21 ವರ್ಷ ಜತೆಗಿದ್ದ ಜೋಡಿಗೆ ಐವರು ಮಕ್ಕಳು, ಮದುವೆ ಕನಸು ಕೈಗೂಡಲೇ ಇಲ್ಲ!

Published : Jul 02, 2021, 08:42 PM ISTUpdated : Jul 02, 2021, 08:45 PM IST
21 ವರ್ಷ ಜತೆಗಿದ್ದ ಜೋಡಿಗೆ ಐವರು ಮಕ್ಕಳು, ಮದುವೆ ಕನಸು ಕೈಗೂಡಲೇ ಇಲ್ಲ!

ಸಾರಾಂಶ

* ಸಾಯುವ ಮುನ್ನ ಗೆಳತಿಯೊಂದಿಗೆ ಕೆಲ ದಿನ ಬಾಳಲು ಬಯಸಿದ್ದ * ಮದುವೆಗೆ ಕೆಲವೇ ಕ್ಷಣ ಇದ್ದಾಗ ವರ ನಿಧನ * ಕ್ಯಾನ್ಸರ್ ಗೆ ಬಲಿಯಾದ,  ಹಳೆ ಪತ್ನಿಯ ಕಣ್ಣೀರು

ಸ್ಕಾಟ್ಲೆಂಡ್‌(ಜು. 01)  ಸ್ಕಾಟ್ಲೆಂಡ್‌ನ ನಾರ್ತ್ ಐರ್‌ಶೈರ್‌ನ ವರ ಡ್ಯಾಡ್ ಆಫ್ ಇಲೆವನ್ ಪಾಲ್ ವೈಯನ್  ಬಲಿಪೀಠದ ಮೇಲೆಯೇ ಕುಸಿದು ಬಿದ್ದಿದ್ದ. ಆತನ ಕುಟುಂಬ ಉಳಿಸಿಕೊಳ್ಳಲು ಎಷ್ಟೊಂದು ಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.

57 ವರ್ಷದ ವರ  21 ವರ್ಷ ಜತೆಗೆ ಇದ್ದ ಗೆಳತಿಯನ್ನು ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸಿದ್ದ. ಅನಾರೋಗ್ಯದ ಲಕ್ಷಣಗಳು ಆತನನ್ನು ಕಾಡುತ್ತಿದ್ದರೂ ಸಾವು ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ.  

38  ವರ್ಷದ ಗೆಳತಿಯೊಂದಿಗೆ  21 ವರ್ಷ  ಜತೆಗೆ ಇದ್ದ ಪರಿಣಾಮ ಅವರಿಗೆ ಐವರು ಮಕ್ಕಳು.  ತನ್ನ ಮಕ್ಕಳೊಂದಿಗೆ ಹಾಜರಿದ್ದಳು ಗಂಡನ ಜತೆಯೇ ಅಧಿಕೃತ ಮದುವೆ ಆಗನಬೇಕಿತ್ತು.  ಗೆಳತಿಗೆ ಐದು ಮಕ್ಕಳನ್ನು ನೀಡಿದ್ದವ ಮದುವೆಗೆ ಸಿದ್ಧವಾಗಿದ್ದ.  ಆದರೆ ಸಾವು ಬರಮಾಡಿಕೊಂಡಿತ್ತು. ಮಕ್ಕಳು  ಅಗಲಿದ ತಂದೆಗೆ ಅಲ್ಲಿಂದಲೇ ಅಂತಿಮ ನಮನ ಸಲ್ಲಿಸಿದರು.

ಮದುವೆ ಗೋರಂಟಿ ಮಾಸುವ ಮುನ್ನವೇ ಹತ್ಯೆಯಾಗಿದ್ದಳು 

ಕೆಲ ದಿನಗಳ ಹಿಂದಷ್ಟೆ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಸಾಯುವ ಮುನ್ನ ಗೆಳತಿಯನ್ನು ಮದುವೆಯಾಗಬೇಕೆಂದು ಬಯಸಿದ್ದ ಪವಿತ್ರ ಪ್ರೇಮ ಅವರದ್ದು. ಆತನ ಶ್ವಾಸಕೋಶ ಮತ್ತು ಲೀವರ್ ಸಂಪೂರ್ಣವಾಗಿ ಕ್ಯಾನ್ಸರ್ ಗೆ ಆಹಾರವಾಗಿತ್ತು. ಎರಡು ವಾರದಿಂದ ಆರು ವಾರ ಆತ ಬದುಕಬಹುದು ಎಂದು ವೈದ್ಯರು ತಿಳಿಸಿದ್ದ ಕಾರಣಕ್ಕೆ ಎಂಟನೇ ದಿನಕ್ಕೆ ಮದುವೆ ಫಿಕ್ಸ್ ಮಾಡಿಕೊಳ್ಳಲಾಗಿತ್ತು.

ವರ ಅಲಿಸನ್ ತನ್ನ ಸರ್ ನೇಮ್ ಬದಲಾಯಿಸಿಕೊಳ್ಳುವ ತೀರ್ಮಾನ ಮಾಡಿದ್ದಳು. ಅತಿ ಸಣ್ಣ ಸಮಯದಲ್ಲಿಯೇ ಅಲಿಸನ್  ಮತ್ತು ವೈಯನ್  ಒಂದಾಗುವ ನಿರ್ಧಾರಕ್ಕೆ ಬಂದಿದ್ದರು ಆದರೆ ವಿಧಿ ಆಟ ಬೇರೆಯದೇ ಆಗಿತ್ತು ಮದುವೆಗೆ ಎಲ್ಲ  ಸಿದ್ಧತೆ ಮಾಡಿಕೊಂಡಿದ್ದಾಗಲೇ ಕ್ಯಾನ್ಸರ್ ವರನ ಬಲಿಪಡೆದಿದೆ. ಗೆಳತಿ ಆತನ ಮಕ್ಕಳು ಕಣ್ಣೀರು ಹಾಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!