ಪಾಕಿಸ್ತಾನದಲ್ಲಿ ಧರ್ಮ ಬದಲಿಸುತ್ತಿರೋ ಜನರು; ಹೆಚ್ಚಾಗ್ತಿದೆ ಹಿಂದೂಗಳ ಸಂಖ್ಯೆ!

By Mahmad Rafik  |  First Published Sep 9, 2024, 1:41 PM IST

ಪಾಕಿಸ್ತಾನದ 2023ರ ಜನಗಣತಿಯ ವರದಿಯು ಧಾರ್ಮಿಕ ಜನಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತಿದೆ. ಪಾಕಿಸ್ತಾನದಲ್ಲಿ ಹಿಂದೂಗಳ ಅಲ್ಪಸಂಖ್ಯಾತರು ಆಗಿದ್ದಾರೆ.


ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಧಾರ್ಮಿಕ ಜನಸಂಖ್ಯೆಯಲ್ಲಿ ಭಾರೀ ಬದಲಾವಣೆಯಾಗುತ್ತಿರುವ ವರದಿಗಳು ಪ್ರಕಟವವಾಗುತ್ತಿವೆ. ಇದೀಗ ಪಾಕಿಸ್ತಾನದ ಜನಗಣತಿಯ ವರದಿ ಭಾರೀ ಚರ್ಚಗೆ ಗ್ರಾಸವಾಗಿದೆ. ಪಾಕಿಸ್ತಾನದ 2023ರ ಜಾತಿಗಣತಿಯ ಪ್ರಕಾರ, ಮುಸ್ಲಿಮರ ಜನಸಂಖ್ಯೆ ಇಳಿಕೆಯಾಗುತ್ತಿದ್ದು, ಹಿಂದೂಗಳು ಸೇರಿದಂತೆ ಇನ್ನುಳಿದ ಜಾತಿಯ ಜನರ ಸಂಖ್ಯೆ ಏರಿಕೆಯಾಗಿದೆ. 2017 ಜನಗಣತಿ ಪ್ರಕಾರ, ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಶೇ.96.47ರಷ್ಟು ಮುಸ್ಲಿಮರಿದ್ದರು. 2023ರ ವರದಿಯಲ್ಲಿ ಮುಸ್ಲಿಮರ ಸಂಖ್ಯೆ ಶೇ.96.47ರಿಂದ ಶೇ.96ಕ್ಕೆ ಇಳಕೆಯಾಗಿದೆ. ಇತ್ತ ಹಿಂದೂ ಸೇರಿದಂತೆ ಇನ್ನುಳಿದ ಅಲ್ಪಸಂಖ್ಯಾತ ಸಮುದಾಯವದರ ಜನಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ ಎಂದು ವರದಿಯಾಗಿದೆ.

2017ರ ಜಾತಿಗಣತಿ ಪ್ರಕಾರ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಶೇ.1.85ರಷ್ಟಿತ್ತು. 2023ರಲ್ಲಿ ಹಿಂದೂಗಳ ಸಂಖ್ಯೆ ಶೇ.1.85ರಿಂದ ಶೇ.2ಕ್ಕೆ ಏರಿಕೆಯಾಗಿದೆ. ಮುಖ್ಯವಾಗಿ ಸಿಂಧ್ ಪ್ರಾಂತದಲ್ಲಿರುವ ಹಿಂದೂಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2023ರ ವರದಿಯಲ್ಲಿ ಹಿಂದೂಗಳ ಸಂಖ್ಯೆ 7 ಲಕ್ಷಕ್ಕೂ ಅಧಿಕವಾಗಿದೆ. ಇನ್ನುಳಿದಂತೆ ಸಿಖ್, ಬೌದ್ಧ ಮತ್ತು ಅಹಮದಿಯಾ ಸಮುದಾಯದ ಜನರ ಸಂಖ್ಯೆಯಲ್ಲಿ ಸಾಮಾನ್ಯ ಏರಿಕೆಯಾಗಿದೆ. ಆದ್ರೆ ಪಾಕಿಸ್ತಾನದ 2023ರ ಜನಸಂಖ್ಯೆಯ ವರದಿಯ ನಿಖರವಾದ ಅಂಕಿ-ಅಂಶಗಳು ಪ್ರಕಟವಾಗಿಲ್ಲ. ಕೆಲ ಪಾಕಿಸ್ತಾನಿ ಮಾಧ್ಯಮಗಳು ಈ ಕುರಿತು ಅಂಕಿ ಅಂಶಗಳನ್ನು ಪ್ರಕಟಿಸುತ್ತಿವೆ. ಪಾಕ್ ಮಾಧ್ಯಮಗಳ ಪ್ರಕಾರ, ಸ್ಥಳೀಯವಾಗಿ ಜನರು ಧರ್ಮ ಬದಲಾವಣೆಗೆ ಮುಂದಾಗುತ್ತಿದ್ದಾರಂತೆ.

Tap to resize

Latest Videos

undefined

ವೈರಿ ದೇಶ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತೆ 10 ವಸ್ತುಗಳು- ಪ್ರತಿ ಮನೆಯಲ್ಲೂ ಆಗುತ್ತೆ ಇದರ ಬಳಕೆ

ಈ ನಡುವೆ ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಧರ್ಮಾಂತರ ಮಾಡಲಾಗುತ್ತಿದೆ ಎಂಬುದರ ಕುರಿತ ವರದಿಗಳು ಸಹ ಪ್ರಕಟವಾಗುತ್ತಿವೆ. ಸದ್ಯ ಪಾಕಿಸ್ತಾನದಲ್ಲಿ ಉಂಟಾಗಿರುವ ಆರ್ಥಿಕ ದಿವಾಳಿತನ, ಅಸ್ಥಿರ ರಾಜಕೀಯ, ಸಾಮಾಜಿಕ ಅಸಮಾನತೆ ಸೇರಿದಂತೆ ಹಲವು ಸನ್ನಿವೇಶಗಳು ಧರ್ಮ ಬದಲಾವಣೆಗೆ ಕಾರಣವಾಗುತ್ತಿವೆ. 

ಜಮೀನು ಒಡೆತನ ಮತ್ತು ಮಾಲೀಕತ್ವದ ಹಂಚಿಕೆಯಲ್ಲಿಯೂ ಅಲ್ಪಸಂಖ್ಯಾತರು ಹಲವು  ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ಆದರೆ ಈಗ ಬಿಡುಗಡೆಯಾಗುತ್ತಿರುವ ವರದಿಗಳು ಪಾಕಿಸ್ತಾನದ ಧಾರ್ಮಿಕ ಜನಸಂಖ್ಯಾಶಾಸ್ತ್ರದಲ್ಲಿ ಗಮನಾರ್ಹ ಬದಲಾವಣೆಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸುತ್ತವೆ. ಈ ಬದಲಾವಣೆಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ಮತ್ತು ಸಾಮಾಜಿಕ ಪರಿಸ್ಥಿತಿಗಳೂ ಪ್ರಮುಖ ಪಾತ್ರವಹಿಸುತ್ತವೆ.

ಪಾಕಿಸ್ತಾನ್ ಈಗ ‘ಭಿಕಾರಿ’ಸ್ತಾನ್.. ‘ದಿವಾಳಿ’ಸ್ತಾನ್..! ಅದೊಂದು ನಿಯಮದಿಂದ ದಿವಾಳಿ ಅಂಚಿಗೆ ಬಂದ ದೇಶ!

click me!