ಅಕ್ರಮ ಮದುವೆ: ಪಾಕ್ ಮಾಜಿ ಪ್ರಧಾನಿ ಇಮ್ರಾನ್‌, ಬುಶ್ರಾ ದಂಪತಿಗೆ ಮತ್ತೆ 7 ವರ್ಷ ಜೈಲು

By Kannadaprabha NewsFirst Published Feb 4, 2024, 10:11 AM IST
Highlights

ತೋಶಾಖಾನಾ ಪ್ರಕರಣದಲ್ಲಿ ತಲಾ 14 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ  ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ ಮತ್ತೊಂದು ಶಾಕ್ ಆಗಿದೆ. ಕಾನೂನುಬಾಹಿರವಾಗಿ ಇಮ್ರಾನ್‌ ಖಾನ್‌ ಮತ್ತು ಬುಶ್ರಾ ಬೀಬಿ ವಿವಾಹವಾಗಿದ್ದಾರೆಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ.

ಇಸ್ಲಾಮಾಬಾದ್‌: ತೋಶಾಖಾನಾ ಪ್ರಕರಣದಲ್ಲಿ ತಲಾ 14 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ  ಇಮ್ರಾನ್ ಖಾನ್ ಹಾಗೂ ಪತ್ನಿ ಬುಶ್ರಾ ಬೀಬಿಗೆ ಮತ್ತೊಂದು ಶಾಕ್ ಆಗಿದೆ. ಕಾನೂನುಬಾಹಿರವಾಗಿ ಇಮ್ರಾನ್‌ ಖಾನ್‌ ಮತ್ತು ಬುಶ್ರಾ ಬೀಬಿ ವಿವಾಹವಾಗಿದ್ದಾರೆಂದು ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನದ ನ್ಯಾಯಾಲಯ ಆದೇಶಿಸಿದೆ.  ಬುಶ್ರಾ ಬೀಬಿಯ ವಿಚ್ಛೇದಿತ ಪತಿ ಖಾವರ್‌ ಮನೇಕಾ ದಾಖಲಿಸಿದ್ದ ಪ್ರಕರಣದಲ್ಲಿ ಇಮ್ರಾನ್‌ ಹಾಗೂ ಬುಶ್ರಾ ‘ಇದ್ದತ್‌’ (ಮರು ಮದುವೆಗೆ ಕಾಯುವ ಸಮಯ) ಅವಧಿಯೊಳಗೆ ವಿವಾಹವಾಗಿದ್ದಾರೆ ಮತ್ತು ಮದುವೆಗೆ ಮುಂಚೆಯೇ ಪರಸ್ಪರರು ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸತತ 14 ಗಂಟೆಗಳ ಕಾಲ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.

ಇದಕ್ಕೂ ಮೊದಲು ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಪಡೆದಿದ್ದ ಉಡುಗೊರೆಗಳನ್ನು ಅಕ್ರಮವಾಗಿ ಮಾರಿಕೊಂಡ ಆರೋಪದಲ್ಲಿ (ತೋಶಾಖಾನಾ) ಇಮ್ರಾನ್‌ ಖಾನ್‌ ದಂಪತಿಗೆ, ಪಾಕ್‌ ನ್ಯಾಯಾಲಯವೊಂದು ತಲಾ 14 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಕ್ಕೂ ಮೊದಲು ಜನವರಿ 30 ರಂದು  ಇಮ್ರಾನ್‌ಗೆ ರಹಸ್ಯ ದಾಖಲೆ ಬಹಿರಂಗ ಪ್ರಕರಣದಲ್ಲಿ 10 ವರ್ಷ ಜೈಲಾಗಿತ್ತು.  ಜನವರಿ 30 ರಂದು ತೋಶಾಖಾನಾ ಪ್ರಕರಣದ ತೀರ್ಪು ಪ್ರಕಟಿಸಿದ ಉತ್ತರದಾಯಿತ್ವ ನ್ಯಾಯಾಲಯ, ಇಮ್ರಾನ್‌ಖಾನ್‌ ಹಾಗೂ ಪತ್ನಿ ಬುಷ್ರಾ ಬೀಬಿಗೆ ತಲಾ 78.7 ಕೋಟಿ ರು. ದಂಡ ವಿಧಿಸಿದೆ ಮತ್ತು ಇನ್ನು10 ವರ್ಷ ಕಾಲ ಯಾವುದೇ ಅಧಿಕಾರ ಅನುಭವಿಸದಂತೆ ಆದೇಶಿಸಿದೆ, ಇದರಿಂದಾಗಿ ಇಮ್ರಾನ್‌ ಫೆ.8ರ ಚುನಾವಣೆಗೆ ಸ್ಪರ್ಧಿಸಿ ಮತ್ತೆ ಪ್ರಧಾನಿ ಆಗುವ ಕನಸಿಗೆ ಹಿನ್ನಡೆ ಆಗಿದೆ.

Breaking: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತಷ್ಟು ಸಂಕಷ್ಟ: ಸೈಫರ್ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ

ಏನಿದು ಪ್ರಕರಣ?:

ತೋಶಾಖಾನಾ ಎಂದರೆ ಸರ್ಕಾರಿ ಬೊಕ್ಕಸ (ಖಜಾನೆ) ಎಂಬುದಾಗಿದ್ದು, ಇಮ್ರಾನ್‌ ಖಾನ್‌ ಪ್ರಧಾನಿಯಾಗಿದ್ದ ವೇಳೆ ವಿವಿಧೆಡೆಯಿಂದ ಪಡೆದುಕೊಂಡ ಉಡುಗೊರೆಗಳನ್ನು ಸರ್ಕಾರಕ್ಕೆ ಬಹಿರಂಗಪಡಿಸಿರಲಿಲ್ಲ ಮತ್ತು ಕೆಲವು ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಿಕೊಂಡ ಆರೋಪ ಕೇಳಿ ಬಂದಿತ್ತು.

ಪಾಕ್‌ ಸಂಸತ್ ಚುನಾವಣೆ: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನಾಮಪತ್ರ ತಿರಸ್ಕಾರ

 

click me!