Viral Video: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಪಾಲಕರ ಸಮಾಧಿಯ ಮೇಲೆ ಮೂತ್ರ ಹೊಯ್ದ ಅನಾಮಿಕ ವ್ಯಕ್ತಿ!

By Santosh NaikFirst Published Mar 16, 2024, 11:52 AM IST
Highlights

ಅಚ್ಚರಿಯ ಘಟನೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪಾಲಕರ ಸಮಾಧಿಯ ಮೇಲೆ ಮೂತ್ರ ಹೊಯ್ದಿದ್ದಾರೆ. ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಈ ಘಟನೆ ನಡೆದಿದೆ.

ನವದೆಹಲಿ (ಮಾ.16): ಅಚ್ಚರಿಯ ಘಟನೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಪಾಲಕರ ಸಮಾಧಿಗೆ ಘೋರ ಅಪಚಾರವಾಗಿದೆ. ಸೇಂಟ್‌ಪೀಟರ್ಸ್‌ಬರ್ಗ್‌ನ ಸೆರೆಫಿಮೊವಸ್ಕಿ ಸ್ಮಶಾನ ಭೂಮಿಯಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ತಂದೆ ತಾಯಿಯ ಸಮಾಧಿಯ ಮೇಲೆ ಅನಾಮಿಕ ವ್ಯಕ್ತಿ ಮೂತ್ರ ಮಾಡಿದ್ದಾನೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ. ಇನ್ನು ರಷ್ಯಾ ಅಧ್ಯಕ್ಚ ವ್ಲಾಡಿಮಿರ್‌ ಪುಟಿನ್‌ ಅವರವರೆಗೂ ಈ ಸುದ್ದಿ ತಲುಪಿದ್ದು, ಶನಿವಾರ ಮುಂಜಾನೆಯೇ  ಸೆರೆಫಿಮೊವಸ್ಕಿ ಸ್ಮಶಾನ ಭೂಮಿ ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಪುಟಿನ್‌ ಕೂಗಾಡಿದ್ದಾರೆ. ಮೂತ್ರ ಮಾಡಿರುವ ವ್ಯಕ್ತಿಯೇ ಇದರ ವಿಡಿಯೋ ಮಾಡಿದ್ದು, ಇದು ಕ್ಷಣ ಮಾತ್ರದಲ್ಲಿ ವೈರಲ್‌ ಆಗಿದೆ. ಆದರೆ, ವಿಡಿಯೋದ ಸತ್ಯಾಸತ್ಯತೆ ಬಗ್ಗೆ ಇನ್ನೂ ಅನುಮಾನಗಳಿವೆ ಎನ್ನಲಾಗಿದೆ. ಮೂತ್ರದ ಬದಲು ಬೇರೆ ಯಾವುದಾದರೂ ದ್ರವವನ್ನೂ ಬಳಕೆ ಮಾಡಿದ್ದಾರೆಯೇ ಎನ್ನುವ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ಶುಕ್ರವಾರದಿಂದ ಮೂರು ದಿನಗಳ ಕಾಲ ರಷ್ಯಾದ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುತ್ತಿದೆ. ಇದರ ನಡುವೆಯೇ ಈ ಬೆಳವಣಿಗೆಯಾಗಿದೆ. ಸಮರ್ಥ ವಿರೋಧ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಕೊರತೆ ರಷ್ಯಾದಲ್ಲಿರುವ ಕಾರಣ ವ್ಲಾಡಿಮಿರ್‌ ಪುಟಿನ್‌ ಮತ್ತೆ ಆರು ವರ್ಷಗಳ ಕಾಲ ರಷ್ಯಾದ ಅಧ್ಯಕ್ಷರಾಗಿ ಮುಂದುವರಿಯುವುದು ನಿಶ್ಚಯವಾಗಿದೆ.

ಇನ್ನೊಂದಡೆ ಅಧ್ಯಕ್ಷೀಯ ಚುನಾವಣೆಯ ಹೊತ್ತಲ್ಲೇ ರಷ್ಯಾದ ಕೆಲವು ಭಾಗಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.ಸೈಬೀರಿಯಾದಲ್ಲಿ, ಮತದಾನದ ಸ್ಥಳಗಳಲ್ಲಿ ಬೆಂಕಿ ಹಚ್ಚಿರುವ ಸಾಕಷ್ಟು ವಿಡಿಯೋಗಳು ಬರುತ್ತಿವೆ. ಒಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಮೊಲೊಟೊವ್ ಕಾಕ್ಟೈಲ್ ಬಳಸಿ ಮತಪೆಟ್ಟಿಗೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ ನಂತರ ಬೆಂಕಿಯನ್ನು ನಂದಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿರುವುದನ್ನು ಕಾಣಬಹುದು. ದುಷ್ಕರ್ಮಿಯನ್ನು ಬಂಧಿಸಲಾಗಿದೆ, ಬೆಂಕಿಯನ್ನು ಯಶಸ್ವಿಯಾಗಿ ನಂದಿಸಲಾಗಿದೆ ಮತ್ತು ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಥಳೀಯ ಚುನಾವಣಾ ಆಯೋಗ ತಿಳಿಸಿದೆ. ಮತದಾರರ ಹಕ್ಕುಗಳ ರಕ್ಷಣೆಗಾಗಿ ಚಳವಳಿಯ ಕಾರ್ಯಕರ್ತ ಗುಂಪಿನ ಸ್ಟಾನಿಸ್ಲಾವ್ ಆಂಡ್ರೆಚುಕ್, ಈ ಘಟನೆಗಳು "ಈ ಚುನಾವಣೆಗಳ ಹೊಸ ವೈಶಿಷ್ಟ್ಯ" ಎಂದು ಹೇಳಿದ್ದಾರೆ. ಮತದಾರರು ಮತಪೆಟ್ಟಿಗೆಗಳಿಗೆ ಬಣ್ಣವನ್ನು ಸುರಿದಿರುವ ಘಟನೆ ನಡೆದಿವೆ ಎಂದು ಆಂಡ್ರೆಚುಕ್ ತಿಳಿಸಿದ್ದಾರೆ.

'ಲೆಕ್ಕ ಬರುತ್ತಾ ನಿಮಗೆ..' ಚುನಾವಣಾ ಬಾಂಡ್‌ ವಿಚಾರದಲ್ಲಿ ವಿಪಕ್ಷಗಳ ಮೇಲೆ ಅಮಿತ್‌ ಶಾ ವಾಗ್ದಾಳಿ!

ದೇಶಾದ್ಯಂತ ಮತದಾರರಿಂದ ಪ್ರತಿಭಟನೆಗಳು ಮತ್ತು ವಿಧ್ವಂಸಕ ಕೃತ್ಯಗಳ ವ್ಯಾಪಕ ವರದಿಗಳ ನಡುವೆಯೇ ವ್ಲಾಡಿಮಿರ್ ಪುಟಿನ್ ರಷ್ಯಾದ ಚುನಾವಣೆಯ ಮೊದಲ ದಿನದಂದು ಕೋಪದಲ್ಲಿದ್ದಂತೆ ಕಂಡಿತು. ಅದಕ್ಕೆ ಕಾರಣವಾಗಿದ್ದು, ಸೆರೆಫಿಮೊವಸ್ಕಿ ಸ್ಮಶಾನ ಭೂಮಿ ನಡೆದ ಘಟನೆ. ಈ ಕುರಿತಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  ರಷ್ಯಾದಲ್ಲಿ ಮೂರು ದಿನಗಳ ಚುನಾವಣೆಯು ನಿನ್ನೆ ರಾತ್ರಿ ಪ್ರಾರಂಭವಾಯಿತು ಮತ್ತು ಭಾನುವಾರ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!

An unknown person urinated on the grave of Putin's parents at the Serafimovsky cemetery in St. Petersburg. pic.twitter.com/zF63kbLUB7

— Insider Corner (@insiderscorner)

 

click me!