
ವಾಷಿಂಗ್ಟನ್: ಭಾರತದ ಮೇಲೆ ಅಧ್ಯಕ್ಷ ಟ್ರಂಪ್ ವಿಧಿಸಿರುವ ಕಠಿಣ ಸುಂಕದ ಕುರಿತು ಅಮೆರಿಕದಲ್ಲೇ ಅಪಸ್ವರ ಎದ್ದಿದೆ. ಭಾರತವನ್ನು ರಷ್ಯಾ ಹಾಗೂ ಚೀನಾದಿಂದ ದೂರ ಇರಿಸುವ ಅಮೆರಿಕದ ದಶಕಗಳ ಪ್ರಯತ್ನಕ್ಕೆ ಟ್ರಂಪ್ ಎಳ್ಳುನೀರು ಬಿಟ್ಟಿದ್ದಾರೆ ಎಂದು ಅವರ ಮಾಜಿ ಸಹಾಯಕ ಜಾನ್ ಬಾಲ್ಟನ್ ಆಪಾದಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ರಷ್ಯಾದ ವಿರುದ್ಧವಾಗಿ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸಿರುವುದು ಬಹುದೊಡ್ಡ ತಪ್ಪು. ಇದು ಅಮೆರಿಕಕ್ಕೆ ಬಹಳ ಕೆಟ್ಟ ಫಲಿತಾಂಶ ನೀಡಲಿದೆ. ರಷ್ಯಾಕ್ಕೆ ಪೆಟ್ಟು ಕೊಡಬೇಕು ಎಂದು ಭಾರತದ ಮೇಲಿರುವ ತೆರಿಗೆಯು, ಭಾರತವನ್ನು ರಷ್ಯಾ ಹಾಗೂ ಚೀನಾಕ್ಕೆ ಹತ್ತಿರ ತರಬಹುದು.
ಭಾರತವನ್ನು ಈ ದೇಶಗಳಿಂದ ದೂರವಿರಿಸುವ ಅಮೆರಿಕದ ದಶಕಗಳ ಪ್ರಯತ್ನಕ್ಕೆ ಈ ನೀತಿಯಿಂದ ಸಮಸ್ಯೆಯುಂಟಾಗುತ್ತದೆ’ ಎಂದಿದ್ದಾರೆ.ಅಮೆರಿಕದ ವಿದೇಶಾಂಗ ವ್ಯವಹಾರಗಳ ತಜ್ಞ ಕ್ರಿಸ್ಟೋಫರ್ ಪಡಿಲ್ಲಾ ಸಹ ಟ್ರಂಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಭಾರತ-ಅಮೆರಿಕ ನಡುವಿನ ಸಂಬಂಧಕ್ಕೆ ದೀರ್ಘಕಾಲೀನಪೆಟ್ಟು ನೀಡಬಹುದು ಎಂದಿದ್ದಾರೆ.
ಸುಂಕ ಹೆಚ್ಚಳದಿಂದ ಭಾರತ ಚೀನಾ ರಷ್ಯಾ ಒಗ್ಗಟ್ಟು, ಅಮೆರಿಕಕ್ಕೆ ಕೆಟ್ಟ ಪರಿಣಾಮ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ವಿಧಿಸಿರುವ 50% ಕ್ಕೂ ಹೆಚ್ಚಿನ ಭಾರೀ ಸುಂಕವನ್ನು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ತೀವ್ರವಾಗಿ ಖಂಡಿಸಿದ್ದಾರೆ. ಈ ಕ್ರಮವು ಭಾರತವನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರ ತರಬಹುದು ಎಂದು ಎಚ್ಚರಿಸಿರುವ ಅವರು, ಇದು ದಶಕಗಳಿಂದ ಅಮೆರಿಕ ನಡೆಸಿದ ಭಾರತವನ್ನು ರಷ್ಯಾ ಮತ್ತು ಚೀನಾದಿಂದ ದೂರವಿಡುವ ಕಾರ್ಯತಂತ್ರದ ಪ್ರಯತ್ನಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ.
ಬೋಲ್ಟನ್, ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ, 'ಟ್ರಂಪ್‌ರ ಚೀನಾದ ಮೇಲಿನ ಮೃದುತ್ವ ಮತ್ತು ಭಾರತದ ಮೇಲಿನ ಕಠಿಣ ಸುಂಕ ನೀತಿಯು ಅಮೆರಿಕಕ್ಕೆ 'ಕೆಟ್ಟ ಪರಿಣಾಮ' ತಂದಿದೆ. ಇದು ಭಾರತವನ್ನು ರಷ್ಯಾ ಮತ್ತು ಚೀನಾದೊಂದಿಗೆ ಒಗ್ಗಟ್ಟಿನಿಂದ ಅಮೆರಿಕದ ವಿರುದ್ಧ ಮಾತುಕತೆಗೆ ತಳ್ಳಬಹುದು ಎಂದು ಹೇಳಿದ್ದಾರೆ. ಟ್ರಂಪ್ ಏಪ್ರಿಲ್‌ನಲ್ಲಿ ಚೀನಾದೊಂದಿಗೆ ವ್ಯಾಪಾರ ಘರ್ಷಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದರೆ, ಭಾರತದ ಮೇಲೆ 25% ದ್ವಿತೀಯ ಸುಂಕ ಸೇರಿದಂತೆ 50% ಕ್ಕಿಂತಲೂ ಹೆಚ್ಚಿನ ಸುಂಕವನ್ನು ವಿಧಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ