ಶುಲ್ಕ ಕಿರುಕುಳ, ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಲ್ಕ ಕಿರುಕುಳ ಕೊಡುತ್ತಿರುವ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು, ದೂರಗಳ ಹಿನ್ನೆಲೆಯಲ್ಲಿ ಹಲವು ಶಾಲೆಗಳ ‌ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Karnataka Child Rights Commission summons to  Public Instruction Commissioner gow

ಬೆಂಗಳೂರು(ಮಾ.14): ಶುಲ್ಕ ಕಿರುಕುಳ ಕೊಡುತ್ತಿರುವ ಖಾಸಗಿ ಶಾಲೆಗಳಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (Karnataka State Commission for Protection of Child Rights) ಬಿಸಿ ಮುಟ್ಟಿಸಲು  ಮುಂದಾಗಿದೆ. ಶುಲ್ಕ ಕಿರುಕುಳ ನೀಡುತ್ತಿರುವ ಬಾಲ್ಡ್‌ವಿನ್‌ ಕೋ ಎಜುಕೇಷನ್ (Baldwin Co Education), ಪ್ರೆಸಿಡೆನ್ಸಿ ಶಾಲೆ (Presidency School), ‌ನಾರಾಯಣ ಒಲಂಪಿಯೆಡ್ (Narayana Olympiad School), ಸೌಂದರ್ಯ ಶಾಲೆ (Soundarya School), ಸಂತ ಜರ್ಮನ್ ಅಕಾಡೆಮಿ ಸೇರಿ ಹಲವು ಶಾಲೆಗಳ ‌ವಿರುದ್ಧ ಕ್ರಮಕ್ಕೆ ಸೂಚನೆ ಹೊರಡಿಸಲಾಗಿದೆ.

ಪೋಷಕರು ಶಾಲೆಗಳ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ಮಾರ್ಚ್ 7 ರಂದು ದೂರು ನೀಡಿದ್ದರು. ಶುಲ್ಕ ಕಿರುಕುಳ ನೀಡುತ್ತಿರುವ  ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರು ಕೊಡಲಾಗಿತ್ತು. ಕೂಡಲೇ ಪ್ರತಿಕ್ರಿಯೆ ನೀಡಿರುವ ಮಕ್ಕಳ ಆಯೋಗವು ಮೂರು ದಿನದಲ್ಲಿ ಶಾಲೆಗಳ ಮೇಲೆ ತೆಗೆದುಕೊಂಡಿರುವ ಕ್ರಮಗಳ ಕುರಿತು   ವರದಿ ನೀಡಲು  ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ  ನೋಟಿಸ್ ನೀಡಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತನ್ನ ನೋಟಿಸ್ ನಲ್ಲಿ  ಕೇಳಿರುವ ಸ್ಪಷ್ಟನೆ ಇಂತಿದೆ.
1. ಶಾಲಾ ಶುಲ್ಕವನ್ನು ಶಾಲಾ ವೆಬ್‌ಸೈಟ್‌ನಲ್ಲಿಅನಾವರಣ ಮಾಡದಿರುವ ಕುರಿತು
2. ಪರೀಕ್ಷಾ ಪ್ರವೇಶ ಪತ್ರದ ಬಗ್ಗೆ: 1ರಿಂದ 9ನೇ ತರಗತಿಯವರಿಗೆ ಇದುವರೆಗೆ ಶಾಲಾ ಮಕ್ಕಳಿಗೆ ಪರೀಕ್ಷಾ ಪ್ರವೇಶ ಪತ್ರಗಳನ್ನು ನೀಡದಿದ್ದು, ಈ ನಿಯಮವನ್ನು ಬದಲಾಯಿಸಿ ಈಗ ಮಕ್ಕಳಿಗೆ ಪರೀಕ್ಷಾ ಒತ್ರವನ್ನಿ ನೀಡುತ್ತಿರುವ ಕಾರಣ ಮಾತ್ರವಲ್ಲ ಕೆಲ ಶಧಾಲೆಗಳಲ್ಲಿ ಹಾಲ್ ಟಿಕೆಟ್ ನೀಡದಿರುವುದಕ್ಕೆ ಕಾರಣ
3. ಇತ್ತೀಚೆಗೆ ಶಾಲೆಗಳಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ
4. ಬಾಲ್ಡವಿನ್ ಶಾಲಾ ಆಡಳಿತ  ಮಂಡಳಿಯವರು ಮಕ್ಕಳ ಪೋಷಕರಿಗೆ ಗುರುತಿನ ಚೀಟಿ ಕೊಟ್ಟಿರುವ ಬಗ್ಗೆ ಮತ್ತು ಅದಕ್ಕೆ ಶುಲ್ಕ ನಿಗದಿಪಡಿಸಿರುವ ಬಗ್ಗೆ 
5. ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಪುಸ್ತಕ, ಸಮವಸ್ತ್ರ ಹಾಗೂ ಶೂಗಳನ್ನು ಆವರಣದಲ್ಲಿ ಮಾರಾಟ ಮಾಡುವ ಬಗ್ಗೆ.

PHD NOT MANDATORY: ಪ್ರಾಧ್ಯಾಪಕರಾಗಲು ಪಿಎಚ್‌ಡಿ ಕಡ್ಡಾಯವಲ್ಲ, UGC ಸುತ್ತೋಲೆ! 

10 ದಿನದಲ್ಲಿ 15000 ಶಿಕ್ಷಕರ ನೇಮಕಾತಿಗೆ ನೋಟಿಫಿಕೇಶನ್ ಬಿಡುಗಡೆ: ಶಿಕ್ಷಕರ ನೇಮಕಾತಿ (Teachers Recruitment) ಪ್ರಕ್ರಿಯೆ ಎಲ್ಲವೂ ಮುಗಿದಿದ್ದು, ಇನ್ನು 10 ದಿನಗಳಲ್ಲಿ ನೋಟಿಫಿಕೇಶನ್ ಬಿಡಲಾಗುತ್ತದೆ. ಏಜ್ ಲಿಮಿಟ್ ಬದಲಾವಣೆ ಸೇರಿದಂತೆ ಹಲವು ಕೆಲಸಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ಸುಮಾರು 15000 ಶಿಕ್ಷಕರ ನೇಮಕಾತಿ ನಡೆಯುತ್ತದೆ. 5000 ಕಲ್ಯಾಣ ಕರ್ನಾಟಕ ಹಾಗೂ ಉಳಿದವು ರಾಜ್ಯದ ಇತರ ಭಾಗಕ್ಕೆ ನೇಮಕಾತಿಯಾಗಲಿದೆ ಎಂದು  ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಎನ್. ನಾಗೇಶ್ (Education Minister BC Nagesh) ಕಾರವಾರದಲ್ಲಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಹಾಗೂ ಉತ್ತರ ಕನ್ನಡ ಜಿಲ್ಲೆ ಪಿಯು ಪ್ರಾಚಾರ್ಯರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರವಾರದಲ್ಲಿ ಆಯೋಜಿಸಿದ್ದ 'ರಾಷ್ಟ್ರೀಯ ‌ಶಿಕ್ಷಣ ನೀತಿ-2020' ವಿಚಾರ ಸಂಕಿರಣ ಹಾಗೂ 'ಪದವಿ ಪೂರ್ವ ನೌಕರರ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ'ವನ್ನು ಉದ್ಘಾಟಿಸಿದ  ಬಳಿಕ ಈ ಹೇಳಿಕೆ ನೀಡಿದ್ದಾರೆ.

ಮುಂದಿನ ವರ್ಷ ರಾಜ್ಯದ ಸುಮಾರು 20ಸಾವಿರ ಶಾಲೆಗಳಲ್ಲಿ ಅರ್ಲಿ ಚೈಲ್ಡ್ ಎಜ್ಯುಕೇಶನ್ (ECE) ಪರಿಚಯಿಸಲಿದ್ದೇವೆ. 1-2 ವರ್ಷದ ಮಕ್ಕಳನ್ನು ಪ್ರೈಮರಿ ಸೆಕ್ಷನ್ ಹಾಗೂ 3ನೇ ವರ್ಷದ ಮಗುವಿನ ಅಭ್ಯಾಸವನ್ನು ಅಂಗನವಾಡಿಯಲ್ಲಿ ಮಾಡಲು ಸರಕಾರ ನಿರ್ಧರಿಸಿದೆ. ಅಗತ್ಯವಿರುವ ತರಬೇತಿ ನಿಧಾನಕ್ಕೆ ನೀಡುತ್ತಾ ಯೋಜನೆ ಪರಿಚಯಿಸುತ್ತೇವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios