ನಾಗರಿಕ ಸ್ವಾತಂತ್ರ್ಯ : ಭಾರತದ ಶ್ರೇಯಾಂಕ ಭಾರಿ ಕುಸಿತ

By Kannadaprabha NewsFirst Published Mar 5, 2021, 8:34 AM IST
Highlights

ಅಂತಾರಾಷ್ಟ್ರೀಯ ವಾರ್ಷಿಕ ಪ್ರಜಾಸತ್ತೆ ಪಟ್ಟಿಯಲ್ಲಿ ‘ಮುಕ್ತ’ದಿಂದ ‘ಭಾಗಶಃ ಮುಕ್ತ’ ದರ್ಜೆಗೆ ಭಾರತ ಇಳಿದಿದೆ.

ವಾಷಿಂಗ್ಟನ್‌ (ಮಾ.05): ಭಾರತವನ್ನು 1997ರ ನಂತರ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಾರ್ಷಿಕ ಪ್ರಜಾಸತ್ತೆ ಪಟ್ಟಿಯಲ್ಲಿ ‘ಮುಕ್ತ’ದಿಂದ ‘ಭಾಗಶಃ ಮುಕ್ತ’ ದರ್ಜೆಗೆ ಇಳಿಸಲಾಗಿದೆ. ರಾಜಕೀಯ ಹಕ್ಕು ಹಾಗೂ ನಾಗರಿಕ ಸ್ವಾತಂತ್ರ್ಯ ಕುಸಿತ ಕಂಡ 73 ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ.

ಅಮೆರಿಕ ಪ್ರಮುಖ ಚಿಂತಕರ ಚಾವಡಿ ಎಂದೇ ಖ್ಯಾತವಾಗಿರುವ ಅಲ್ಲಿನ ಸರ್ಕಾರಿ ಪ್ರಾಯೋಜಿತ ಸಂಶೋಧನಾ ಸಂಸ್ಥೆ ‘ಫ್ರೀಡಂ ಹೌಸ್‌’, ಭಾರತಕ್ಕೆ ಈ ಶ್ರೇಯಾಂಕ ನೀಡಿದೆ.

ಭಾರ​ತದ ರೈತ ಹೋರಾಟದ ಬಗ್ಗೆ ಬ್ರಿಟನ್‌ ಸಂಸ​ತ್‌ ಚರ್ಚೆ .

ಭಾರತದಲ್ಲಿ ಮುಸ್ಲಿಮರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ. ಸರ್ಕಾರದ ಟೀಕಾಕಾರರು ಹಾಗೂ ಪತ್ರಕರ್ತರ ಮೇಲಿನ ಕಿರುಕುಳಗಳು ಹೆಚ್ಚುತ್ತಿವೆ ಎಂಬ 2 ಪ್ರಮುಖ ಕಾರಣವನ್ನು ಭಾರತದ ಶ್ರೇಯಾಂಕ ಇಳಿಸಿದ್ದಕ್ಕೆ ‘ಫ್ರೀಡಂ ಆಫ್‌ ದ ವರ್ಲ್ಡ್’ ಹೆಸರಿನ ವರದಿಯಲ್ಲಿ ‘ಫ್ರೀಡಂ ಹೌಸ್‌’ ಸಂಸ್ಥೆ ನೀಡಿದೆ.

‘ಭಾರತದಲ್ಲಿ ಆಳ್ವಿಕೆ ನಡೆಸುತ್ತಿರುವ ಹಿಂದೂ ರಾಷ್ಟ್ರೀಯವಾದಿ ಪಕ್ಷ ಹಾಗೂ ಅದರ ಮಿತ್ರಪಕ್ಷಗಳು ಹಿಂಸೆ ಹಾಗೂ ತಾರತಮ್ಯ ಹೆಚ್ಚಳದ ಮುಂದಾಳತ್ವ ವಹಿಸಿವೆ. 2020ರಲ್ಲಿ ದಿಲ್ಲಿಯಲ್ಲಿ ಕೋಮುಗಲಭೆ ನಡೆದವು. ಸರ್ಕಾರವು ಟೀಕಾಕಾರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿತು. ಇನ್ನು ಕೊರೋನಾ ವೈರಸ್‌ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹೇರಿದ ಲಾಕ್‌ಡೌನ್‌ನಿಂದ ವಲಸಿಗ ಕಾರ್ಮಿಕರು ನರಕಯಾತನೆ ಅನುಭವಿಸಿದರು’ ಎಂದು ವರದಿ ಟೀಕಿಸಿದೆ.

click me!