ಭಾರತ, ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಇದಕ್ಕೆಲ್ಲ ಕಾರಣ, ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದ ಬಹುದೊಡ್ಡ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದ್ದು. ಮೊದಲು ಅಮೆರಿಕ ಉತ್ಪಾದನೆಯಲ್ಲಿ ಮುಂದಿತ್ತು. ಆದರೆ ಇಂದು ಪಾಶ್ಚಾತ್ಯ ದೇಶಗಳು ಬಳಕೆದಾರ ದೇಶಗಳಾಗಿವೆ. ಚೀನಾ ಉತ್ಪಾದಕ ದೇಶವಾಗಿದೆ. ಹೀಗಾಗಿ ಆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ಎಂದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ
ಡಲ್ಲಾಸ್ (ಅಮೆರಿಕ)(ಸೆ.10): ಅಮೆರಿಕ ಪ್ರವಾಸದಲ್ಲಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ‘ಭಾರತ ಹಾಗೂ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಆದರೆ ಚೀನಾದಲ್ಲಿ ಇಲ್ಲ. ಚೀನಾ ಉದ್ಯೋಗದಾತ ದೇಶ’ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ಆಕ್ಷೇಪಿಸಿದ್ದು, ‘ವಿದೇಶಿ ನೆಲದಲ್ಲಿ ಭಾರತದ ಮಾನ ತೆಗೆಯುವ ಖಯಾಲಿ ರಾಹುಲ್‌ಗೆ ಇದೆ’ ಎಂದು ಖಂಡಿಸಿದೆ.
ವಿದ್ಯಾರ್ಥಿಗಳ ಜತೆ ಸಂವಾದದಲ್ಲಿ ಭಾರತದಲ್ಲಿನ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ರಾಹುಲ್, ‘ಭಾರತ, ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಇದಕ್ಕೆಲ್ಲ ಕಾರಣ, ಅಮೆರಿಕವನ್ನು ಹಿಂದಿಕ್ಕಿ ಚೀನಾ ವಿಶ್ವದ ಬಹುದೊಡ್ಡ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದ್ದು. ಮೊದಲು ಅಮೆರಿಕ ಉತ್ಪಾದನೆಯಲ್ಲಿ ಮುಂದಿತ್ತು. ಆದರೆ ಇಂದು ಪಾಶ್ಚಾತ್ಯ ದೇಶಗಳು ಬಳಕೆದಾರ ದೇಶಗಳಾಗಿವೆ. ಚೀನಾ ಉತ್ಪಾದಕ ದೇಶವಾಗಿದೆ. ಹೀಗಾಗಿ ಆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ’ ಎಂದರು.
undefined
ಪ್ರಧಾನಿ ಮೋದಿಯನ್ನು ಮಾನಸಿಕವಾಗಿ ಸೋಲಿಸಿದ್ದೇವೆ: ರಾಹುಲ್ ಗಾಂಧಿ
ಬಿಜೆಪಿ ಟೀಕೆ:
ಈ ನಡುವೆ ರಾಹುಲ್‌ಗೆ ಚಾಟಿ ಬೀಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹಾಗೂ ಕೇಂದ್ರ ಸಚಿವ ಗಿರಿರಾಜ ಸಿಂಗ್,‘ ಚೀನಾ ಪರ ಬ್ಯಾಟಿಂಗ್ ಮಾಡಲು ರಾಹುಲ್ ಹಾತೊರೆಯುತ್ತಿದ್ದಾರೆ. ವಿದೇಶಿ ನೆಲದಲ್ಲಿ ಭಾರತದ ಮರ್ಯಾದೆ ತೆಗೆಯುವ ಕಾಯಕವನ್ನು ಅವರು ಮುಂದುವರಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.