Nursing Excellence Awards ಕುವೈಟ್‌ನಲ್ಲಿನ 5 ಭಾರತೀಯ ನರ್ಸ್‌ಗಳಿಗೆ ಏಷ್ಯಾನೆಟ್ ನ್ಯೂಸ್‌ ಶ್ರೇಷ್ಠ ಪ್ರಶಸ್ತಿ ಗೌರವ!

Published : Mar 28, 2022, 03:44 PM ISTUpdated : Mar 28, 2022, 06:07 PM IST
Nursing Excellence Awards ಕುವೈಟ್‌ನಲ್ಲಿನ 5 ಭಾರತೀಯ ನರ್ಸ್‌ಗಳಿಗೆ ಏಷ್ಯಾನೆಟ್ ನ್ಯೂಸ್‌ ಶ್ರೇಷ್ಠ ಪ್ರಶಸ್ತಿ ಗೌರವ!

ಸಾರಾಂಶ

ಕುವೈಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ನರ್ಸ್‌ಗಳಿಗೆ ಗೌರವ ಶ್ರೇಷ್ಠ ನರ್ಸ್ ಪ್ರಶಸ್ತಿ ನೀಡಿ ಗೌರವಿಸಿದ ಏಷ್ಯಾನೆಟ್ ನ್ಯೂಸ್ ಏಷ್ಯಾನೆಟ್ ನ್ಯೂಸ್ ಕಾರ್ಯಕ್ಕೆ ಕುವೈಟ್ ರಾಯಭಾರಿ ಅಭಿನಂದನೆ

ಕುವೈಟ್(ಮಾ.28): ಕೊರೋನಾ ವೈರಸ್(Coronavirus) ವಕ್ಕರಿಸಿದ ಬಳಿಕ ನರ್ಸ್, ವೈದ್ಯರು, ದಾದಿಯರ ಪಾತ್ರ ಹಾಗೂ ಮಹತ್ವ ಏನೂ ಅನ್ನೋದು ಎಲ್ಲರಿಗೂ ಮನದಟ್ಟಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಎಲ್ಲರನ್ನೂ ಸುಶ್ರೂಶೆ ಮಾಡಿದ, ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿದ  ಆರೋಗ್ಯ ಕಾರ್ಯಕರ್ತರಿಗೆ(Health Workers) ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ಇದಕ್ಕಾಗಿ ಏಷ್ಯಾನೆಟ್ ನ್ಯೂಸ್(Asianet News) ಕುವೈಟ್‌ನಲ್ಲಿನ ನರ್ಸ್‌ಗಳ ಸೇವೆಯ್ನು ಅಭಿನಂದಿಸಲು ಹಾಗೂ ಪ್ರೋತ್ಸಾಹಿಸಲು ಏಷ್ಯಾನೆಟ್ ನ್ಯೂಸ್ ನರ್ಸಿಂಗ್ ಎಕ್ಸಲೆನ್ಸ್ ಅವಾರ್ಡ್(Nursing Excellence Awards 2022) ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದ ಮೂಲಕ ಐವರು ಭಾರತೀಯ ನರ್ಸ್‌ಗಳಿಗೆ(Indian Nurses)ಅತ್ಯುತ್ತಮ ನರ್ಸ್ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.

ಕೊರೋನಾ ಸಮಯದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಐವರು ಅತ್ಯುತ್ತಮ ನರ್ಸ್‌ಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಕುವೈಟ್‌ನ(Kuwait) ಸಭಾ ಆಸ್ಪತ್ರೆಯಲ್ಲಿ ಕಳೆದ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಸಾನ್ ಜೇಕಬ್ ಅಬ್ರಹಾಂಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ನಿಸ್ವಾರ್ಥ ಸೇವೆ ನೀಡಿದ ಶೈನಿ ಅನಿಲ್ ಜೇಕಬ್‌ಗೆ ವರ್ಷದ ನರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶವಾಗಾರದಲ್ಲಿ ಮತೃದೇಹಗಳಿಗೆ ಎಂಬಾಮ್ ಮಾಡಿ ನೆರವಾಗುತ್ತಿದ್ದ ಸುಜಾ ಲಾಜಿ ಜೋಸೆಫ್‌ಗೆ ನರ್ಸಿಂಗ್ ಅಡ್ಮಿನಿಸ್ಟ್ರೇಟರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

"

ಸಿಂಧನೂರಿನಲ್ಲಿ 10 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ದಾದಿಯರು

ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಸಾವಿರಾರು ರೋಗಿಗಳ ಸೇವೆ ಸಲ್ಲಿಸಿದ ಸಭಾ ಆಸ್ಪತ್ರೆಯ ವಿಜೇಶ್ ವೇಲಾಯುಧನ್‌ಗೆ ಕೋವಿಡ್ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇನ್ನು ರಾಯ್ ಕೆ ಯೋಹಾನಾಗೆ ಸ್ಪೆಷಲ್ ಜ್ಯೂರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕುವೈಟ್‌ನ ಭಾರತೀಯ ರಾಯಭಾರಿ ಸಿಬಿ ಜಾರ್ಜ್ ಪ್ರಶಸ್ತಿ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಸಿಬಿ ಜಾರ್ಜ್, ಭಾರತೀಯ ನರ್ಸ್‌ ಕುವೈಟ್‌ನಲ್ಲಿನ ಸೇವೆಯನ್ನು ಭಾರತ ಹಾಗು ಕುವೈಟ್ ಮರೆಯಲು ಸಾಧ್ಯವಿಲ್ಲ. ಅವರ ಕೊಡುಗೆಯನ್ನು ನಾವು ಹೆಮ್ಮೆ ಪಡುತ್ತೇವೆ. ನಿಸ್ವಾರ್ಥ ಸೇವೆ ಪ್ರಶಸ್ತಿ ಪಡೆದ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ನರ್ಸ್‌ಗಳಿಗೆ ರಾಯಭಾರಿ ಸಿಬಿ ಜಾರ್ಜ್ ಅಭಿನಂದನೆ ಸಲ್ಲಿಸಿದರು.

ಕೊರೋನಾ ಸಂದರ್ಭದಲ್ಲಿ ನರ್ಸ್, ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ನಿದ್ದೆ ಇರಲಿಲ್ಲ. ಹೆಚ್ಚುವರಿ ಸಮಯ ಕೆಲಸ ಮಾಡಬೇಕಿತ್ತು. ತಮ್ಮ ಆರೋಗ್ಯ, ಪ್ರಾಣವನ್ನು ಲೆಕ್ಕಿಸದೇ ಸೇವೆ ಸಲ್ಲಿಸಿದ್ದಾರೆ. ಇವರ ಈ ಸೇವೆಯಿಂದಲೇ ಇದೀಗ ಕೊರೋನಾದಿಂದ ನಾವೆಲ್ಲಾ ಮುಕ್ತರಾಗಿದ್ದೇವೆ. ನಮ್ಮ ಪ್ರಾಣ ಉಳಿಸಲು ಹಗಳಿರುಳು ಶ್ರಮಿಸಿದ್ದಾರೆ. ಈ ಕೊಡುಗೆಯನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ ಎಂದು ಸಿಬಿ ಜಾರ್ಜ್ ಹೇಳಿದ್ದಾರೆ. ಇದೇ ವೇಳೆ ನರ್ಸ್‌ಗಳನ್ನು ಅಭಿನಂದಿಸಲು ಈ ರೀತಿಯ ಕಾರ್ಯಕ್ರಮ ಆಯೋಜಿಸಿ ಅವರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ ಏಷ್ಯಾನೆಟ್ ನ್ಯೂಸ್‌ಗೆ ಸಿಬಿ ಜಾರ್ಜ್ ಅಭಿನಂದನೆ ಸಲ್ಲಿಸಿದರು.

ದೇಹ ನಿರ್ಜಲೀಕರಣ ಮಾಡೋ PPE ಕಿಟ್‌ ಧರಿಸಿಕೊಂಡೇ ಉಪವಾಸವಿದ್ರೂ ಸೋಂಕಿತರ ಸೇವೆ ಮಾಡಿದ್ರು

ಇದೇ ವೇಳೆ ಕುವೈಟ್‌ನಲ್ಲಿನ ಕೊರೋನಾ ಸಂದರ್ಭದಲ್ಲಿ 14 ನರ್ಸ್ ಪ್ರಾಣ ಕಳೆದುಕೊಂಡಿದ್ದಾರೆ. ಇತರರ ಪ್ರಾಣ ಉಳಿಸಲು ಶ್ರಮಿಸಿ ತಾವೇ ಕೋವಿಡ್‌ಗೆ ತುತ್ತಾಗಿದ್ದರು. ಅಗಲಿದ ನರ್ಸ್‌ಗಳ ಸ್ಮರಣೆಗಾಗಿ ಕ್ಯಾಂಡಲ್ ಹಚ್ಚಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಕುವೈಟ್‍‌ನ ಮಿಲೇನಿಯಂ ಹೊಟೆಲ್ ಹಾಗೂ ಕನ್ವೆನ್ಶನ್ ಹಾಲ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕುವೈಟ್ ಆರೋಗ್ಯ ಸಚಿವ ರೀಮ್ ಆಲ್ ಮರ್ಜಖ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. 

ಸುಮಾರು 5,000 ಹೆಚ್ಚಿನ ನರ್ಸ್‌ಗಳಲ್ಲಿ ಐವರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಎಲ್ಲರೂ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಶಸ್ತಿಗಾಗಿ ಐವರ ಆಯ್ಕೆಗಾಗಿ ಹಲವು ಮಾನದಂಡಗಳನ್ನು ರೂಪಿಸಿ ಅದರಂತೆ ಆಯ್ಕೆ ಮಾಡಿದ್ದೇವೆ. ನರ್ಸ್ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಈ ಪ್ರಶಸ್ತಿಗೆ ಅರ್ಹರೂ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ