ಟೊಮೆಟೊ ಬೆಳೆದು ಗಿನ್ನೆಸ್ ದಾಖಲೆ : ಒಂದೇ ಗಿಡದಲ್ಲಿ 1200 ಹೆಚ್ಚು ಟೊಮೆಟೋ

By Suvarna NewsFirst Published Mar 14, 2022, 7:52 PM IST
Highlights
  • ಗಿನ್ನೆಸ್ ಪುಟ ಸೇರಿದ ಡೌಗ್ಲಾಸ್ ಸ್ಮಿತ್ 
  • ಟೊಮೆಟೊ ಬೆಳೆದು ಗಿನ್ನೆಸ್ ದಾಖಲೆ
  • ಒಂದೇ ಗಿಡದಲ್ಲಿ 1200 ಹೆಚ್ಚು ಟೊಮೆಟೋ

ವ್ಯಕ್ತಿಯೊಬ್ಬರು ಒಂದೇ ಗಿಡದಲ್ಲಿ  1200 ಕ್ಕೂ ಹೆಚ್ಚು ಟೊಮೆಟೊಗಳನ್ನು ಬೆಳೆದು ಗಿನ್ನೆಸ್‌ ಬುಕ್ ಆಫ್‌ ರೆಕಾರ್ಡ್ ಪುಟ ಸೇರಿದ್ದಾರೆ. ಡೌಗ್ಲಾಸ್ ಸ್ಮಿತ್ ಎಂಬ ವ್ಯಕ್ತಿ ಒಂದೇ ಗಿಡದಲ್ಲಿ 1,269 ಟೊಮೆಟೊಗಳನ್ನು ಬೆಳೆದು ತಮ್ಮದೇ ಹೆಸರಿನಲ್ಲಿದ್ದ ಹಳೇ ದಾಖಲೆಯನ್ನು ಮುರಿದರು. 

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಡೀ ಜಗತ್ತೇ ಲಾಕ್‌ಡೌನ್‌ ಆಗಿತ್ತು. ಆ ಸಂದರ್ಭವನ್ನು ಅನೇಕರು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗೆಯೇ ಯುಕೆ ನಿವಾಸಿ ಡೌಗ್ಲಾಸ್ ಸ್ಮಿತ್‌ ಅವರು  ತೋಟಗಾರಿಕೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವ ಅವಕಾಶ ಪಡೆದು ಈ ಸಾಧನೆ ಮಾಡಿದ್ದಾರೆ. ಇದರ ಪರಿಣಾಮವಾಗಿ, ಸ್ಮಿತ್ 2021 ರಲ್ಲಿ ಒಂದೇ ಗಿಡದಲ್ಲಿ 839 ಟೊಮೆಟೊಗಳನ್ನು ಉತ್ಪಾದಿಸುವ ಟೊಮೆಟೊ ಸಸ್ಯವನ್ನು ಬೆಳೆಸಿದರು. ಇದಾಗಿ ಕೆಲವೇ ತಿಂಗಳುಗಳಲ್ಲಿ, ಅವರು ತಮ್ಮದೇ ಆದ ದಾಖಲೆಯನ್ನು ಮುರಿದಿದ್ದಾರೆ. 

A new Guinness world record! Delighted to announce that my record 1,269 tomatoes on a single truss has just been approved. It breaks my own record of 839 from last year - https://t.co/IF0LH73iOa pic.twitter.com/QgPJP3NsFk

— Douglas Smith (@sweetpeasalads)

 

ಸ್ಮಿತ್ ಅವರು ಈಗ ಮತ್ತೊಂದು ಹಸಿರುಮನೆಯಲ್ಲಿ ಬೆಳೆದ ಟೊಮೆಟೋ (tomato) ಗಿಡದಲ್ಲಿ ಅದಕ್ಕಿಂತ ಹೆಚ್ಚು ಟೊಮೆಟೋಗಳನ್ನು ಬೆಳೆಸಿ ತಮ್ಮದೇ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ಈ ವರ್ಷದ ಮಾರ್ಚ್ 9 ರಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಿಬ್ಬಂದಿ ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಾರಿ ಅವರು ಒಂದೇ ಗಿಡದಲ್ಲಿ  1,269 ಟೊಮೆಟೊಗಳನ್ನು ಉತ್ಪಾದಿಸಿದ್ದಾರೆ. ಸೆಪ್ಟೆಂಬರ್ 27, 2021 ರ ವೇಳೆಗೆ ಈ ಟೊಮೆಟೊ ಸಸ್ಯವನ್ನು ಸಂಪೂರ್ಣವಾಗಿ ಬೆಳೆಸಲಾಗಿತ್ತು. ಈ ಔಪಚಾರಿಕ ದಾಖಲೆಯ ಅನುಮೋದನೆಯನ್ನು ನೀಡುವ ಮೊದಲು ಪರಿಶೀಲನೆ ಪ್ರಕ್ರಿಯೆಯು ಪೂರ್ಣಗೊಳ್ಳಲು ವಾರಗಳನ್ನು ತೆಗೆದುಕೊಂಡಿತು. 

ಟೊಮೆಟೋ ಬೆಳೆಗೆ ಚುಕ್ಕಿ ರೋಗ ಕಾಟ : ರೈತರಲ್ಲಿ ಆತಂಕ
 

ಸ್ಮಿತ್ ಟ್ವಿಟರ್‌ನಲ್ಲಿ ಈ ಸಾಧನೆಯನ್ನು ಪ್ರಕಟಿಸಿದ್ದು, ಪ್ರಪಂಚದಾದ್ಯಂತದ ತೋಟಗಾರಿಕೆಯ ಬಗ್ಗೆ ಆಸಕ್ತಿ ಇರುವವರು ಅಚ್ಚರಿಯ ಜೊತೆ ಖುಷಿ ವ್ಯಕ್ತಪಡಿಸಿದ್ದಾರೆ. ಒ ಮೈ ಗಾಡ್‌ ಎಂತಹ ಟೊಮೆಟೊಗಳು, ನಾನಿದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೊಬ್ಬರು ಇದು ಯಾವ ವಾಮಾಚಾರವೇ ಸರಿ ನಂಬಲಾಗುತ್ತಿಲ್ಲ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. 

Giant sunflower alert! 🌻 I think that’s about as far as it’s likely to go? The 4 year old said he wanted a giant one...

21ft 3 over the curve to tip of sepal. Just shy of 20ft in absolute terms. pic.twitter.com/HQrhYmAMgO

— Douglas Smith (@sweetpeasalads)

ಈ ಹಿಂದೆ, ಸ್ಮಿತ್ ತನ್ನ ಸ್ಟಾನ್‌ಸ್ಟೆಡ್ ಅಬಾಟ್ಸ್ (Stanstead Abbotts) ಮನೆಯ ಹಿತ್ತಲಿನಲ್ಲಿ 21 ಅಡಿ ಎತ್ತರದ ಬೃಹತ್ ಸೂರ್ಯಕಾಂತಿ ಗಿಡ ಬೆಳೆದು ಸುದ್ದಿಯಾಗಿದ್ದರು. ಈ ಬೃಹತ್ ಸೂರ್ಯಕಾಂತಿ ಗಿಡ ಅವರ ಮನೆಯಷ್ಟೇ ಎತ್ತರವಾಗಿತ್ತು. ಜಗತ್ತಿನ ಅತ್ಯಂತ ತೂಕದ ಟೊಮೆಟೋ ಬೆಳೆಯುವ ಮೂಲಕ ಸೆಪ್ಟೆಂಬರ್ 2020ರಲ್ಲಿ, ಸ್ಮಿತ್ ಆಹಾರ ಸಂಬಂಧಿತ ಇಂತಹದೇ ದಾಖಲೆಯೊಂದನ್ನು ಮುರಿದಿದ್ದರು. ಇವರು ಬೆಳೆದ ಟೊಮೆಟೋ 3.1 ಕೆಜಿ ತೂಗುತ್ತಿತ್ತು. ಇದಕ್ಕೂ ಮೊದಲು ಪೀಟರ್ ಗ್ಲೇಜ್‌ಬ್ರೂಕ್ (Peter Glazebrook) ಎಂಬುವವರು 2.8 ಕೆಜಿಯಷ್ಟು  ತೂಗುವ ಟೊಮೆಟೋ ಬೆಳೆದು ದಾಖಲೆ ಮಾಡಿದ್ದರು.

ಟೊಮೆಟೋ ದರ ಏರಿದರೂ ರೈತನ ಜೇಬು ಖಾಲಿ

click me!