ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶಗಳಲ್ಲಿ ಒಂದು ಎಂದ ಸಿಪ್ರಿ

Published : Mar 14, 2022, 11:18 PM IST
ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶಗಳಲ್ಲಿ ಒಂದು ಎಂದ ಸಿಪ್ರಿ

ಸಾರಾಂಶ

ಜಾಗತಿಕ ಆಮದಿನಲ್ಲಿ ಶೇಕಡ 11 ಪ್ರತಿಶತ ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದೆ ಎಂದು ಸಿಪ್ರಿ ಹೇಳಿದೆ.

ಜಾಗತಿಕ ಆಮದಿನಲ್ಲಿ ಶೇಕಡ 11 ಪ್ರತಿಶತ ಹೊಂದಿರುವ ಭಾರತವು ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಲ್ಲಿ ಒಂದಾಗಿದೆ ಎಂದು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್- ಎಸ್‌ಐಪಿಆರ್‌ಐ (Stockholm International Peace Research Institute-SIPRI) ಹೇಳಿದೆ.

ಚೀನಾ (China) ಮತ್ತು ಏಷ್ಯಾ (Asia) ಮತ್ತು ಓಸೀನಿಯಾದ (Ocenia ) ಹಲವು ದೇಶಗಳ ನಡುವಿನ ಗಡಿ ಸಮಸ್ಯೆಗಳು ಈ ಆಮದುಗಳಿಗೆ ಮುಖ್ಯ ಕೊಡುಗೆಗಳಾಗಿವೆ. 2012-16 ಮತ್ತು 2017-21 ರ ನಡುವೆ ಭಾರತದ ಶಸ್ತ್ರಾಸ್ತ್ರ ಆಮದು ಶೇಕಡಾ 21ರಷ್ಟು ಕಡಿಮೆಯಾಗಿದೆಯಾದರೂ, ಅದು ಇನ್ನೂ ಜಾಗತಿಕವಾಗಿ ಅತಿದೊಡ್ಡ ಆಮದುದಾರನಾಗಿ ಉಳಿದಿದೆ.

ಭಾರತವು ಮುಂದಿನ ಕೆಲವು ವರ್ಷಗಳಲ್ಲಿ ಹಲವಾರು ಪೂರೈಕೆದಾರರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಆಮದುಗಳನ್ನು ಯೋಜಿಸುವ ಪ್ರಕ್ರಿಯೆಯಲ್ಲಿದೆ ಎಂದು SIPRI ಶಸ್ತ್ರಾಸ್ತ್ರ ವರ್ಗಾವಣೆ ಕಾರ್ಯಕ್ರಮದ ಹಿರಿಯ ಸಂಶೋಧಕ ಸೈಮನ್ ಟಿ ವೆಝೆಮೆನ್ ಹೇಳಿದರು.

HIJAB VERDICT: ಅಂತಿಮ ತೀರ್ಪು ಹಿನ್ನೆಲೆ ಶಾಲಾ-ಕಾಲೇಜ್ ಬಂದ್, ಬೆಂಗಳೂರಿನಲ್ಲಿ 1 ವಾರ ನಿಷೇದಾಜ್ಞೆ

ಈ ಉದ್ವಿಗ್ನತೆಗಳು ಈ ದೇಶಗಳು ಅಮೆರಿಕಾದ ಶಸ್ತ್ರಾಸ್ತ್ರ ಆಮದು ಮಾಡುಕೊಳ್ಳುವಲ್ಲಿ ಪ್ರಮುಖ ಅಂಶವಾಗಿದೆ. ಅಮೆರಿಕಾ, ಏಷ್ಯಾ ಮತ್ತು ಓಸಿನಿಯಲ್‌ಗೆ ಅತಿದೊಡ್ಡ ಪೂರೈಕೆದಾರನಾಗಿ ಉಳಿದಿದೆ. ಏಕೆಂದರೆ ಚೀನಾವನ್ನು ಗುರಿಯಾಗಿಟ್ಟುಕೊಂಡು ಶಸ್ತ್ರಾಸ್ತ್ರ ರಫ್ತು ಯುಎಸ್ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದೆ ಎಂದು ವೆಝೆಮನ್ ಸೇರಿಸಲಾಗಿದೆ.

ಏಷ್ಯಾ ಮತ್ತು ಓಷಿಯಾನಿಯಾ ಪ್ರಮುಖ ಶಸ್ತ್ರಾಸ್ತ್ರಗಳಿಗೆ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ಪ್ರದೇಶವಾಗಿದ್ದು, 2017-21ರಲ್ಲಿ 43 ಪ್ರತಿಶತದಷ್ಟು ಜಾಗತಿಕ ವರ್ಗಾವಣೆಗಳನ್ನು ನಡೆದಿವೆ. ಭಾರತ, ಆಸ್ಟ್ರೇಲಿಯಾ, ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಮತ್ತು ಜಪಾನ್ ಆರು ದೇಶಗಳು ಜಾಗತಿಕವಾಗಿ ಅತಿದೊಡ್ಡ ಆಮದುದಾರ ದೇಶಗಳಾಗಿವೆ.

ಶುಲ್ಕ ಕಿರುಕುಳ, ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಉಕ್ರೇನ್ ವಿರುದ್ಧದ ಹೊರಾಟಕ್ಕೆ ಚೀನಾ ಸೇನಾ ಸಹಕಾರ ಕೇಳಿತಾ ರಷ್ಯಾ? ಅಮೆರಿಕದ ಅರೋಪವೇನು?: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ, ಚೀನಾ ಸೇನೆಯ ಸಹಕಾರವನ್ನು ಕೋರಿದೆ ಎಂದು ಅಮೆರಿಕ ಆಧಿಕಾರಿಗಳು ಆರೋಪಿಸಿದ್ದಾರೆ. ಒಂದು ವೇಳೆ ರಷ್ಯಾ ಮನವಿಗೆ ಸ್ಪಂದಿಸಿ ಚೀನಾ ಸೇನಾ ಸಹಕಾರ ನೀಡಿದಲ್ಲಿ ಚೀನಾಗೆ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಸಿದೆ. ಚೀನಾ ರಷ್ಯಾಗೆ ನೆರವು ನೀಡಲು ನಾವು ಬಿಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. 

ರಷ್ಯಾ ಪರ ಚೀನಾ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಬೈಡನ್ ಸರ್ಕಾರ ಆರೋಪಿಸಿದೆ. ರಷ್ಯಾ ಉಕ್ರೇನ್ ನಲ್ಲಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಬಳಸಲು ಸಹಾಯವಾಗುವಂತೆ ಚೀನಾ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. 

ರಷ್ಯಾಗೆ ಅಮೆರಿಕ ಸೇರಿದಂತೆ ಹಲವು ದೇಶಗಳು ಆರ್ಥಿಕ ನಿರ್ಬಂಧಗಳನ್ನು ವಿಧಿಸಿವೆ. ಅದರಿಂದ ಪಾರಾಗಲು ಚೀನಾ ರಷ್ಯಾಗೆ ಸಹಕರಿಸುತ್ತಿದೆ ಎಂದೂ ಅಮೆರಿಕ ಆರೋಪಿಸಿದೆ.

ಯುದ್ಧದಲ್ಲಿ ಹಿನ್ನಡೆ, 8 ಮೇಜರ್ ಜನರಲ್ ಗಳನ್ನು ಬದಲಿಸಿದ ಪುಟಿನ್!:ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ 8 ಉನ್ನತ ಜನರಲ್‌ಗಳನ್ನು ವಜಾ ಮಾಡಿದ್ದಾರೆ. ಅಲ್ಲದೆ ಉಕ್ರೇನ್ ಯುದ್ಧದಲ್ಲಿ ಮಾಸ್ಕೋದ ನಷ್ಟದ ಬಗ್ಗೆ ಅವರ ಗುಪ್ತಚರ ಅಧಿಕಾರಿಗಳ ಮೇಲೆ ಪುಟಿನ್ ಕೋಪಗೊಂಡಿದ್ದಾರೆ ಎಂದು ಉಕ್ರೇನ್ ಹೇಳಿದೆ. ಪುಟ್ಟರಾಷ್ಟ್ರ ಉಕ್ರೇನ್ ಮೇಲೆ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ ದಾಳಿ ಮಾಡಿ ಬರೊಬ್ಬರಿ 18 ದಿನಗಳೇ ಕಳೆದರೂ ಈ ವರೆಗೂ ಯುದ್ಧದಲ್ಲಿ ರಷ್ಯಾ ಸೇನೆ ಉಕ್ರೇನ್ ಅನ್ನು ಮಣಿಸಲು ಸಾಧ್ಯವಾಗಿಲ್ಲ. ಯುದ್ಧಕ್ಕಾಗಿ ರಷ್ಯಾ ಸರ್ಕಾರ ದಿನಂ ಪ್ರತೀ ಮಿಲಿಯನ್ ಡಾಲರ್ ಗಟ್ಟಲೇ ಹಣವನ್ನು ಸುರಿಯುತ್ತಿದ್ದು, ಇದರಿಂದ ಅಕ್ಷರಶಃ ರಷ್ಯಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆದಾಗ್ಯೂ ಉಕ್ರೇನ್ ಮೇಲೆ ರಷ್ಯಾಸೇನೆಗೆ ಗೆಲುವು ಸಾಧ್ಯವಾಗುತ್ತಿಲ್ಲ.

ಇದು ರಷ್ಯಾ ಅಧ್ಯಕ್ಷ ಪುಟಿನ್ ಕೋಪ ನೆತ್ತಿಗೇರುವಂತೆ ಮಾಡಿದೆ. ಹೀಗಾಗಿ ಯುದ್ಧ ಆರಂಭವಾದ ದಿನದಿಂದ ಈ ವರೆಗೂ ರಷ್ಯಾ ಸರ್ಕಾರ ಸುಮಾರು 8 ಮಂದಿ ಉನ್ನತ ಮೇಜರ್ ಜನರಲ್ ಗಳನ್ನು ಅವರ ಸ್ಥಾನದಿಂದ ವಜಾಗೊಳಿಸಿದೆ. ಈ ಬಗ್ಗೆ ಉಕ್ರೇನ್ ರಕ್ಷಣಾ ಕಾರ್ಯದರ್ಶಿ ಒಲೆಕ್ಸಿ ಡ್ಯಾನಿಲೋವ್ ಅವರು ಮಾಹಿತಿ ನೀಡಿದ್ದು, 'ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ)ನ ಸೋಲಿನ ಸರಣಿ ರಷ್ಯಾಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದು,  ರಷ್ಯಾದ ಎಂಟು ಸೇನಾ ಜನರಲ್‌ಗಳನ್ನು ಇದುವರೆಗೆ ವಜಾಗೊಳಿಸಲಾಗಿದೆ. ರಷ್ಯಾ ತನ್ನ ಯುದ್ಧ ತಂತ್ರಗಳನ್ನು ಬದಲಾಯಿಸಿದೆ. ಬದಲಾದ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!