40 ವರ್ಷಗಳ ಬಳಿಕ ಜಪಾನ್ ರಾಜಮನೆತನದಲ್ಲಿ ಸಂಭ್ರಮ

By Suvarna News  |  First Published Sep 9, 2024, 12:42 PM IST

40 ವರ್ಷಗಳ ಬಳಿಕ ಜಪಾನ್‌ ರಾಜಮನೆತನದಲ್ಲಿ ಸಂಭ್ರಮ ಮನೆ ಮಾಡಿದೆ. ಜಪಾನ್ ರಾಜಮನೆತನದ ರಾಜ ಪ್ರಿನ್ಸ್ ಅಕಿಶಿನೊ ಅವರ ಪುತ್ರ ಪ್ರಿನ್ಸ್ ಹಿಸಹಿತೊ ಅವರು ಸೆಪ್ಟೆಂಬರ್ 6 ರಂದು 18ರ ಹರೆಯಕ್ಕೆ ಕಾಲಿರಿಸಿದ್ದಾರೆ.


40 ವರ್ಷಗಳ ಬಳಿಕ ಜಪಾನ್‌ ರಾಜಮನೆತನದಲ್ಲಿ ಸಂಭ್ರಮ ಮನೆ ಮಾಡಿದೆ. ಜಪಾನ್ ರಾಜಮನೆತನದ ರಾಜ ಪ್ರಿನ್ಸ್ ಅಕಿಶಿನೊ ಅವರ ಪುತ್ರ ಪ್ರಿನ್ಸ್ ಹಿಸಹಿತೊ ಅವರು ಸೆಪ್ಟೆಂಬರ್ 6 ರಂದು 18ರ ಹರೆಯಕ್ಕೆ ಕಾಲಿರಿಸಿದ್ದಾರೆ. 40 ವರ್ಷಗಳಿಂದಲೂ ಜಪಾನ್‌ನ ರಾಜಕುಟುಂಬದಲ್ಲಿ ಪುರುಷ ಉತ್ತರಾಧಿಕಾರಿ ಇರಲಿಲ್ಲ. ಹೀಗಾಗಿ ಪ್ರಿನ್ಸ್ ಹಿಸಹಿತೊ ಅವರು 18ಕ್ಕೆ ಕಾಲಿರಿಸಿರುವುದರಿಂದ ಜಪಾನ್‌ನ ರಾಜಮನೆತನದಲ್ಲಿ ಸಂಭ್ರಮ ಮನೆ ಮಾಡಿದೆ. ಜಪಾನ್‌ನಲ್ಲಿ ವೇಗವಾಗಿ ಜನಸಂಖ್ಯೆ ಪ್ರಮಾಣ ಕ್ಷೀಣಿಸುತ್ತಿರುವ ವರದಿಯ ನಡುವೆ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಈ ಜನಸಂಖ್ಯೆಯ ಇಳಿಕೆಯ ಪರಿಣಾಮ ರಾಜಮನೆತನದ ಮೇಲೂ ಬೀರುತ್ತಿದೆ.

ಪ್ರಿನ್ಸ್ ಹಿಸಹಿತೊ ಅವರು ಜಪಾನಿನ ರಾಜ ನರುಹಿತೊ ಅವರ ಸೋದರಳಿಯನಾಗಿದ್ದಾನೆ. ಹಿಸಾಹಿತೊ ಅವರ ತಂದೆ ರಾಜ ಅಕಿಶಿನೊ 1985 ರಲ್ಲಿ ವಯಸ್ಸಿಗೆ ಬಂದ ನಂತರ ಅವರಿಗೆ ಪಟ್ಟಾಭಿಷೇಕ ಮಾಡಲಾಗಿತ್ತು. ಇದಾಗಿ  40 ವರ್ಷದ ನಂತರ ಅವರ ಪುತ್ರ ಪ್ರಿನ್ಸ್ ಅಕಿಶಿನೊ ಅವರಿಗೆ ಸಿಂಹಾಸನವೇರುವ ಅವಕಾಶ ಸಿಗಲಿದೆ. ಈ ಖುಷಿ ಸಂದರ್ಭದಲ್ಲಿ ಜಪಾನ್‌ನ ರಾಜಮನೆತನ ಇಂಪಿರಿಯಲ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ,ರಾಜಕುಮಾರ ಹಿಸಾಹಿತೋ ಮಾತನಾಡಿ, ತಾನು ಪ್ರತಿಯೊಂದು ಅನುಭವದ ಮೂಲಕ ಇನ್ನಷ್ಟು ಕಲಿಯಲು ಬಯಸುತ್ತೇನೆ, ವಿವಿಧ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಅವುಗಳ ಮೂಲಕ ಬೆಳೆಯುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ. 

Tap to resize

Latest Videos

undefined

ಜಪಾನ್‌ನಲ್ಲಿ ವೃದ್ಧರ ಆರೈಕೆಗೆ ಜನರೇ ಇಲ್ಲ: ಕೇವಲ 6 ತಿಂಗಳಲ್ಲಿ 40000 ಒಬ್ಬಂಟಿ ವೃದ್ಧರ ಸಾವು!

ಪ್ರಸ್ತುತ ಜಪಾನಿನ ರಾಜ ನರುಹಿತೊ ಅವರ ಸೋದರಳಿಯ ಪ್ರಿನ್ಸ್ ಹಿಸಾಹಿತೊ ಅವರು ಈ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ತನ್ನ ಹೆತ್ತವರಿಗೆ ಮತ್ತು ಮದುವೆಯ ನಂತರ ರಾಜವಂಶವನ್ನು ತೊರೆದ ಅವನ ಸಹೋದರಿಯರಾದ ಮಾಕೊ ಕೊಮುರೊ ಮತ್ತು ರಾಜಕುಮಾರಿ ಕಾಕೊಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

ಪ್ರಸ್ತುತ, ಪ್ರಿನ್ಸ್ ಹಿಸಾಹಿತೊ ಅವರು ಟೋಕಿಯೊದ ಟ್ಸುಕುಬಾ ಹಿರಿಯ ಪ್ರೌಢಶಾಲೆಯ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಹೀಗಾಗಿ ಅವರ ಕಮಿಂಗ್ ಆಪ್ ಏಜ್ ಸೆರೆಮನಿ( ಹರೆಯಕ್ಕೆ ಕಾಲಿರಿಸಿದ ಮಕ್ಕಳಿಗೆ ಮಾಡುವ ಕಾರ್ಯಕ್ರಮ)ಯನ್ನು ಮುಂದಿನ ವರ್ಷದ ಸೆಪ್ಟೆಂಬರ್‌ನಲ್ಲಿ ಮಾಡಲು ನಿರ್ಧರಿಸಲಾಗಿದೆ. ಅವರ ಶೈಕ್ಷಣಿಕ ಬದುಕಿಗೆ ಅಡ್ಡಿಯಾಗದಿರಲು ಈ ಕ್ರಮ ಕೈಗೊಳ್ಳಲಾಗಿದೆ.

ಮುಸ್ಲಿಂ ರಾಷ್ಟ್ರದಲ್ಲೂ ಆಚರಿಸ್ತಾರೆ ಗಣೇಶನ ಹಬ್ಬ, ಇದರ ಹಿಂದಿದೆ ದೊಡ್ಡ ರೀಸನ್!

1947 ರಲ್ಲಿ ಸ್ಥಾಪಿಸಲಾದ ಜಪಾನೀಸ್ ಇಂಪೀರಿಯಲ್ ಹೌಸ್ ಕಾನೂನು ಜಪಾನ್ ರಾಜಮನೆತನದ ಪಟ್ಟವೇರುವುದಕ್ಕೆ ಪುರುಷರಿಗೆ ಮಾತ್ರ ಅವಕಾಶವಿದೆ. ಅಲ್ಲದೇ ರಾಜವಮಶಸ್ತರಲ್ಲದೇ ಸಾಮಾನ್ಯರನ್ನು ಮದುವೆಯಾಗುವ ಮಹಿಳಾ ಸದಸ್ಯರು ತಮ್ಮ ರಾಜಮನೆತನದ ಸ್ಥಾನಮಾನವನನ್ನು ತ್ಯಜಿಸಬೇಕಾಗುತ್ತದೆ. ಹಿಸಾಹಿತೊಗೂ ಮೊದಲು ಅವರ ತಂದೆ ಅಕಿಶಿನೊ ಅವರು ಉತ್ತರಾಧಿಕಾರಿಯಾಗಿದ್ದರು. ಪ್ರಸ್ತುತ ಹಿಸಾಹಿತೊ ಮತ್ತು ಅಕಿಶಿನೊ ಅವರನ್ನು ಹೊರತುಪಡಿಸಿ, ಇತರ ಏಕೈಕ ಸಂಭಾವ್ಯ ಉತ್ತರಾಧಿಕಾರಿಯ ಅವಕಾಶ ಇರುವುದು ಪ್ರಿನ್ಸ್ ಹಿಟಾಚಿ ಅವರಿಗೆ ಆದರೆ ಅವರಿಗೆ ಸ್ವಂತ ಮಕ್ಕಳಿಲ್ಲ.

click me!