ಪಾಕಿಸ್ತಾನ: ಆಸ್ಪತ್ರಗೆ ದಾಖಲಾಗಿದ್ದ ಹಿಂದು ಯುವತಿ ಮೇಲೆ ಮುಸ್ಲಿಂ ವೈದ್ಯರಿಂದ ಅತ್ಯಾಚಾರ

Published : Sep 04, 2023, 01:24 PM ISTUpdated : Sep 04, 2023, 01:32 PM IST
ಪಾಕಿಸ್ತಾನ: ಆಸ್ಪತ್ರಗೆ ದಾಖಲಾಗಿದ್ದ ಹಿಂದು ಯುವತಿ ಮೇಲೆ ಮುಸ್ಲಿಂ  ವೈದ್ಯರಿಂದ ಅತ್ಯಾಚಾರ

ಸಾರಾಂಶ

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಪ್ರಾಪ್ತ ಯುವತಿ ಮೇಲೆ ಮುಸ್ಲಿಂ ವೈದ್ಯನೇ ಕ್ರೂರವಾಗಿ ಅತ್ಯಾಚಾರ ನಡೆಸಿದ ಘಟನೆ ಪಾಕಿಸ್ತಾನದ ಸಿಂಧ್‌ನಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯಿಂದಾಗಿ ಪಾಕಿಸ್ತಾನದಲ್ಲಿ ಹಿಂದೂಗಳ ಸುರಕ್ಷತೆಯ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 

ಸಿಂಧ್: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅಪ್ರಾಪ್ತ ಯುವತಿ ಮೇಲೆ ಮುಸ್ಲಿಂ ವೈದ್ಯನೇ ಕ್ರೂರವಾಗಿ ಅತ್ಯಾಚಾರ ನಡೆಸಿದ ಘಟನೆ ಪಾಕಿಸ್ತಾನದ ಸಿಂಧ್‌ನಲ್ಲಿ ನಡೆದಿದೆ. ಈ ಹೃದಯ ವಿದ್ರಾವಕ ಘಟನೆಯಿಂದಾಗಿ ಪಾಕಿಸ್ತಾನದಲ್ಲಿ ಹಿಂದೂಗಳ ಸುರಕ್ಷತೆಯ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. 

ಸೀಮಾ ಸುಮ್ರೋ(Seema sumro rape case) ಎಂಬ ಹಿಂದು ಅಪ್ರಾಪ್ತ ಯುವತಿಗೆ ಕಿಡ್ನಿಗೆ ಸಂಬಂಧಿಸಿದ ಅನರೋಗ್ಯದಿಂದಾಗಿ  ಇಂಡಸ್ ಮೆಡಿಕಲ್ ಯುನಿರ್ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗಳ ಚಿಕಿತ್ಸೆಗೆ ಸಿಂಧ್‌ನ ತಾಂಡೋ ಮೊಹಮ್ಮದ್ ಖಾನ್ ಸಿಟಿಯಿಂದ ಬಂದಿದ್ದ ಕುಟುಂಬ. ಆದರೆ ಅದೇ ಆಸ್ಪತ್ರೆಯ ಮತಾಂಧ, ತೀವ್ರಗಾಮಿ ಇಸ್ಲಾಮಿಸ್ಟ್ ವೈದ್ಯನೋರ್ವ ಚಿಕಿತ್ಸೆ ನೀಡುವ ನೆಪದಲ್ಲಿ ಬಾಲಕಿಗೆ ಡ್ರಗ್ಸ್ ನೀಡಿದ್ದಾನೆ. ಬಳಿಕ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಕ್ರೂರವಾಗಿ ಅತ್ಯಾಚಾರ ಮಾಡಿರುವ ಕಾಮುಕ.

ಅತ್ಯಾಚಾರದಿಂದ ಬಡ ಸೀಮಾಳ ದೈಹಿಕ ಆರೋಗ್ಯ ಸ್ಥಿತಿಯು ಹದಗೆಟ್ಟಿತ್ತು. ಯುವತಿ ಮೇಲೆ ಅತ್ಯಾಚಾರ ನಡೆದ ಘಟನೆ ಬಯಲಾಗುತ್ತಿದ್ದಂತೆ ದುಷ್ಕರ್ಮಿ ವೈದ್ಯರು ಮತ್ತು ಸಹಚರರು  ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. 

'ಪಾಕಿಸ್ತಾನದಲ್ಲಿ ಇನ್ನು ಹಿಂದುಗಳು ಇದ್ದಾರೆಯೇ'  ಶುಭಾಶಯ ಎಂದಿದ್ದ ಇಮ್ರಾನ್‌ಗೆ ಬಿಸಿ

ಈ ಘಟನೆಯಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದು ಯುವತಿಯರು ಎಂಥ ಕೆಟ್ಟ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆಂಬುದನ್ನು ತೋರಿಸಿದೆ. ಪಾಕಿಸ್ತಾನದಲ್ಲಿನ ಧಾರ್ಮಿಕ ಉಗ್ರಗಾಮಿಗಳ ಮೊದಲ ಟಾರ್ಗೆಟ್ ಅಪ್ರಾಪ್ತ ಹಿಂದು ಯುವತಿಯರೇ ಆಗಿದ್ದಾರೆ. ಅದರಲ್ಲೂ ಇಂಥ ಪ್ರಕರಣಗಳು ಬಹುತೇಕ ಹಿಂದುಗಳೇ ವಾಸಿಸುವ ಸಿಂಧ್ ಪ್ರಾಂತ್ಯದಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಈ ಪ್ರದೇಶದಲ್ಲಿ ಹಿಂದು ಯುವತಿಯವರು ಅಪಹರಣ, ಅತ್ಯಾಚಾರ, ಬಲವಂತವಾಗಿ ಮತಾಂತರಕ್ಕೆ ಮತ್ತು ಅಪಹರಣಕಾರರೊಂದಿಗೆ ಬಲವಂತದ ಮದುವೆಗೆ ಒತ್ತಾಯಿಸುವುದು ಸಾಮಾನ್ಯವೆಂಬಂತಾಗಿದೆ.

ನೆರೆಹೊರೆಯವರನ್ನು ಪ್ರೀತಿಸಿದರೆ ತಪ್ಪೇನಲ್ಲ..! ಕೊಹ್ಲಿ ಮೇಲಿನ ಅಭಿಮಾನ ತೋರಿದ ಪಾಕ್‌ ಮಹಿಳಾ ಅಭಿಮಾನಿ

ಯುವತಿಯರಿಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ಮೂಲಭೂತವಾದಿಗಳು ಹೆಚ್ಚಾಗಿ ಅಪಹರಿಸುತ್ತಾರೆ. ಹೀಗಿದ್ದೂ ಅಲ್ಲಿನ ಕಾನೂನು ನ್ಯಾಯಾಲಯ ಈ ವಿಚಾರದಲ್ಲಿ ಮೌನವಹಿಸುವ ಮೂಲಕ ಇಂಥ ಕೃತ್ಯಗಳಲ್ಲಿ ತೊಡಗುವ ಅಪರಾಧಿಗಳಿಗೆ ಮೌನ ಸಮ್ಮತಿಯನ್ನು ನೀಡುತ್ತದೆ.  ಪಾಕಿಸ್ತಾನ ಸರ್ಕಾರವು ಒದಗಿಸಿದ ಸೌಲಭ್ಯದಿಂದಾಗಿ ಈ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಘಟನೆಗಳ ಹಿಂದಿನ ಪ್ರಾಥಮಿಕ ಕಾರಣವೇನೆಂದರೆ, ಅಪರಾಧಿಗಳು ಮುಸ್ಲಿಮರು, ಬಲಿಪಶುಗಳು ಹಿಂದೂಗಳು ಆಗಿರುವುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲದಿದ್ದರೆ 3ನೇ ವಿಶ್ವಯುದ್ಧ : ಟ್ರಂಪ್‌ ಎಚ್ಚರಿಕೆ
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌