ ಬೆನ್ನಲ್ಲೇ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ (Narayan Murthy) ಅಳಿಯ ಭಾರತ ಮೂಲದ ರಿಷಿ ಸುನಕ್ (Rishi Sunak) ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಈ ಮಧ್ಯೆ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರು ಪತ್ರಕರ್ತರಿಗೆ ಚಹಾ ನೀಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ನೆಟ್ಟಿಗರು ಸ್ವಾರಸ್ಯಕರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

ಪ್ರಸ್ತುತ ದಿನಗಳಲ್ಲಿ ನೆಟ್ಟಿಗರ ಹದ್ದಿನ ಕಣ್ಣುಗಳಿಂದ ಯಾವುದು ಕೂಡ ದೂರ ಉಳಿಯಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಹೀಗಾಗಿ ಗಣ್ಯರಿಗೆ ಸಿನಿಮಾ ತಾರೆಯರಿಗೆ ವೈಯಕ್ತಿಕ ಬದುಕನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಕಷ್ಟಕರವಾಗಿದೆ. ಹಾಗೆಯೇ ಈಗ ರಿಷಿ ಸುನಕ್ ಪತ್ನಿ ಹಾಗೂ ಸ್ವತಃ ಬಿಲಿಯನೇರ್ ಆಗಿರುವ ಉದ್ಯಮಿ ಅಕ್ಷತಾ ಮೂರ್ತಿ (Akshata Murthy) ಅವರು ತಮ್ಮ ನಿವಾಸದ ಹೊರಗೆ ಕಾಯುತ್ತಾ ಕುಳಿತಿರುವ ಪತ್ರಕರ್ತರಿಗೆ ತಾವೇ ಸ್ವತ: ಟೀ ಹಾಗೂ ಬಿಸ್ಕೆಟ್ ತೆಗೆದುಕೊಂಡು ಬಂದು ನೀಡುತ್ತಿರುವ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

 

ಸ್ಕೈ ನ್ಯೂಸ್‌ನ ಜೋಶ್‌ ಝಾಫ್ಸನ್‌ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದು ನೆಟ್ಟಿಗರು ಕುತೂಹಲದಿಂದ ಪ್ರತಿಕ್ರಿಯೆ ನೀಡುವಂತೆ ಮಾಡಿದೆ. ಏನು ಟೀ ಕೊಟ್ಟರೆ ಯಾಕೆ ನೀವು ಕೇಳಿದ್ರಾ ಎಂದೆಲ್ಲಾ ಜನ ಪ್ರಶ್ನಿಸಿದ್ದಾರೆ. ಅವರು ಮಗ್‌ಗಳಲ್ಲಿ ಟೀ ನೀಡಿದರು. ಪ್ರತಿಯೊಂದರಲ್ಲೂ38 ಪೌಂಡ್ಸ್‌ ಟೀ ಇತ್ತು. ಇದರ ಅಂದಾಜು ಮೊತ್ತ 3600 ರೂಪಾಯಿ ಎಂದೆಲ್ಲಾ ಜನ ತಮಾಷೆಯಾಗಿ ಲೆಕ್ಕಾಚಾರ ಹಾಕಿದ್ದಾರೆ. 

ಬ್ರಿಟನ್ ಪ್ರಧಾನಿ ರೇಸ್‌ನಲ್ಲಿರುವ ರಿಷಿ ಸುನಕ್ 21 ವರ್ಷದ ಹಿಂದಿನ ವಿಡಿಯೋ ವೈರಲ್!

ಬೋರಿಸ್ ಜಾನ್ಸನ್ (Borisj johnson) ಅವರ ರಾಜೀನಾಮೆಯ ನಂತರ ಇಂಗ್ಲೆಂಡ್ ಪ್ರಧಾನಿ ಹುದ್ದೆಗೇರುವ ರೇಸ್‌ಗೆ  ರಿಷಿ ಸುನಕ್  ಪೈಪೋಟಿ ಶುರು ಮಾಡಿದ ಕೆಲ ದಿನಗಳ ನಂತರ ಅಕ್ಷತಾ ಮೂರ್ತಿ ಅವರ ಈ ಫೋಟೋಗಳು ವೈರಲ್ ಆಗಿವೆ. ಅವರು ಎಮ್ಮಾ ಲೇಸಿ (Emma Lacey) ಎಂಬ ಬ್ರ್ಯಾಂಡ್‌ನ ಕಪ್‌ಗಳಲ್ಲಿ ತಮ್ಮ ಲಂಡನ್ ಮನೆಯ ಹೊರಗೆ ಕಾಯುತ್ತಿರುವ ಪತ್ರಕರ್ತರಿಗೆ ಚಹಾ ಮತ್ತು ಬಿಸ್ಕತ್ತುಗಳನ್ನು ನೀಡಿದ್ದಾರೆ. 

ರಿಷಿ ಸುನಕ್ ಅವರ ಪತ್ನಿಗೆ ದೊಡ್ಡ ಧನ್ಯವಾದಗಳ, ಅವರು ಅವರ ಮನೆ ಮುಂದೆ ತುಂಬಾ ವಿನಮ್ರರಾಗಿ ನಮಗೆ ಚಹಾ ಹಾಗೂ ಬಿಸ್ಕೆಟ್‌ ಅನ್ನು ತಂದು ನೀಡಿದರು. ಟೀ ತುಂಬಾ ಚೆನ್ನಾಗಿತ್ತು ಎಂದು ಸ್ಕೈ ನ್ಯೂಸ್‌ನ ಜೋಶ್‌ ಝಾಫ್ಸನ್‌ ಅವರು ಫೋಟೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.

ಕುಟುಂಬ ಕತೆಯ ಮೂಲಕ ಬ್ರಿಟನ್ ಮುಂದಿನ ಪ್ರಧಾನಿ ಸಾಲಿನಲ್ಲಿದ್ದೇನೆ ಎಂದು ಘೋಷಿಸಿದ ರಿಷಿ ಸುನಕ್

ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಖತ್ ವೈರಲ್ ಆಗಿವೆ. ಅಲ್ಲದೇ ಕೆಲವರು ಅಕ್ಷತಾ, ಬೋರಿಸ್ ಜಾನ್ಸನ್ ಅವರನ್ನು ನಕಲು ಮಾಡುತ್ತಿದ್ದಾರೆ ಎಂದರೆ ಮತ್ತೆ ಕೆಲವರು ದುಬಾರಿ ಟೀ ಕಪ್ ಅಥವಾ ಚಹಾದ ಮಗ್ಗುಗಳನ್ನು ಬಳಸಿದ್ದಕ್ಕೆ ಟೀಕಿಸಿದರು. ಜಾನ್ಸನ್‌  ಈ ರೀತಿ ಮಾಡಿದ್ದನ್ನು ನೆನಪಿಸಿಕೊಳ್ಳಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅವರು ಆ ಉನ್ನತ ಸ್ಥಾನದಲ್ಲಿದ್ದರು ವಿಧೇಯತೆ ವಿನಮ್ರತೆಯನ್ನು ಶ್ಲಾಘಿಸಿದರು. ಮತ್ತೆ ಕೆಲವರು ಅವರ ದೊಡ್ಡತನ ಅವರ ತಂದೆ ತಾಯಿಯಿಂದ ಬಳುವಳಿಯಾಗಿ ಬಂದಿದೆ ಎಂದು ಶ್ಲಾಘಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ
ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ