ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಪ್ರಶಂಸಿಸಿದ್ದಾರೆ. ‘ಭಾರತದ ಎಲೆಕ್ಷನ್‌ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೆ, ಅಮೆರಿಕದಲ್ಲಿ ಇದು ಇಲ್ಲ’ ವಿಷಾದ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ (ಮಾ.27): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಚುನಾವಣಾ ವ್ಯವಸ್ಥೆಯನ್ನು ಪ್ರಶಂಸಿಸಿದ್ದಾರೆ. ‘ಭಾರತದ ಎಲೆಕ್ಷನ್‌ನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೆ, ಅಮೆರಿಕದಲ್ಲಿ ಇದು ಇಲ್ಲ’ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವ ಭಾರತದ ಚುನಾವಣಾ ಆಯೋಗದ ಕ್ರಮವನ್ನು ಅವರು ಮೆಚ್ಚಿದ್ದಾರೆ.
ಅಮೆರಿಕ ಚುನಾವಣಾ ಸುಧಾರಣಾ ಕ್ರಮಗಳಿಗೆ ಸಹಿ ಹಾಕಿ ಮಾತನಾಡಿದ ಟ್ರಂಪ್, ‘ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಬಯೋಮೆಟ್ರಿಕ್ ಮಾಹಿತಿಯನ್ನು ಮತದಾರರ ಗುರುತಿನೊಂದಿಗೆ ಜೋಡಿಸಿದ್ದಾರೆ. ಆದರೆ ಅಮೆರಿಕ ಇನ್ನೂ ಪೌರತ್ವದ ಸ್ವಯಂ ಧೃಡೀಕರಣದ ಮೇಲೆ ಅವಲಂಬಿತವಾಗಿದೆ. ಈ ಮೂಲಕ ಮುಂದುವರೆದ ಹಾಗೂ ಮುಂದುವರೆಯುತ್ತಿರುವ ದೇಶಗಳೂ ಅಳವಡಿಸಿಕೊಳ್ಳುತ್ತಿರುವ ರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವಲ್ಲಿ ಸೋತಿದೆ’ ಎಂದರು. ಅಮೆರಿಕದಲ್ಲಿ ಈಗಲೂ ಹಳೆಯ ಕಾಲದ ಬ್ಯಾಲೆಟ್ ಬಾಕ್ಸ್ ಮತ ವ್ಯವಸ್ಥೆ ಇದ್ದರೆ ಭಾರತದಲ್ಲಿ ಮತಯಂತ್ರ ಇದೆ ಎಂಬುದೂ ಇಲ್ಲಿ ಗಮನಾರ್ಹ.
ಮತ್ತೊಂದು ಟ್ಯಾಕ್ಸ್ ಬರೆ?: ಅಧಿಕಾರ ವಹಿಸಿಕೊಂಡ ಬಳಿಕ ತೆರಿಗೆ ಯುದ್ಧ ಸಾರಿರುವ ಅಧ್ಯಕ್ಷ ಟ್ರಂಪ್ ಈಗ ಮತ್ತೊಂದು ತೆರಿಗೆ ಹೇರಲು ಸಿದ್ಧರಾಗಿದ್ದಾರೆ. ವೆನಿಜುವೆಲಾದಿಂದ ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಏ.2ರಿಂದ ಶೇ.25ರಷ್ಟು ತೆರಿಗೆ ಹೇರಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಇದು ಭಾರತದ ಮೇಲೆಯೂ ಹೊಡೆತ ಬೀಳಲಿದೆ ಎನ್ನಲಾಗಿದೆ.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಸೋಮವಾರ ತಮ್ಮ ಟ್ರುತ್ ಸೋಷಿಯಲ್‌ನಲ್ಲಿ ಹಂಚಿಕೊಂಡ ಟ್ರಂಪ್,‘ವೆನಿಜುವೆಲ್ಲಾ ಅಕ್ರಮ ವಲಸಿಗರ ದಂಡನ್ನು ಕಳುಹಿಸುತ್ತದೆ. ಹೀಗಾಗಿ ಈ ದೇಶದಿಂದ ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ.25ರಷ್ಟು ತೆರಿಗೆ ಹಾಕುತ್ತೇವೆ. ಈ ದೇಶಗಳು ರಫ್ತು ಮಾಡುವ ವಸ್ತುಗಳ ಮೇಲೆ ತೆರಿಗೆ ಬೀಳಲಿದೆ’ ಎಂದು ತಿಳಿಸಿದ್ದಾರೆ. ವೆನಿಜವೆಲ್ಲಾದಿಂದ ಇಂಧನ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತವೂ ಒಂದಾಗಿದ್ದು, ಈ ನಿರ್ಧಾರ ದೇಶದ ರಫ್ತಿನ ಮೇಲೂ ಹೊಡೆತ ಬೀಳಲಿದೆ ಎನ್ನಲಾಗಿದೆ.