ಉಗ್ರ ಚಟುವಟಿಕೆ ವಿರುದ್ಧ ಕ್ರಮ ಅಗತ್ಯ; ಭಾರತ-ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ!

Published : Sep 11, 2020, 03:47 PM IST
ಉಗ್ರ ಚಟುವಟಿಕೆ ವಿರುದ್ಧ ಕ್ರಮ ಅಗತ್ಯ; ಭಾರತ-ಅಮೆರಿಕ ಜಂಟಿಯಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ!

ಸಾರಾಂಶ

ಉಗ್ರ ಚಟುವಟಿಕೆ ವಿರುದ್ಧ ಕ್ರಮ ಕೈಗೊಳ್ಳಲು ಅದೆಷ್ಟೇ ಎಚ್ಚರಿಕೆ ನೀಡಿದರೂ, ಯಾವುದೇ ದೇಶ ಸೂಚಿಸಿದರೂ ಪಾಕಿಸ್ತಾನ ತನ್ನ ಮೂಲ ಕಸುಬು ಬಿಡಲು ತಯಾರಿಲ್ಲ. ಇದೀಗ ಅಮೆರಿಕ ಹಾಗೂ ಭಾರತ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಇಮ್ರಾನ್ ಖಾನ್ ಸರ್ಕಾರಕ್ಕೆ ಖಡಕ್ ವಾರ್ನಿಂಗ್ ನೀಡಿದೆ.

ವಾಶಿಂಗ್ಟನ್(ಸೆ.11):   ಭಾರತ ಗಡಿಯೊಳಕ್ಕೆ ಉಗ್ರರನ್ನು ನಸುಳಲು ಅವಕಾಶ ಮಾಡಿಕೊಡುವುದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿರುವ ವಿರುದ್ಧ ಇದೀಗ ಭಾರತ ಹಾಗೂ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ಪಾಕಿಸ್ತಾನ ತನ್ನು ಭಯೋತ್ಪಾದಕ ಹಾಗೂ ಉಗ್ರರ ಪೋಷಣೆ ತಕ್ಷಣವೇ ನಿಲ್ಲಿಸಿ, ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಭಾರತ ಹಾಗೂ ಅಮೆರಿಕ ಕೌಂಟರ್ ಟೆರರಿಸಂ ಜಾಯಿಂಟ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಹೇಳಲಾಗಿದೆ.

ಹಿಜ್ಬುಲ್‌ ಉಗ್ರನಿಗೆ ಪಾಕ್‌ ಅಧಿಕಾರಿ ಸ್ಥಾನಮಾನ!

17ನೇ ಸಭೆ ಬಳಿಕ ಭಾರತ ಹಾಗೂ ಅಮೆರಿಕ ಜಂಟಿಯಾಗಿ, ಪಾಕಿಸ್ತಾನ ಸರ್ಕಾರಕ್ಕೆ ಸೂಚನೆ ರವಾನಿಸಿದೆ.  ಈ ಸಭೆಯಲ್ಲಿ ಭಯೋತ್ಪಾದಕ ನಿರ್ಮೂಲನೆಗೆ ಭಾರತ ಹಾಗೂ ಅಮೆರಿಕ ತೆಗೆದುಕೊಳ್ಳಬೇಕಾದ ನಿರ್ಣಯಗಳ ಕುರಿತು ಚರ್ಚಿಸಲಾಯಿತು. ಪ್ರಮುಖವಾಗಿ ಪಾಕಿಸ್ತಾನ ಗಡಿ ಸನಿಹದಲ್ಲಿ ಉಗ್ರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಭಾರತದ ಮನವಿಗೆ ಸ್ಪಂದಿಸಿದ ರಷ್ಯಾ; ಪಾಕಿಸ್ತಾನಕ್ಕಿಲ್ಲ ಶಸ್ತ್ರಾಸ್ರ್ರ!

ಅಲ್ ಖೈದಾ, ಐಸಿಸ್, ಲಷ್ಕರ್ ಇ ತೊಯ್ಬಾ, ಜೈಶೇ ಇ ಮೊಹಮ್ಮದ್, ಹಿಜ್ಬ್ ಉಲ್ ಮುಜಾಹಿದ್ದೀನ್ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗಳನ್ನು ನಿಷೇಧಿಸಲು ಹಾಗೂ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯಿಸಲಾಗಿದೆ. ಇನ್ನು 200ರ ಮುಂಬೈ ದಾಳಿ ಹಾಗೂ ಪಠಾನ್‌ಕೋಟ್ ಮೇಲಿನ ಉಗ್ರರ ದಾಳಿಗೆ ನ್ಯಾಯ ಒದಗಿಸಬೇಕಿದೆ. ಇದಕ್ಕಾಗಿ ಪಾಕಿಸ್ತಾನದಲ್ಲಿರುವ ಭಾರತದ ಮೇಲಿನ ದಾಳಿ ರೂವಾರಿಗಳ ವಿರುದ್ದ ಕ್ರಮ ಅನಿವಾರ್ಯವಾಗಿದೆ ಎಂದು ಸಭಯಲ್ಲಿ ತೀರ್ಮಾನಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ