ಈ ಕಂಪನಿಯು ತನ್ನ ಉದ್ಯೋಗಿಗಳ ಉದ್ಯೋಗ- ಜೀವನ ಸಮತೋಲನಕ್ಕಾಗಿ ಅನ್‌ಹ್ಯಾಪಿ ಲೀವ್ಸ್ ಕೊಡುವುದಾಗಿ ಪ್ರಕಟಿಸಿದೆ. ನಿಮಗೆ ಬೇಜಾರಾದಾಗ ಈ ರಜೆ ಬಳಸಿಕೊಳ್ಳಬಹುದು.
ದುಃಖ ನೋವುಗಳು ಪ್ರತಿಯೊಬ್ಬರಿಗೂ ಸಾಮಾನ್ಯ. ಕೆಲವೊಮ್ಮೆ ಮನಸ್ಸಿಗೆ ಸಿಕ್ಕಾಪಟ್ಟೆ ಬೇಜಾರಾಗುತ್ತದೆ. ಯಾರಿಗೂ ಹೇಳಿಕೊಳ್ಳೋ ಹಾಗಿರೋಲ್ಲ. ಅದರಲ್ಲೂ ಉದ್ಯೋಗದಲ್ಲಿ ಏರುಪೇರಾಗುವ ಹಾಗಿರೋಲ್ಲ. ಎಲ್ಲ ಬೇಜಾರನ್ನು ಗಂಟು ಕಟ್ಟಿ ಪಕ್ಕಕ್ಕಿಟ್ಟು ಕೆಲಸ ಮಾಡಬೇಕಿರುತ್ತದೆ. ಆದರೆ, ನೀವು ಚೀನಾದ ಈ ಕಂಪನಿಯ ಉದ್ಯೋಗಿಗಳಾದರೆ ಈ ತಲೆಬಿಸಿ ಇಲ್ಲ. ಏಕೆಂದರೆ, ಅದು ಅಸಂತೋಷದ ರಜೆಗಳನ್ನು ಕೂಡಾ ನೀಡುತ್ತದೆ.
ಇತ್ತೀಚಿನ ಚೀನಾ ಸೂಪರ್‌ಮಾರ್ಕೆಟ್ ವೀಕ್ 2024 ರ ಸಮಯದಲ್ಲಿ, ಹೆನಾನ್ ಪ್ರಾಂತ್ಯದ ಮೂಲದ ಪ್ರಮುಖ ಚಿಲ್ಲರೆ ಸರಪಳಿಯಾದ ಪ್ಯಾಂಗ್ ಡಾಂಗ್ ಲೈ, ಉದ್ಯೋಗ-ಜೀವನ ಸಮತೋಲನದ ಕಾಳಜಿಯನ್ನು ಪರಿಹರಿಸುವ ಗುರಿಯನ್ನು ಹೊಂದಿ, ಅಸಾಂಪ್ರದಾಯಿಕ ಪ್ರಕಟಣೆಯೊಂದಿಗೆ ಅಲೆಗಳನ್ನು ಸೃಷ್ಟಿಸಿತು.
52ಕ್ಕೆ ಕಾಲಿಟ್ಟ ಮಂದಿರಾ ಬೇಡಿ; ಈಕೆಯ ಫಿಟ್ನೆಸ್ ಸೀಕ್ರೆಟ್ ಇಲ್ಲಿದೆ ನೋಡಿ..
ಸಂಸ್ಥೆಯ ಸ್ಥಾಪಕ ಮತ್ತು ಅಧ್ಯಕ್ಷ ಯು ಡಾಂಗ್ಲೈ ಅವರು ದೇಶದಲ್ಲಿ ಪ್ರಚಲಿತದಲ್ಲಿರುವ ಸುದೀರ್ಘ ಕೆಲಸದ ಸಮಯದ ವ್ಯಾಪಕ ಸಂಸ್ಕೃತಿಯನ್ನು ಎದುರಿಸಲು ಉದ್ಯೋಗಿಗಳಿಗೆ ಹತ್ತು ಹೆಚ್ಚುವರಿ ರಜೆಗಳನ್ನು ನೀಡುವ ಒಂದು ಅದ್ಭುತ ಉಪಕ್ರಮವನ್ನು ಘೋಷಿಸಿದರು. ಪಾಂಗ್ ಡಾಂಗ್ ಲೈ ಅವರ ಈ ಕ್ರಮವು ಇಲ್ಲಿನ 'ಓನ್ಲಿ ವರ್ಕ್, ನೋ ಪ್ಲೇ' ನೀತಿಯಿಂದ ಗಮನಾರ್ಹವಾದ ನಿರ್ಗಮನವನ್ನು ಸೂಚಿಸುತ್ತದೆ, ಆರೋಗ್ಯಕರ ಕೆಲಸದ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಬೆಳವಣಿಗೆಯನ್ನು ಸೂಚಿಸುತ್ತದೆ.
ಉದ್ಯೋಗಿಗಳು ಮಾನಸಿಕವಾಗಿ, ಭಾವನಾತ್ಮಕವಾಗಿ ಆರೋಗ್ಯವಾಗಿದ್ದಾಗಲಷ್ಟೇ ಕೆಲಸವೂ ಚೆನ್ನಾಗಿ ಉದ್ಪಾದಕವಾಗಿ ಹೊರ ಹೊಮ್ಮುತ್ತದೆ. ಅದೇ ಯಾವುದೇ ಚಿಂತೆ, ಬೇಜಾರಿನಲ್ಲಿ ಕೆಲಸ ಮಾಡಿದರೆ ಅದರ ಗುಣಮಟ್ಟ ಹಾಳಾಗುತ್ತದೆ ಎಂದು ಡೋಂಗ್ಲೈ ಈ ಅನ್‌ಹ್ಯಾಪಿ ಲೀವ್ಸ್ ಕೊಡುವುದರ ಹಿಂದಿನ ಉದ್ದೇಶ ಹೇಳಿದರು.
ಐಎಂಡಿಬಿ ರೇಟಿಂಗ್ 8.2 ಪಡೆದ ಆರ್ಟಿಕಲ್ 370 ಒಟಿಟಿ ಬಿಡುಗಡೆ ದಿನಾಂಕ, ಪ್ಲ್ಯಾಟ್‌ಫಾರಂ ಮತ್ತಿತರೆ ವಿವರ..
ಈ ಅನ್‌ಹ್ಯಾಪಿ ಲೀವ್ಸ್ ಕೊಡಲು ಮ್ಯಾನೇಜ್‌ಮೆಂಟ್ ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಡೋಂಗ್ಲೈ ಹೇಳಿದ್ದಾರೆ.
ಈ ಪ್ರಕಟಣೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾದ ಬೆಂಬಲವನ್ನು ಗಳಿಸಿದೆ. ಎಲ್ಲ ಕಂಪನಿಗಳೂ ಹೀಗೆ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಯೋಚಿಸಿದರೆ ಚೆನ್ನಾಗಿರುತ್ತದೆ ಅಲ್ಲವೇ?