ಸಿಂದೂರದಲ್ಲಿ ಧ್ವಂಸವಾಗಿದ್ದ ಜೈಷ್‌ ಹೆಡ್‌ ಆಫೀಸ್‌ ಪುನರ್‌ ನಿರ್ಮಾಣ; ಪಾಕ್‌ ಸರ್ಕಾರದಿಂದ ₹25 ಕೋಟಿ

Published : Aug 24, 2026, 06:57 AM IST
Jaish e Mohammed Markaz Subhan Allah headquarters in Pakistan Bahawalpur reconstructed

ಸಾರಾಂಶ

'ಆಪರೇಷನ್ ಸಿಂದೂರ' ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಿಂದ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯನ್ನು ಪುನರ್‌ ನಿರ್ಮಿಸಲಾಗಿದೆ. ಈ ಮರುನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರವೇ 25 ಕೋಟಿ ಪಾಕಿಸ್ತಾನಿ ರುಪಾಯಿ ನೀಡಿರುವುದು ವರದಿಯಾಗಿದೆ.

ಲಾಹೋರ್: ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ನಡೆಸಿದ ಹಿಂದೂ ನರಮೇಧಕ್ಕೆ ಪ್ರತಿಯಾಗಿ ಭಾರತ ಕೈಗೊಂಡಿದ್ದ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂದೂರ’ದ ವೇಳೆ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಪ್ರಧಾನ ನೆಲೆಯನ್ನು (ಹೆಡ್‌ಕ್ವಾರ್ಟರ್‌) ಸಂಪೂರ್ಣವಾಗಿ ಪುನರ್‌ ನಿರ್ಮಿಸಲಾಗಿದೆ.

ಭಾರತೀಯ ಸಶಸ್ತ್ರ ಪಡೆಗಳು ಜೈಷ್‌ ಪ್ರಧಾನ ಕಚೇರಿಯ ಮೇಲೆ 15 ತಿಂಗಳ ಹಿಂದೆ ದಾಳಿ ಮಾಡಿದ್ದವು. ಆದರೆ ಈಗ ಮಾಧ್ಯಮಗಳಿಗೆ ಲಭ್ಯವಾಗಿರುವ ದೃಶ್ಯಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಶಿಬಿರವನ್ನು ಅಮೃತಶಿಲೆ, ಬಣ್ಣ ಮತ್ತು ಪ್ಲಾಸ್ಟರ್‌ ಬಳಸಿ ಪುನಃಸ್ಥಾಪಿಸಲಾಗಿದೆ ಎಂದು ತೋರಿಸುತ್ತವೆ.

ಮರ್ಕಜ್ ಸುಭಾನಲ್ಲಾದ ಕೇಂದ್ರ ಸಭಾಂಗಣ

ಮಸೀದಿ ಇರುವ ಈ ನೆಲೆಯ ಮರುನಿರ್ಮಾಣಕ್ಕೆ ಪಾಕಿಸ್ತಾನ ಸರ್ಕಾರವೇ 25 ಕೋಟಿ ಪಾಕಿಸ್ತಾನಿ ರು. ನೀಡಿದೆ. ಇದರಲ್ಲಿ ಸುಮಾರು 11 ಕೋಟಿ ರು.ಗಳನ್ನು ಮರ್ಕಜ್ ಸುಭಾನಲ್ಲಾದ ಕೇಂದ್ರ ಸಭಾಂಗಣವನ್ನುಮರುಸ್ಥಾಪಿಸಲು ಖರ್ಚು ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಮೇ 7, 2025 ರಂದು ಜೆಇಎಂ ಪ್ರಧಾನ ಕಚೇರಿಯ ಮೇಲೆ ದಾಳಿ ಮಾಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಘಾತ..! ಅಪಘಾತಕ್ಕೆ ಈಡಾದ ಸ್ಟಾರ್ ನಟ ಅಜಿತ್‌ ಕುಮಾರ್‌ ಕಾರು; ಈಗ ಹೇಗಿದೆ 'ತಲಾ'ರ ಆರೋಗ್ಯ?
ಭಾರತ ಆಪರೇಷನ್ ಸಿಂಧೂರ್‌ನಲ್ಲಿ ಹೊಡೆದುರುಳಿಸಿದ ಉಗ್ರರ ಶಿಬಿರ ಪುನರ್ ನಿರ್ಮಾಣ; ಪಾಕ್ ಸರ್ಕಾರದ ₹25 ಕೋಟಿ ಫಂಡ್!