ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ| ಅಮೆರಿಕದಲ್ಲಿ ಸಿಎಎ ಪರ ಮೆರವಣಿಗೆ ನಡೆಸಿದ ಅನಿವಾಸಿ ಭಾರತೀಯರು| ತ್ರಿವರ್ಣ ಧ್ವಜ ಹಿಡಿದ 300 ಕ್ಕೂ ಹೆಚ್ಚು ಅನಿವಾಸಿ ಭಾರತೀಯರಿಂದ ಮೆರವಣಿಗೆ| ಕಾಯ್ದೆ ಜಾರಿಗೆ ತರುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ| ಚಿಕಾಗೋದಲ್ಲಿ ಸಿಎಎ ಪರ ಘೋಷಣೆ ಕೂಗಿದ ಅನಿವಾಸಿ ಭಾರತೀಯರು|
ವಾಷಿಂಗ್ಟನ್(ಜ.05): ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ವಿರುದ್ಧ ತೀವ್ರ ಹೋರಾಟ ನಡೆಯುತ್ತಿದೆ. ಆದರೆ ದೂರದ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸಿಎಎ ಪರ ಮೆರವಣಿಗೆ ನಡೆಸಿ ಗಮನ ಸೆಳೆದಿದ್ದಾರೆ.
ಹೌದು, ಅಮೆರಿಕದ ಚಿಕಾಗೋದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಭಾರತ ಸರ್ಕಾರದ ನಿರ್ಣಯದ ಪರ ಅನಿವಾಸಿ ಭಾರತೀಯರು ಮೆರವಣಿಗೆ ನಡೆಸಿದ್ದಾರೆ.
ಪೌರತ್ವ ಕಾಯ್ದೆ ಬೆಂಬಲಿಸಿ ಪ್ರಧಾನಿಗೆ 1 ಕೋಟಿ ಪತ್ರ: ಶೋಭಾ!
ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಸುಮಾರು 300 ಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಸಿಎಎ ಪರ ಘೋಷಣೆಗಳನ್ನು ಕೂಗಿದರು. ಅಲ್ಲದೇ ಕಾಯ್ದೆ ಜಾರಿಗೆ ತರುವ ಮೋದಿ ಸರ್ಕಾರದ ನಿರ್ಣಯವನ್ನು ಬೆಂಬಲಿಸಿದರು.
ಈ ವೇಳೆ ಸಿಎಎ ಜಾರಿಗೆ ತರುವಂತೆ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾದ ಮನವಿ ಪತ್ರಕ್ಕೆ ಅನಿವಾಸಿ ಭಾರತೀಯರು ಸಹಿ ಮಾಡಿದ್ದು ವಿಶೇಷವಾಗಿತ್ತು.
ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!
ಮೆರವಣಿಗೆಯಲ್ಲಿ ಪ್ರಮುಖ ಅನಿವಾಸಿ ಭಾರತೀಯರಾದ ಅಮಿತಾಬ್ ಮಿತ್ತಲ್, ನೀರವ್ ಪಟೇಲ್, ಹೇಮಂತ್ ಪಟೇಲ್, ಅಮರ್ ಉಪಾಧ್ಯಾಯ್ ಸೇರಿದಂತೆ ಹಲವರು ಭಾಗವಹಿಸಿದ್ದರು.