ಮಕ್ಕಳಿಗಾಗಿ 26 ಲಕ್ಷ ಮೌಲ್ಯದ ಸಿಗರೆಟ್‌ ದಾಸ್ತಾನಿಟ್ಟ ತಂದೆ!

By Suvarna News  |  First Published Jan 5, 2020, 12:09 PM IST

ಮಕ್ಕಳಿಗಾಗಿ 26 ಲಕ್ಷದ ಸಿಗರೆಟ್‌ ‘ಆಸ್ತಿ’ ಕೂಡಿಟ್ಟ!| ತಮಾಷೆಯಲ್ಲ... ಇಲ್ಲಿದೆ ಬ್ರಿಟನ್ ಸಂಗೀತಕಾರನ ಕತೆ


ಲಂಡನ್[ಜ.05]: ಎಲ್ಲರೂ ತಮ್ಮ ಮಕ್ಕಳಿಗಾಗಿ ಹಣ ಹಾಗೂ ಆಸ್ತಿಯನ್ನು ಕೂಡಿಡುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಸಿಗರೆಟ್‌ಗಳನ್ನು ಜೋಪಾನವಾಗಿ ಕಾಯ್ದಿಟ್ಟಿದ್ದಾನೆ.

ಬ್ರಿಟನ್‌ ಸಂಗೀತಗಾರ ನೋಯೆಲ್‌ ಗಲಾಘರ್‌ ವಿಪರೀತ ಸಿಗರೆಟ್‌ ಸೇವನೆ ಮಾಡುತ್ತಿದ್ದರು. ಆದರೆ, ಮಕ್ಕಳು ಸಿಗರೆಟ್‌ ಸೇವನೆ ಮಾಡಲು ಆರಂಭಿಸಿದ್ದಾರೆ ಎಂಬ ಸುದ್ದಿ ತಿಳಿದು 4 ವರ್ಷದ ಹಿಂದೆ ಸಿಗರೆಟ್‌ ಸೇವನೆಯನ್ನೇ ಬಿಟ್ಟಿದ್ದರು.

Tap to resize

Latest Videos

ಆದರೆ, ನೋವೆಲ್‌ ತಮ್ಮ ಮನೆಯ ಬೀರುವಿನಲ್ಲಿ ಇದ್ದ ಸಾವಿರಾರು ಮಾಲ್ರ್ಬೊರೋ ಗೋಲ್ಡ್‌ ಸಿಗರೆಟ್‌ಗಳನ್ನು ಹಾಗೆಯೇ ಇಟ್ಟುಕೊಂಡಿದ್ದಾರೆ. ಅವುಗಳ ಮೌಲ್ಯ ಈಗ ಸುಮಾರು 26.29 ಲಕ್ಷ ರು. ಆಗಲಿದೆ.

ಒಂದು ಪ್ಯಾಕ್‌ ಮಾಲ್ರ್ಬೊರೋ ಗೋಲ್ಡ್‌ ಸಿಗರೆಟ್‌ ಪಾಕ್‌ನ ಬೆಲೆ 4 ವರ್ಷದಲ್ಲಿ ಸುಮಾರು 1127 ರು. ಹೆಚ್ಚಳ ಆಗಿದೆ.

click me!