ಭಾರತದವರು ಅಮೆರಿಕವನ್ನು ನಿಯಂತ್ರಿಸುತ್ತಿದ್ದಾರೆ ಎಂದ ಬೈಡನ್

By Suvarna NewsFirst Published Mar 5, 2021, 10:38 AM IST
Highlights

ಇಂಡಿಯನ್ ಅಮೆರಿಕನ್ನರಿಂದ ಅಮೆರಿಕದ ಮೇಲೆ ನಿಯಂತ್ರಣ | ಅಮೆರಿಕದ ಮೇಲೆ ಅಧಿಕಾರ | ನಾಸಾ ಮೀಟಿಂಗ್‌ನಲ್ಲಿ ಬೈಡನ್ ಹೀಗಂದಿದ್ದೇಕೆ..?

ವಾಷಿಂಗ್ಟನ್(ಮಾ.05): ಅಮೆರಿಕದಲ್ಲಿರೋ ಭಾರತೀಯರು ಅಮೆರಿಕನ್ನು ಟೇಕ್ ಓವರ್ ಮಾಡುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜಾಯ್ ಬೈಡನ್ ಹೇಳಿದ್ದಾರೆ.

ಅಮೆರಿಕದ ಆಡಳಿತದಲ್ಲಿ ಇಂಡಿಯನ್ ಅಮೆರಿಕನ್ನರ ಪಾತ್ರ ಹೆಚ್ಚಿದ್ದು ಈ ಅವರು ಅಮೆರಿಕವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೈಡೆನ್‌ ಅಮೆರಿಕ ಅಧ್ಯಕ್ಷರಾದ ತಿಂಗಳಲ್ಲಿ ಸಿರಿಯಾ ಮೇಲೆ ದಾಳಿ!

ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು 50 ದಿನಗಳಾಗಿದ್ದಷ್ಟೇ ಆಗಲೇ 55 ಹುದ್ದೆಗಳಿಗೆ ಭಾರತೀಯ ಮೂಲದವರನ್ನು ನೇಮಿಸಿದ್ದಾರೆ ಬೈಡನ್. ನಾಸಾಗೆ ಬೈಡನ್ಗೆ ಭಾಷಣ ಬರೆದುಕೊಡುವವರಿಂದ ತೊಡಗಿ ಆಡಳಿತದ ಪ್ರತಿ ಹಂತದಲ್ಲೂ ಭಾರತೀಯರನ್ನು ನಿಯೋಜಿಸಲಾಗಿದೆ.

ಇಂಡಿಯನ್ ಅಮೆರಿಕನ್ನರು ದೇಶವನ್ನು ಟೇಕ್ ಓವರ್ ಮಾಡುತ್ತಿದ್ದಾರೆ. ನೀವು ಸ್ವಾತಿ ಮೋಹನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನನ್ನ ಭಾಷಣ ಬರಹಗಾರ ವಿನಯ್ ರೆಡ್ಡಿ ಎಂದು ಬೈಡನ್ ನಾಸಾ ವಿಜ್ಞಾನಿಗಳ ಜೊತೆಗಿನ ಮಾತುಕತೆಯ ಸಂದರ್ಭ ತಿಳಿಸಿದ್ದಾರೆ.

ಮುಸ್ಲಿಮರಿಗೆ ಕಿರುಕುಳ; ಚೀನಾಗೆ ಬೈಡನ್ ನೇರ ಎಚ್ಚರಿಕೆ

ಮಂಗಳದಲ್ಲಿ ಪರ್ಸೆವೆರೆನ್ಸ್ ಲ್ಯಾಂಡಿಂಗ್‌ನ ಐತಿಹಾಸಿಕ ಲ್ಯಾಂಡಿಂಗ್‌ನಲ್ಲಿ ಭಾಗಿಯಾಗಿದ್ದ ನಾಸಾ ವಿಜ್ಞಾನಿಗಳೊಂದಿಗಿನ ಸಂವಾದದಲ್ಲಿ ಬೈಡನ್ ಈ ವಿಚಾರ ಹೇಳಿದ್ದಾರೆ.

ನಾಸಾ ಮಾರ್ಸ್ 2020 ಮಿಷನ್‌ನನ್ನು ಭಾರತೀಯ ಮೂಲದ ಸ್ವಾತಿ ಮೋಹನ್ ಲೀಡ್ ಮಾಡಿದ್ದಾರೆ. ಜನವರಿ 20, 2021ರಂದು ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೈಡನ್ ಇಷ್ಟು ದಿನದಲ್ಲಿ ಕನಿಷ್ಠ 55 ಜನ ಭಾರತೀಯರನ್ನು ಆಡಳಿತದಲ್ಲಿ ನಿಯೋಜಿಸಿದ್ದಾರೆ.

ಬೈಡೆನ್‌ ಜತೆ ಮೋದಿ ಫೋನ್‌ ಸಂಭಾಷಣೆ: ಸಹಕಾರಕ್ಕೆ ಬದ್ಧತೆ

ಇದರಲ್ಲಿ ಕಮಲಾ ಹ್ಯಾರಿಸ್ ಸೇರಿಲ್ಲ, ಅವರದ್ದು ಚುನಾಯಿತ ಅಧಿಕಾರ. ಇದರಲ್ಲಿ ಹೆಚ್ಚಿನವೂ ಮಹಿಳೆಯರು ಮತ್ತು ಅವರೆಲ್ಲ ಶ್ವೇತ ಭವನದಲ್ಲಿ ಕೆಲಸ ಮಾಡುತ್ತಾರೆ.

click me!