ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಕಚೇರಿ ಬಳಿ ಡ್ರೋನ್ ಹಾರಾಟ!

By Suvarna NewsFirst Published Jul 2, 2021, 4:26 PM IST
Highlights

* ಜಮ್ಮುವಿನಲ್ಲಿ ಅನುಮಾನಾಸ್ಪದ ಡ್ರೋನ್ ಹಾರಾಟ ಬೆನ್ನಲ್ಲೇ ಮತ್ತೊಂದು ಆತ್ತೊಂದು ಆತಂಕ

* ಪಾಕಿಸ್ತಾನದ ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್ ಕಾಂಪೌಂಡ್ ಒಳಭಾಗದಲ್ಲಿ ಡ್ರೋನ್‌

* ಭದ್ರತೆ ಉಲ್ಲಂಘನೆ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಭಾರತ

ಇಸ್ಲಮಾಬಾದ್(ಜು.02): ಕಣಿವೆನಾಡು ಜಮ್ಮುವಿನ ವಾಯುನೆಲೆ ಬಳಿ ಕಳೆದ ಕೆಲ ದಿನಗಳಿಂದ ಅನುಮಾನಾಸ್ಪದ ಡ್ರೋನ್‌ ಹಾರಾಟ ಆರಂಭವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಹೀಗಿರುವಾಗಲೇ ಅತ್ತ ಪಾಕಿಸ್ತಾನದ ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್ ಕಾಂಪೌಂಡ್ ಒಳಭಾಗದಲ್ಲಿ ಡ್ರೋನ್‌ ಕಾಣಿಸಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್ ಕಾಂಪೌಂಡ್ ಒಳಭಾಗದಲ್ಲಿ ಈ ಡ್ರೋನ್ ಕಾಣಿಸಿಕೊಂಡಿದೆ. ಇದರಿಂದ ಪಾಕಿಸ್ತಾನದ ವಿರುದ್ಧ ಅಸಮಾಧಾನಗೊಂಡಿರುವ ಭಾರತ, ಭದ್ರತೆ ಉಲ್ಲಂಘನೆ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಕಳೆದ ಒಂದು ವಾರದಿಂದ ಡ್ರೋನ್‌ ದಾಳಿ ಹಾಗೂ ಹಾರಾಟ ಉದ್ವಿಗ್ನ ಸ್ಥಿತಿ ನಿರ್ಮಿಸಿದ್ದು, ಭಾರೀ ಆತಂಕ ಹುಟ್ಟು ಹಾಕಿದೆ. ಇಂತಹ ವಿಷಮ ಸಂದರ್ಭದಲ್ಲೇ ಇಸ್ಲಾಮಾಬಾದ್‌ನ ಭಾರತೀಯ ಹೈಕಮಿಷನ್ ಕಚೇರಿ ಬಳಿ ಡ್ರೋನ್ ಕಾನಿಸಿಕೊಂಡಿರುವುದು ಈ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಡ್ರೋನ್ ಚಲನವಲನದ ಕುರಿತಂತೆ ಭಾರತ ತನ್ನ ಭದ್ರತಾ ಕಳವಳಗಳನ್ನು ಪಾಕಿಸ್ತಾನಕ್ಕೆ ವ್ಯಕ್ತಪಡಿಸಿದೆ. ಈ ಘಟನೆ ಜೂನ್ 26ರಂದು ನಡೆದಿದೆ ಎನ್ನಲಾಗಿದೆ. ಅದೇ ದಿನ ಮಧ್ಯರಾತ್ರಿ ಜಮ್ಮು ವಿಮಾನ ನಿಲ್ದಾಣದಲ್ಲಿರುವ ವಾಯುಪಡೆಗಳ ನೆಲೆಯಲ್ಲಿ ಎರಡು ಲಘು ಡ್ರೋನ್ ದಾಳಿಗಳು ಸಂಭವಿಸಿದ್ದವು.

click me!