ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ: ರಸ್ತೆ ದಾಟುತ್ತಿರುವ ನೀರು ನಾಯಿಗಳ ಹಿಂಡು

Suvarna News   | Asianet News
Published : Mar 14, 2022, 06:24 PM ISTUpdated : Mar 14, 2022, 06:26 PM IST
ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ: ರಸ್ತೆ ದಾಟುತ್ತಿರುವ ನೀರು ನಾಯಿಗಳ ಹಿಂಡು

ಸಾರಾಂಶ

ಸಿಂಗಾಪುರದಲ್ಲಿ ಕಂಡು ಬಂದ ಅಪರೂಪದ ದೃಶ್ಯ ರಸ್ತೆ ದಾಟುತ್ತಿರುವ ನೀರು ನಾಯಿಗಳ ಹಿಂಡು ರಸ್ತೆ ದಾಟಲು ನೆರವಾದ ಟ್ರಾಫಿಕ್‌ ಪೊಲೀಸ್‌

ಸಿಂಗಾಪುರದಲ್ಲಿ ನೀರು ನಾಯಿಗಳ ಹಿಂಡು ನೀರು ಬಿಟ್ಟು ರಸ್ತೆಗಳಿದಿದ್ದು, ಈ ವೇಳೆ ವಾಹನಗಳಿಂದ ತುಂಬಿದ್ದ ರಸ್ತೆಯನ್ನು ದಾಟಲು ಟ್ರಾಫಿಕ್‌ ಪೊಲೀಸ್‌ ಈ ನೀರುನಾಯಿಗಳಿಗೆ ನೆರವಾಗಿದ್ದಾರೆ. ರಸ್ತೆಯಲ್ಲಿ ಸಂಚಾರವನ್ನು ಕೆಲ ಕಾಲ ನಿಲ್ಲಿಸುವ ಮೂಲಕ ನೀರು ನಾಯಿಗಳು ರಸ್ತೆ ದಾಟಿ ಮತ್ತೊಂದೆಡೆ ತಲುಪಲು ಸಹಾಯ ಮಾಡಿದ್ದಾರೆ. ಸಿಂಗಾಪುರದ ಅಧ್ಯಕ್ಷೀಯ ಭವನದ ಹೊರಗಿನ ಮಲ್ಟಿಲೇನ್ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ವೀಡಿಯೊದಲ್ಲಿ ಪೊಲೀಸರು ನೀರುನಾಯಿಗಳ ಕುಟುಂಬವನ್ನು ಬಿಡುವಿಲ್ಲದ ರಸ್ತೆಯನ್ನು ಸುರಕ್ಷಿತವಾಗಿ ದಾಟಲು ಸಹಾಯ ಮಾಡಿದರು. 

16 ನೀರುನಾಯಿಗಳು ರಸ್ತೆ ದಾಟುವ ವೇಳೆ ಟ್ರಾಫಿಕ್ ಲೈಟ್ ಕೂಡ ಕೆಂಪು ಬಣ್ಣಕ್ಕೆ ತಿರುಗಿತ್ತು. ಈ ವಿಡಿಯೋವನ್ನು ಡಬಲ್ ಡೆಕ್ಕರ್ ಬಸ್‌ನಲ್ಲಿ ಪ್ರಯಾಣಿಕರು ಚಿತ್ರೀಕರಿಸಿದ್ದಾರೆ ಎಂದು ತೋರುತ್ತದೆ. ಈ ವೀಡಿಯೊವನ್ನು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್(Lee Hsien Loong) ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ಸ್ಥಳೀಯ ನೀರುನಾಯಿಗಳು ಇಸ್ತಾನಾದಲ್ಲಿ ಕಂಡು ಬಂದಿವೆ. ಇಸ್ತಾನಾ ಸಿಬ್ಬಂದಿಯ ಕಾಳಜಿಗೆ ಧನ್ಯವಾದಗಳು ಸಾರ್ವಜನಿಕರು ನಮ್ಮ ನಗರ ಪರಿಸರದಲ್ಲಿ ಸುರಕ್ಷಿತವಾಗಿ ನಮ್ಮೊಂದಿಗೆ ಅವುಗಳೂ ಅಸ್ತಿತ್ವದಲ್ಲಿ ಇರಲು ಸಹಾಯ ಮಾಡಿದ್ದಾರೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. 

ಈ ವಿಡಿಯೋ ವೈರಲ್ ಆಗಿದ್ದು, ಸಿಂಗಾಪುರ ಟ್ರಾಫಿಕ್ ಪೊಲೀಸರ ಹೃದಯಸ್ಪರ್ಶಿ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಇದು ತುಂಬಾ ಅದ್ಭುತವಾಗಿದೆ. ಈ ರೀತಿಯ ಪರಿಸ್ಥಿತಿಯನ್ನು ನೋಡುವಾಗ ನಾವು ಕಾಳಜಿ ವಹಿಸಬೇಕು ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ವೀಡಿಯೊದಲ್ಲಿರುವ ಈ ಪ್ರಾಣಿಗಳು ಲುಟ್ರೊಗೇಲ್ ಪರ್ಸ್ಪಿಸಿಲ್ಲಾಟಾ (Lutrogale perspicillata), ಅವುಗಳ ವೆಲ್ವೆಟ್ ಕೋಟ್‌ಗೆ (velvety coat) ಹೆಸರುವಾಸಿಯಾಗಿದೆ ಮತ್ತು ಆಗ್ನೇಯ ಏಷ್ಯಾದ ಅತಿದೊಡ್ಡ ಜಾತಿಯ ನೀರುನಾಯಿಗಳಾಗಿವೆ.

ಭದ್ರಾನದಿಯಲ್ಲಿ ನೀರು ನಾಯಿ ಪ್ರತ್ಯಕ್ಷ

ನೀರುನಾಯಿ(Lutra lutra)ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿವೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ, ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳಾಗಿವೆ. ಇವುಗಳ ಮುಖ್ಯ ಆಹಾರ ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು. ಇವುಗಳ ಗರ್ಭಧಾರಣಾ ಅವಧಿ ಸುಮಾರು 60 ದಿನಗಳಾಗಿವೆ.

ಬೆಳ್ತಂಗಡಿಯಲ್ಲಿ ನೀರು ನಾಯಿಗಳ ಗುಂಪು ಪ್ರತ್ಯಕ್ಷ!
ತುಂಗಭದ್ರಾ ನದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಪರೂಪದ 'ನೀರುನಾಯಿ'ಗಳಿವೆ (ಆಟರ್‌).ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದಿಂದ ಹೊಸಪೇಟೆ ತಾಲ್ಲೂಕಿನ ಹಂಪಿ, ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಈ ಭಾಗಗಳ ಮೂಲಕ ತುಂಗಭದ್ರೆ ಹರಿಯುವ ಕಾರಣದಿಂದ ಈ ಪ್ರದೇಶವನ್ನೇ ನೀರುನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು 'ನೀರು ನಾಯಿ ಸಂರಕ್ಷಿತ ಪ್ರದೇಶ' ಎಂದು ಘೋಷಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!