ಬೇರೊಬ್ಬರ ಜೊತೆ ತನ್ನ ಪತ್ನಿಯ ಮದುವೆ ವಿಡಿಯೋ ನೋಡಿದ ಪತಿ; 19 ಮ್ಯಾರೇಜ್ ಸೀಕ್ರೆಟ್ ರಟ್ಟು !

Published : Jun 01, 2021, 03:02 PM IST
ಬೇರೊಬ್ಬರ ಜೊತೆ ತನ್ನ ಪತ್ನಿಯ ಮದುವೆ ವಿಡಿಯೋ ನೋಡಿದ ಪತಿ; 19 ಮ್ಯಾರೇಜ್ ಸೀಕ್ರೆಟ್ ರಟ್ಟು !

ಸಾರಾಂಶ

ಮದುವೆಯಾಗಿ ಪೋಷಕರನ್ನು ನೋಡಲು ತವರಿಗೆ ತೆರಳಿದ ಪತ್ನಿ ಸಾಮಾಜಿಕ ಜಾಲತಾಣ ನೋಡಿ ಬೆಚ್ಚಿ ಬಿದ್ದ ಗಂಡ 19 ಮಂದಿಗೆ ವಂಚಿಸಿದ ಚಾಲಾಕಿ ಪತ್ನಿಯ ರೋಚಕ ಸ್ಟೋರಿ ಇಲ್ಲಿದೆ

ಚೀನಾ(ಜೂ.01): ಮದುವೆ ಅನ್ನೋ ಹೆಸರಿನಲ್ಲಿ ಅದೆಷ್ಟೋ ಮೋಸ, ವಂಚನೆಗಳು ನಡೆಯುತ್ತಿದೆ. ಅದೆಷ್ಟೇ ಎಚ್ಚರಿಕೆಯಿಂದ ಇದ್ದರೂ ಪ್ರಕರಣಗಳು ನಡೆಯುತ್ತಲೇ ಇದೆ. ಒಂದಲ್ಲ, ಎರಡಲ್ಲ 19 ಮಂದಿ ಮದುವೆಯಾಗಿ ಬರೋಬ್ಬರಿ 2.28 ಕೋಟಿ ರೂಪಾಯಿ ವಂಚಿಸಿದ ಘಟನೆ ನಡೆದಿದೆ. 

ಭರ್ಜರಿ' ವರದಕ್ಷಿಣೆ ತೆಗೆದುಕೊಂಡ ಮದುವೆ ಮುಗಿದಿದ್ದು 17 ನಿಮಿಷದಲ್ಲಿ!...

ಈ ಘಟನೆ ನಡೆದಿರುವುದು ಚೀನಾದಲ್ಲಿ. ಮಂಗೋಲಿಯಾ ಭಾಗದ ಬಯನ್ನರ್  ಪ್ರದೇಶದ 35 ವರ್ಷದ ವ್ಯಕ್ತಿ ಬ್ರೋಕರ್ ಮೂಲಕ ಗಂಸೂ ವಲಯದ ಹುಡುಗಿಯೊಬ್ಬಳನ್ನು ಸೂಚಿಸಿದ್ದಾರೆ. 16.9 ಲಕ್ಷ ರೂಪಾಯಿ ವಧುದಕ್ಷಿಣೆ ನೀಡಿ ಬಯನ್ನರ್  ಆ ಹುಡುಗಿಯ ಮದುವೆಯಾಗಿದ್ದಾನೆ

2021ರ ಜನವರಿಯಲ್ಲಿ ಮದುವೆ ನಡೆದಿದೆ. ಮಾರ್ಚ್ ತಿಂಗಳ ವೇಳೆ ಪೋಷಕರ ನೋಡಬೇಕು ಎಂದು ತವರಿಗೆ ಹೋಗಿದ್ದಾಳೆ. ಇತ್ತ ತಿಂಗಳಾದರೂ ಒಂದೂಂದು ಸಬೂಬು ನೀಡುತ್ತಾ ಪತ್ನಿ ಬರಲೇ ಇಲ್ಲ. ಇತ್ತ ಪತಿ ಸಾಮಾಜಿಕ ಜಾಲಾತಾಣ ನೋಡುತ್ತಿರುವ ವೇಳೆ ತನ್ನದೇ ಪತ್ನಿಯ ಹೋಲುತ್ತಿರುವ ಮಹಿಳೆಯ ಮದುವೆ ವಿಡಿಯೋ ನೋಡಿದ್ದಾರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ಕೂಲಂಕುಷವಾಗಿ ನೋಡಿದಾಗ ಆ ವಿಡಿಯೋದಲ್ಲಿರುವುದು ತನ್ನ ಪತ್ನಿ ಎಂದು ಖಚಿತವಾಗಿದೆ. ಆದರೆ ಬೇರೋಬ್ಬ ವ್ಯಕ್ತಿ ಜೊತೆ ಮದುವೆ ವಿಡಿಯೋ ಪತಿಯ ನಿದ್ದೆಗೆಡಿಸಿದೆ. ಹೀಗಿ ಸಾಮಾಜಿಕ ಜಾಲತಾಣ ಪರಿಶೀಲಿಸಿದಾಗ ಈ ರೀತಿಯ ಕೆಲ ವಿಡಿಯೋಗಳು ಪತ್ತೆಯಾಗಿದೆ.

ಈ ಕುರಿತು ಪತ್ನಿಗೆ ಫೋನ್ ಮೂಲಕ ವಿಚಾರಿಸಲು ಯತ್ನಿಸಿದರೆ ಫೋನ್ ಕೂಡ ಸ್ವಿಚ್ ಆಫ್. ಒಂದೆರೆಡು ದಿನ ಕಾದ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಈ ವೇಳೆ ಈ ವಂಚಕಿಯ ಪುರಾಣ ಬಯಲಾಗಿದೆ. 

ಮದುವೆಯಾಗಲು ಹುಡುಗಿ ಸಿಗದ ವ್ಯಕ್ತಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಮಹಿಳೆ ಹಾಗೂ ಬ್ರೋಕರ್ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಈ ರೀತಿ 19 ಮಂದಿಯನ್ನು ವಂಚಕಿ ಮದುವೆಯಾಗಿದ್ದಾರೆ. ಇಷ್ಟೇ ಅಲ್ಲ 2.28 ಕೋಟಿ ರೂಪಾಯಿ ವಂಚಿಸಿರುವುದು ಬಯಲಾಗಿದೆ. 2019ರಿಂದ ಈ ರೀತಿ ಮೋಸ ಮಾಡುತ್ತಿರುವುದು ತನಿಖೆಯಿಂದ ಬಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!