ಲಡಾಖ್‌ ಬಿಕ್ಕಟ್ಟು ಶಮನಕ್ಕೆ ಚೀನಾ-ಭಾರತ ಮಾತುಕತೆ

By Kannadaprabha NewsFirst Published Sep 11, 2020, 9:43 AM IST
Highlights

-ಮಾಸ್ಕೋದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರ ಸಭೆ
-ಪ್ಯಾಂಗಾಂಗ್‌, ಇತರೆಡೆ ಚೀನಾದ ಅತಿಕ್ರಮದ ಬಗ್ಗೆ ಭಾರತ ಆಕ್ಷೇಪ
-ಗಡಿಯಿಂದ ಸೇನೆ ಹಿಂಪಡೆಯುವಂತೆ ಚೀನಾಕ್ಕೆ ಭಾರತ ಆಗ್ರಹ

ಮಾಸ್ಕೋ/ನವದೆಹಲಿ (ಸೆ.11): ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟು ಬೆನ್ನಲ್ಲೇ, ಭಾರತ ವಿದೇಶಾಂಗ ಸಚಿವ ಜೆ. ಜೈಶಂಕರ್‌ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದರು. ರಷ್ಯಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗದ ವೇಳೆ ಉಭಯ ಸಚಿವರು ಈ ಮಾತುಕತೆ ನಡೆಸಿದರು. ಗಡಿ ಬಿಕ್ಕಟ್ಟು ಸಂಬಂಧ ಉಭಯ ದೇಶಗಳ ಮಧ್ಯೆ ಸಚಿವರ ಮಟ್ಟದ ಮಾತುಕತೆ ನಡೆದಿದ್ದು, ಇದು ವಾರದಲ್ಲಿ 2ನೇ ಬಾರಿ. 5 ದಿನಗಳ ಹಿಂದೆಯಷ್ಟೇ ಇದೇ ಶೃಂಗದಲ್ಲಿ ಉಭಯ ದೇಶಗಳ ರಕ್ಷಣಾ ಸಚಿವರು ಮಾತುಕತೆ ನಡೆಸಿದ್ದರು. ಆದರೆ, ಅದು ಫಲಪ್ರದವಾಗಿರಲಿಲ್ಲ.

ಗುರುವಾರ 2 ತಾಸುಗಳ ಕಾಲ ನಡೆದ ಮಾತುಕತೆ ವೇಳೆ ಉಭಯ ವಿದೇಶಾಂಗ ಸಚಿವರು, ಲಡಾಖ್‌ನಲ್ಲಿನ ಬಿಕ್ಕಟ್ಟು ಪರಿಸ್ಥಿತಿ ಹಾಗೂ ವಿವಾದಿತ ಪ್ರದೇಶಗಳಿಂದ ಸಂಪೂರ್ಣ ಸೇನೆ ಹಿಂಪಡೆಯುವ ಕುರಿತಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು ಎನ್ನಲಾಗಿದೆ. ಇದೇ ವೇಳೆ, ಪ್ಯಾಂಗಾಂಗ್‌ ಸರೋವರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚೀನಾ ಯೋಧರು ಪ್ರದರ್ಶಿಸಿದ ಅತಿಕ್ರಮಣಕಾರಿ ನಡೆಯ ಬಗ್ಗೆ ಸಚಿವ ಜೆ.ಜೈಶಂಕರ್‌ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ, ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿಯಿಂದ ಚೀನಾ ತನ್ನ ಸೇನೆಯನ್ನು ಹಿಂಪಡೆಯಬೇಕು ಎಂದು ಆ ದೇಶದ ವಿದೇಶಾಂಗ ಸಚಿವ ವಾಂಗ್‌ ಯಿ ಅವರಿಗೆ ಒತ್ತಾಯಿಸಿದರು ಎಂದು ತಿಳಿದುಬಂದಿದೆ.

ಚೀನಾ-ಭಾರತ ಸಂಘರ್ಷ: ನಿಜಕ್ಕೂ ಭಾರತದ ಪರ ನಿಲ್ಲುತ್ತಾ ಅಮೆರಿಕ

ಗಲ್ವಾನ್‌ನಲ್ಲಿ ಶಾಂತಿ, ಸೇನಾ ವಾಪಸ್ಸಾತಿ: ಭಾರತ-ಚೀನಾ ಮಧ್ಯೆ ಮಾತುಕತೆ ಫಲಪ್ರದ
ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟು ಶಮನ, ಸೇನೆ ವಾಪಸ್ಸಾತಿ ಹಾಗೂ ಅಲ್ಲಿ ಪುನಾ ಶಾಂತಿ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಆಗಸ್ಟ್ 20ರಂದು ಮಹತ್ವದ ಮಾತುಕತೆ ನಡೆದಿತ್ತು.

ಭಾರತ-ಚೀನಾ ಗಡಿಗೆ ಮೋದಿ ಭೇಟಿ

ಈ ಕುರಿತಾದ ಮಾತುಕತೆಯಲ್ಲಿ ಹಾಲಿ ಇರುವ ಒಪ್ಪಂದಗಳು ಹಾಗೂ ನಿಯಮಾವಳಿಗಳ ಪ್ರಕಾರವಾಗಿಯೇ ಗಡಿ ಬಿಕ್ಕಟ್ಟು ಶಮನಕ್ಕೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ತಿಳಿದುಬಂದಿತ್ತು. ವಿದೇಶಾಗ ವ್ಯವಹಾರಗಳ ವಕ್ತಾರ ಅನುರಾಗ್‌ ಶ್ರೀವಾತ್ಸವ ಅವರು, ‘ಉಭಯ ದೇಶಗಳ ಸಂಬಂಧ ವೃದ್ಧಿಗೆ ಗಡಿಯಲ್ಲಿ ಶಾಂತಿ ಸ್ಥಾಪನೆ, ಯಥಾಸ್ಥಿತಿ ಕಾಪಾಡಿಕೊಳ್ಳುವಿಕೆ ಬಹುಮುಖ್ಯ ಎಂಬ ವಿಚಾರವನ್ನು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಅದರಂತೆ, ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಬೀಡು ಬಿಟ್ಟಿರುವ ಚೀನಾ ಮತ್ತು ಭಾರತದ ಯೋಧರನ್ನು ಶೀಘ್ರ ವಾಪಸ್ಸು ಕರೆಸಿಕೊಳ್ಳಲಾಗುತ್ತದೆ’ ಎಂದಿದ್ದರು. 

click me!