ಪ್ರಧಾನಿ ರೇಸ್‌ನಲ್ಲಿ ಲಿಜ್ ಟ್ರಸ್ ಬುಕ್ಕಿಗಳ ಫೇವರಿಟ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ಕೆಲ ದಿನಗಳಿಂದ ಮುಂಚೂಣಿಯಲ್ಲಿದ್ದ ರಿಶಿ ಸುನಕ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬುಕ್ಕಿಗಳು ಯೂ ಟರ್ನ್ ಹೊಡೆದಿದ್ದು, ರಿಶಿ ಬದಲು ಲಿಜ್‌ನತ್ತ ಒಲವು ತೋರಿಸಿದ್ದಾರೆ.
ಲಂಡನ್(ಜು.21): ಬ್ರಿಟನ್ ಪ್ರಧಾನಿ ರೇಸ್ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಮುಂದಿನ ಬ್ರಿಟನ್ ಪ್ರಧಾನಿ ಎಂದೇ ಹೇಳಲಾಗುತ್ತಿದೆ. ಇದೀಗ ಸುನಕ್ ಹಾಗೂ ವಿದೇಶಾಂಗ್ ಇಲಾಖೆ ಕಾರ್ಯದರ್ಶಿ ಲಿಜ್ ಟ್ರಸ್ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಇಷ್ಟು ದಿನಗಳ ಕಾಲ ಬುಕ್ಕಿಗಳ ಫೇವರಿಟ್ ಆಗಿದ್ದ ರಿಶಿ ಸುನಕ್ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಬುಕ್ಕಿಗಳ ಫೇವಿರಿಟ್ ಲಿಸ್ಟ್‌ನಲ್ಲಿ ಲಿಜ್ ಟ್ರಸ್ ಮೊದಲ ಸ್ಥಾನ ಪಡೆದಿದ್ದಾರೆ. ಸದ್ಯದ ವರದಿ ಪ್ರಕಾರ ಬುಕ್ಕಿಗಳ ಪ್ರಕಾರ ಲಿಜ್ ಟ್ರಸ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದಿದ್ದಾರೆ. ಕನ್ಸರ್ವೇಟೀವ್ ಪಾರ್ಟಿಯ ಸುನಕ್ ಹಾಗೂ ಟ್ರಸ್ ನಡುವೆ ಭಾರಿ ಪೈಪೋಟಿ ಇದೆ. ಇದೀಗ ಒಲವು ಲಿಜ್ ಟ್ರಸ್‌ನತ್ತ ಜಾರಿದೆ. ಬೊರಿಸ್ ಜಾನ್ಸನ್ ರಾಜೀನಾಮೆಯಿಂದ ಹಿಡಿದು ಇಲ್ಲೀವರೆಗೆ ರಿಶಿ ಸುನಕ್ ಬುಕ್ಕಿಗಳ ಫೇವರಿಟ್ ಆಗಿದ್ದರು. ಆದರೆ ಅಂತಿಮ ಸುತ್ತು ಪ್ರವೇಶಿಸದ ಬೆನ್ನಲ್ಲೇ ಲಿಜ್ ಟ್ರಸ್ ಫೇವರಿಟ್ ಎನಿಸಿಕೊಂಡಿದ್ದಾರೆ ಎಂದು ಬುಕ್ಕಿಗಳ ವರದಿಗಳು ಹೇಳುತ್ತಿವೆ.
ಲಿಜ್ ಟ್ರಸ್ ದಕ್ಷಿಣ ಲಂಡನ್‌ನ ಕೌನ್ಸಿಲರ್ ಆಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ ಸಂಸದೆಯಾಗಿ ಬ್ರಿಟನ್ ಸಂಸತ್ ಪ್ರವೇಶಿಸಿದರು. 2010ರಲ್ಲಿ ಸೌತ್ ವೆಸ್ಟ್ ನಾರ್ಫೋಕ್‌ನಿಂದ ಗೆದ್ದ ಲಿಜ್ ಟ್ರಸ್(Liz truss), ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. 2012ರಲ್ಲಿ ಪ್ರಧಾನಿ(britain prime minister) ಡೇವಿಡ್ ಕ್ಯಾಮರೋನ್ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಸಚಿವೆಯಾಗಿದ್ದ ಲಿಜ್ ಟ್ರಸ್ ಬಳಿಕ ಸರ್ಕಾರದ ಪರಿಸರ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಯಿತು.
ಬ್ರಿಟನ್ ಪ್ರಧಾನಿ ರೇಸ್: 5ನೇ ಸುತ್ತಲ್ಲೂ ರಿಷಿ ಸುನಕ್‌ಗೆ ಮುನ್ನಡೆ: ಗೆಲುವಿಗೆ ಇನ್ನೊಂದೇ ಹೆಜ್ಜೆ
ಮುಖ್ಯಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಸೇವೆ ಸಲ್ಲಿಸದ ಬಳಿಕ ಲಿಜ್ ಟ್ರಸ್ ಕಳೆದ ವರ್ಷ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡರು. ಸಾರ್ವಜನಿಕ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದೇನೆ. ಹಲವು ಬಾರಿ ಟೀಕೆಗೆ ಗುರಿಯಾಗಿದ್ದೇನೆ. ಆದರೆ ಯಾವತ್ತು ನಿರ್ಧಾರದಿಂದ ಹಿಂದೆ ಸರಿದಿಲ್ಲ. ದೇಶದ ಒಳಿತಿಗಾಗಿ ದುಡಿದಿದ್ದೇನೆ ಎಂದು ಖಾಸಗಿ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಲಿಟ್ ಟ್ರಸ್ ಹೇಳಿದ್ದಾರೆ.
ಬುಕ್ಕಿಗಳ(bookie report) ಪೈಕಿ ಲಿಜ್ ಟ್ರಸ್ ಫೇವರಿಟ್ ಎನಿಸಿಕೊಂಡಿದ್ದರೆ, ಮತಗಳ ಆಧಾರದಲ್ಲಿ ರಿಶಿ ಸುನಕ್ ಫೇವಿರಿಟ್ ಆಗಿದ್ದಾರೆ. ಮೂರನೇ ಸುತ್ತಿನಲ್ಲಿ ರಿಷಿ ಸುನಾಕ್(Rishi Sunak) 115 ಮತ ಪಡೆದುಕೊಂಡಿದ್ದರು. ಈ ಹಿಂದಿನ ರೌಂಡ್‌ನಲ್ಲಿನ ಮತದಾನಗಳಿಗೆ ಹೋಲಿಸಿದರೆ 14 ಮತಗಳು ಹೆಚ್ಚು. ನಂತರದಲ್ಲಿ ಸ್ಥಾನದಲ್ಲಿ ಪೆನ್ನಿ ಮೋರ್ಡಂಟ್ (82 ಮತ), ಲಿಜ್ ಟ್ರಸ್ (71 ಮತ), ಕೆಮಿ ಬಡೇಂಚ್ (58) ಸ್ಥಾನ ಪಡೆದಿದ್ದರು. 31 ಮತ ಪಡೆದ ಟಾಮ್ ಸ್ಪರ್ಧೆಯಿಂದ(Britain PM Election) ಹೊರಬಿದ್ದಿದಿದ್ದರು. 4ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದ ಪೆನ್ನಿ ಮೋರ್ಡಂಟ್, ಈ ಸುತ್ತಿನಲ್ಲಿ ಕೇವಲ 105 ಮತ ಪಡೆದು ಸ್ಪರ್ಧೆಯಿಂದ ಹೊರಬಿದ್ದರು. ಈ ಐದೂ ಹಂತಗಳಲ್ಲಿ ಟೋರಿ ಪಕ್ಷ ಎಂದೇ ಕರೆಯಲ್ಪಡುವ ಕನ್ಸರ್ವೇಟಿವ್ ಪಕ್ಷದ ಸಂಸದರು ಮತ ಚಲಾಯಿಸಿದ್ದರು. ಇನ್ನು 5ನೇ ಹಂತದ ಮತದಾನದಲ್ಲಿ ಇನ್ಫಿ ಅಳಿಯ ರಿಷಿ ಸುನಾಕ್ 137 ಮತಗಳನ್ನು ಪಡೆದುಕೊಂಡರು. ಇದೇ ವೇಳೆ, ಅವರ ಜತೆ 113 ಮತಗಳನ್ನು ಪಡೆದ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಸಹ ಅಂತಿಮ ಹಂತ ಪ್ರವೇಶಿಸಿದರು.
ಯಾರಿಗೆ ಬೇಕಾದ್ರೂ ಮತ ಕೊಡಿ, ರಿಷಿಗೆ ಕೊಡ್ಬೇಡಿ: ಇನ್ಫಿ ಮೂರ್ತಿ ಅಳಿಯನ ವಿರುದ್ಧ ಬೋರಿಸ್ ಜಾನ್ಸನ್ ಗರಂ!
ಅಂತಿಮ ಸುತ್ತಿನಲ್ಲಿ ರಿಶಿ ಸುನಕ್ ಹಾಗೂ ಲಿಜ್ ಟ್ರಸ್ ಆಯ್ಕೆಯನ್ನು ಟೋರಿ ಪಕ್ಷದ ನೊಂದಾಯಿತ 1.60 ಲಕ್ಷ ಮತದಾರರು ಮತ ಚಲಾಯಿಸುವ ಮೂಲಕ ಮಾಡಲಿದ್ದಾರೆ. ಹೀಗೆ ಆಯ್ಕೆಯಾದವರು, ಟೋರಿ ಪಕ್ಷದ ನೂತನ ನಾಯಕರಾಗಿ ಮತ್ತು ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.