ವಿಶ್ವದ ಸುರಕ್ಷಿತ- ಡೇಂಜರ್ ದೇಶಗಳಾವುವು ಎಂಬ ಸಮೀಕ್ಷೆಯೊಂದು ಹೊರಕ್ಕೆ ಬಂದಿದೆ. ಇದರಲ್ಲಿ ಭಾರತಕ್ಕೆ ಶಾಕ್ ಆಗುವಂಥ ವರದಿಯೂ ಸೇರಿದ್ದು, ಎಲ್ಲಾ ಲೆಕ್ಕಾಚಾರ ಬುಡಮೇಲು ಮಾಡಲಾಗಿದೆ. ಏನಿದೆ ಇದರಲ್ಲಿ?
ದೇಶದಲ್ಲಿ ಸುರಕ್ಷಿತ ದೇಶಗಳಾಗುವುದು, ಅಸುರಕ್ಷಿತ ಹಾಗೂ ಡೇಂಜರ್ ದೇಶಗಳು ಯಾವುವು ಎಂದು ಕೇಳಿದರೆ ನಿಮ್ಮ ತಲೆಯಲ್ಲಿ ಒಂದಿಷ್ಟು ದೇಶಗಳು ಬಂದೇ ಬರುತ್ತವೆ. ಅದರಲ್ಲಿಯೂ ಭಾರತೀಯರಾಗಿರುವುದರಿಂದ ಸುರಕ್ಷಿತ ದೇಶದ ಪಟ್ಟಿಯಲ್ಲಿ ಟಾಪ್ 10 ಸ್ಥಾನದಲ್ಲಿ ಭಾರತ ಇದ್ದಿರಬಹುದು ಎನ್ನಿಸಲಿಕ್ಕೆ ಸಾಕು, ಇನ್ನು ಭಾರತದ ವಿದೇಶಿ ಪ್ರೇಮಿಗಳು ಅಮೆರಿಕ ದೇಶವನ್ನು ಮನಸಾರೆ ಮೆಚ್ಚಿಕೊಳ್ಳಲಿಕ್ಕೂ ಸಾಕು. ಇನ್ನು ಡೇಂಜರ್ ದೇಶ ಎಂದು ಹೇಳಿದ ತಕ್ಷಣದ ಭಾರತೀಯರ ತಲೆಯಲ್ಲಿ ಮೊದಲಿಗೆ ಪಾಕಿಸ್ತಾನದಂಥ ದೇಶಗಳೂ ಬರಬಹುದು. ಆದರೆ ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡುವ ವರದಿಯೊಂದು ಇದೀಗ ಹೊರಬಂದಿದೆ. ಪ್ರಪಂಚದಾದ್ಯಂತದ ವಿವಿಧ ನಗರಗಳು ಮತ್ತು ದೇಶಗಳ ಜೀವನ ವೆಚ್ಚ, ರಿಯಲ್ ಎಸ್ಟೇಟ್ ಬೆಲೆಗಳು ಮತ್ತು ಜೀವನದ ಗುಣಮಟ್ಟದ ಮೆಟ್ರಿಕ್‌ಗಳ ಬಗ್ಗೆ ಮಾಹಿತಿಗಳನ್ನು ಒದಗಿಸುವ ''ನಂಬಿಯೊ'' ನೀಡಿರುವ ವರದಿಯಲ್ಲಿ ಅಚ್ಚರಿಯ ಅಂಶಗಳು ಬೆಳಕಿಗೆ ಬಂದಿವೆ. ಇದು ನಮ್ಮ ಸಮೀಕ್ಷೆಯಷ್ಟೇ. ಇದರಲ್ಲಿ ವ್ಯತ್ಯಾಸವು ಆಗಬಹುದು ಎನ್ನುತ್ತಲೇ ಈ ವರದಿಯನ್ನು ನೀಡಿದೆ ''ನಂಬಿಯೊ''.
ವಿಶ್ವದ ಸೇಫೆಸ್ಟ್ ಅಂದ್ರೆ ಸುರಕ್ಷಿತ ಹಾಗೂ ಡೇಂಜರ್ ಟಾಪ್ 10 ದೇಶಗಳ ಪಟ್ಟಿಯನ್ನು ಅದು ಮಾಡಿದೆ. ಆದರೆ ಕುತೂಹಲಯ ಸಂಗತಿ ಏನೆಂದರೆ, 'ನಂಬಿಯೊ' ನೀಡಿರುವ ವರದಿಯಲ್ಲಿ ಟಾಪ್ 10 ಪಟ್ಟಿಯಲ್ಲಿ ಭಾರತವೂ ಇಲ್ಲ. ಡೇಂಜರಸ್ ಪಟ್ಟಿಯಲ್ಲಿ ಪಾಕಿಸ್ತಾನವೂ ಇಲ್ಲ. ಅಮೆರಿಕದ ಸ್ಥಿತಿ ಅಂತೂ ಈ ವರದಿ ಪ್ರಕಾರ ಅತ್ಯಂತ ಶೋಚನೀಯವಾಗಿದೆ. ಅಮೆರಿಕವು ಸುರಕ್ಷತೆಯ ದೃಷ್ಟಿಯಿಂದ ಭಾರತ ಮತ್ತು ಪಾಕಿಸ್ತಾನಕ್ಕಿಂತಲೂ ಭಾರಿ ಪ್ರಮಾಣದಲ್ಲಿ ಹಿಂದೆ ಉಳಿದಿದೆ. 'ನಂಬಿಯೊ'ದ ಪಟ್ಟಿಯ ಪ್ರಕಾರ, 2025 ರ ವಿಶ್ವದ ಸುರಕ್ಷಿತ ರಾಷ್ಟ್ರಗಳ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ 89 ನೇ ಸ್ಥಾನದಲ್ಲಿದೆ, ಭಾರತ 66ನೇ ಸ್ಥಾನದಲ್ಲಿದ್ದರೆ ಮತ್ತು ಪಾಕಿಸ್ತಾನವು 65ನೇ ಸ್ಥಾನದಲ್ಲಿದೆ. ಇದರ ಅರ್ಥ ಭಾರತಕ್ಕಿಂತಲೂ ಪಾಕಿಸ್ತಾನ ಸುರಕ್ಷಿತ ಎಂದಿದೆ ಈ ವರದಿ! ವೈಯಕ್ತಿಕ ಭದ್ರತೆಯ ಬಗ್ಗೆ ಕಾಳಜಿ ವಹಿಸುವ ಸಣ್ಣ ಯುರೋಪಿಯನ್ ದೇಶವಾದ ಅಂಡೋರಾ ಅತ್ಯುತ್ತಮ ರಾಷ್ಟ್ರವಾಗಿದೆ.
ಫಾರಿನ್ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...
ಸುರಕ್ಷಿತ ಮತ್ತು ಅಸುರಕ್ಷಿತ ಹೇಗೆ ಲೆಕ್ಕಾಚಾರ ಹಾಕಲಾಗಿದೆ ಎನ್ನುವ ಬಗ್ಗೆ ಇದು ಮಾಹಿತಿ ನೀಡಿದೆ. ಅಪರಾಧದ ಒಟ್ಟಾರೆ ಮಟ್ಟವನ್ನು ಆಧರಿಸಿ 146 ರಾಷ್ಟ್ರಗಳನ್ನು ರೇಟಿಂಗ್ ಮಾಡಿದೆ. ಹಗಲು ಮತ್ತು ರಾತ್ರಿ ನಡೆಯುವಾಗ ನಿವಾಸಿಗಳು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬುದರ ಕುರಿತು ಈ ಸಮೀಕ್ಷೆಯಲ್ಲಿ ಇದೆಯಂತೆ. ದರೋಡೆ, ಕಾರು ಕಳ್ಳತನ, ಅಪರಿಚಿತರಿಂದ ದೈಹಿಕ ದಾಳಿ, ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ಮತ್ತು ಚರ್ಮದ ಬಣ್ಣದಿಂದ ನಿಂದನೆ, ಜನಾಂಗೀಯತೆ, ಲಿಂಗ ಅಥವಾ ಧರ್ಮದಂತಹ ಅಂಶಗಳ ಆಧಾರದ ಮೇಲೆ ತಾರತಮ್ಯದ ಬಗ್ಗೆಯೂ ನೋಡಿಕೊಂಡು ಸುರಕ್ಷಿತ ಮತ್ತು ಡೇಂಜರ್ ಎನ್ನುವ ಪಟ್ಟಿ ಮಾಡಿರುವುದಾಗಿ ಹೇಳಲಾಗಿದೆ. ಕಳ್ಳತನ, ವಿಧ್ವಂಸಕತೆಯಂತಹ ಆಸ್ತಿ-ಸಂಬಂಧಿತ ಅಪರಾಧಗಳ ವ್ಯಾಪ್ತಿಯ ಮೌಲ್ಯಮಾಪನ, ಹಲ್ಲೆ, ನರಹತ್ಯೆ ಮತ್ತು ಲೈಂಗಿಕ ಅಪರಾಧಗಳಂತಹ ಹಿಂಸಾತ್ಮಕ ಅಪರಾಧಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಇದೇ ವೇಳೆ, ನಂಬಿಯೋ ಸಮಜಾಯಿಷಿಯನ್ನು ಕೂಡ ಇದೆ. ಇದು ನಮ್ಮ ಸಮೀಕ್ಷೆ ಅಷ್ಟೆ. ಇದು ಅಧಿಕೃತ ಸರ್ಕಾರಿ ಅಂಕಿಅಂಶಗಳಿಗಿಂತ ಭಿನ್ನವಾಗಿರಬಹುದು ಎಂದಿದೆ. ನಂಬಿಯೋ ಪ್ರಕಾರ ಟಾಪ್ 10 ಸೇಫೆಸ್ಟ್ ಮತ್ತು ಡೇಂಜರ್ ದೇಶಗಳು ಹೀಗಿವೆ:
ಟಾಪ್ 10 ಸುರಕ್ಷಿತ ರಾಷ್ಟ್ರಗಳು:
ಅಂಡೋರಾ (ಸುರಕ್ಷತಾ ಅಂಕ 84.7)
ಯುನೈಟೆಡ್ ಅರಬ್ ಎಮಿರೇಟ್ಸ್ (84.5)
ಕತಾರ್ (84.2)
ತೈವಾನ್ (82.9)
ಓಮನ್ (81.7)
ಐಲ್ ಆಫ್ ಮ್ಯಾನ್ (79.0)
ಹಾಂಗ್ ಕಾಂಗ್ (ಚೀನಾ) (78.5)
ಅರ್ಮೇನಿಯಾ (77.9)
ಸಿಂಗಾಪುರ (77.4)
ಜಪಾನ್ (77.1)
ವಿಶ್ವದ ಟಾಪ್ 10 ಅತ್ಯಂತ ಅಪಾಯಕಾರಿ ದೇಶಗಳು:
ವೆನೆಜುವೆಲಾ
ಪಪುವಾ ನ್ಯೂಗಿನಿಯಾ
ಹೈಟಿ
ಅಫ್ಘಾನಿಸ್ತಾನ
ದಕ್ಷಿಣ ಆಫ್ರಿಕಾ
ಹೊಂಡುರಾಸ್
ಟ್ರಿನಿಡಾಡ್ ಮತ್ತು ಟೊಬಾಗೊ
ಸಿರಿಯಾ
ಜಮೈಕಾ
ಪೆರು