ಇರಾನ್‌ನ 52 ತಾಣಗಳು ಕ್ಷಣಾರ್ಧದಲ್ಲಿ ಧ್ವಂಸ: ಟ್ರಂಪ್ ಎಚ್ಚರಿಕೆ!

By Suvarna News  |  First Published Jan 5, 2020, 2:19 PM IST

ಇರಾನ್-ಅಮೆರಿಕ ನಡುವೆ ಬಿಗುವಿನ ವಾತಾವರಣ| ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡ| ದಾಳಿಯ ಕುರಿತು ಕನಸಿನಲ್ಲೂ ಯೋಚಿಸಬೇಡಿ ಎಂದ ಅಮೆರಿಕ ಅಧ್ಯಕ್ಷ| ಇರಾನ್ ರಾಷ್ಟ್ರದ 52 ತಾಣಗಳು ಕ್ಷಣಾರ್ಧದಲ್ಲಿ ಧ್ವಂಸ ಮಾಡುತ್ತೇವೆ ಎಂದ ಟ್ರಂಪ್| ಇರಾನ್ ಸಾಂಸ್ಕೃತಿಕ ಪ್ರದೇಶಗಳು ಕ್ಷಣಾರ್ಧದಲ್ಲಿ  ನಾಮಾವಶೇಷ ಮಾಡುತ್ತೇವೆ ಎಂದ ಟ್ರಂಪ್| ಉನ್ನತ ಸೇನಾಧಿಕಾರಿ ಖಾಸಿಂ ಸುಲೇಮನಿ ಹತ್ಯೆಗೆ ಪ್ರತೀಕಾರಕ್ಕಾಗಿ ಕಾಯುತ್ತಿರುವ ಇರಾನ್| 


ವಾಷಿಂಗ್ಟನ್(ಜ.05): ಅಮೆರಿಕ-ಇರಾನ್ ನಡುವೆ ಯುದ್ಧದ ಕಾರ್ಮೋಡ ಕವಿಯತೊಡಗಿದ್ದು, ತನ್ನ ಉನ್ನತ ಸೇನಾಧಿಕಾರಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಹವಣಿಸುತ್ತಿದೆ.

ಆದರೆ ದಾಳಿಯ ಕುರಿತು ಕನಸಿನಲ್ಲೂ ಯೋಚಿಸಬೇಡಿ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಒಂದು ವೇಳೆ ದಾಳಿಗೆ ಮುಂದಾದರೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Latest Videos

undefined

ಅಮೆರಿಕ, ಇರಾನ್‌ ನಡುವೆ ಯುದ್ಧಾತಂಕ: ವಿಶ್ವ ತಲ್ಲಣ!

....targeted 52 Iranian sites (representing the 52 American hostages taken by Iran many years ago), some at a very high level & important to Iran & the Iranian culture, and those targets, and Iran itself, WILL BE HIT VERY FAST AND VERY HARD. The USA wants no more threats!

— Donald J. Trump (@realDonaldTrump)

ನಮ್ಮ ಮೇಲೆ ಪ್ರತಿ ದಾಳಿ ನಡೆಸಿದ್ದೇ ಆದರೆ, ಇರಾನ್ ರಾಷ್ಟ್ರದ 52 ತಾಣಗಳು ಹಾಗೂ ಸಾಂಸ್ಕೃತಿಕ ಪ್ರದೇಶಗಳು ಕ್ಷಣಾರ್ಧದಲ್ಲಿ ಧ್ವಂಸಗೊಳ್ಳುತ್ತವೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಪ್ರತಿದಾಳಿಗೆ ಸಂಚು ರೂಪಿಸುತ್ತಿರುವ ಇರಾನ್ ರಾಷ್ಟ್ರಕ್ಕೆ ಇದು ನಮ್ಮ ಗಂಭೀರ ಎಚ್ಚರಿಕೆ ಎಂದಿರುವ ಟ್ರಂಪ್,  ನಮ್ಮ ವಿರುದ್ಧದ ಯಾವುದೇ ಸೇನಾ ಕಾರ್ಯಾಚರಣೆ ಆ ರಾಷ್ಟ್ರದ ಅವನತಿಗೆ ಮುನ್ನುಡಿ ಬರೆದಂತೆ ಎಂದು ಹೇಳಿದ್ದಾರೆ.

ಅಮೆರಿಕಾ ಮೇಲೆ ಇರಾನ್‌ ಕ್ಷಿಪಣಿ ದಾಳಿ: 3ನೇ ವಿಶ್ವಯುದ್ಧ ಆಗುತ್ತಾ?

They attacked us, & we hit back. If they attack again, which I would strongly advise them not to do, we will hit them harder than they have ever been hit before! https://t.co/qI5RfWsSCH

— Donald J. Trump (@realDonaldTrump)

ಇರಾನ್‌ನ ಉನ್ನತ ಸೇನಾಧಿಕಾರಿ ಖಾಸಿಂ ಸುಲೇಮನಿ ಅವರನ್ನು ಅಮೆರಿಕ ವಾಯುದಾಳಿಯಲ್ಲಿ ಕೊಂದು ಹಾಕಿತ್ತು. ಇದರಿಂದ ರೊಚ್ಚಿಗೆದ್ದಿರುವ ಇರಾನ್, ಅಮೆರಿಕದ ವಿರುದ್ಧ ಸೇಡಿಗೆ  ಪರಿತಪಿಸುತ್ತಿದೆ.

click me!