ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ

By Anusha Kb  |  First Published Nov 10, 2023, 4:44 PM IST

ಕುಸಿದ ಆರ್ಥಿಕತೆಯಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಜನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಹೀಗಿರುವಾಗ ಅಲ್ಲಿನ ಮೀನುಗಾರನೋರ್ವನಿಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ.


ಕರಾಚಿ: ಕುಸಿದ ಆರ್ಥಿಕತೆಯಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ ಜನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಇದೆ. ಹೀಗಿರುವಾಗ ಅಲ್ಲಿನ ಮೀನುಗಾರನೋರ್ವನಿಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ.  ಕರಾಚಿ ನಗರದ ಮೀನುಗಾರನೋರ್ವನಿಗೆ ಹಲವು ಔಷಧೀಯ ಗುಣಗಳುಳ್ಳ ಅಪರೂಪದ ಮೀನೊಂದು ಸಿಕ್ಕಿದ್ದು,  ಇದರ ಪರಿಣಾಮ್ ಆತನಿಗೆ ರಾತ್ರೋರಾತ್ರಿ ಶ್ರೀಮಂತಿಕೆ ಒಲಿದು ಬಂದಿದೆ. ಇಬ್ರಾಹಿಂ ಹೈದರಿ ಎಂಬ ಮೀನುಗಾರಿಕಾ ಗ್ರಾಮದಲ್ಲಿ ವಾಸ ಮಾಡುವ ಮೀನುಗಾರಿಕೆಯಲ್ಲಿ ಕೆಲಸ ಮಾಡುವ ಹಾಜಿ ಬಲೋಚ್‌ ಎಂಬುವವ ಕೆಲಸಗಾರರಿಗೆ ಅರಬ್ಬಿ ಸಮುದ್ರದದಲ್ಲಿ ಸ್ಥಳೀಯವಾಗಿ ಗೋಲ್ಡನ್ ಫಿಶ್ ಅಥವಾ ಸೋವಾ ಫಿಶ್ ಎಂದು ಕರೆಯಲ್ಪಡುವ ಮೀನೊಂದು ಸಿಕ್ಕಿದೆ.

ಹೀಗೆ ಸಿಕ್ಕಿದ ಮೀನು ಕರಾಚಿ ಬಂದರಿನಲ್ಲಿ ಸುಮಾರು 70 ಲಕ್ಷ ರೂಪಾಯಿಗಳಿಗೆ ಸೇಲ್ ಆಗಿದೆ ಎಂದು ಪಾಕಿಸ್ತಾನದ ಮೀನುಗಾರರ ಸಂಘದ ಮುಬಾರಕ್ ಖಾನ್ ಎಂಬುವವರು ಹೇಳಿದ್ದಾರೆ. ಸೋವಾ ಮೀನನ್ನು ಅತ್ಯಂತ ಹೆಚ್ಚು ಬೆಲೆಬಾಳುವ ಮತ್ತು ಅಪರೂಪದ ಮೀನೆಂದು ಪರಿಗಣಿಸಲಾಗುತ್ತದೆ.  ಏಕೆಂದರೆ ಅದರ ಹೊಟ್ಟೆಯಲ್ಲಿರುವ ಪದಾರ್ಥಗಳನ್ನುಹಲವು ರೋಗಗಳನ್ನು ಗುಣಪಡಿಸುವ  ಔಷಧೀಯ ಗುಣಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಮೀನಿನಲ್ಲಿರುವ ದಾರದಂತಹ ವಸ್ತುವನ್ನು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿಯೂ ಬಳಸಲಾಗುತ್ತದೆ. ಹೀಗೆ ಸಿಕ್ಕಿದ ಮೀನು 70 ಲಕ್ಷಕ್ಕೆ ಹರಾಜಾಗಿದೆ. ಈ ಸೋವಾ ಮೀನುಗಳು ಸಾಮಾನ್ಯವಾಗಿ 20 ರಿಂದ 40 ಕೆಜಿ ತೂಗುತ್ತವೆ. ಜೊತೆಗೆ 1.5 ಮೀಟರ್‌ ಉದ್ದ ಬೆಳೆಯುತ್ತವೆ. ಈ ಮೀನುಗಳಿಗೆ ಪೂರ್ವ ಏಷ್ಯಾ ದೇಶಗಳಲ್ಲಿ ಹೆಚ್ಚು ಬೇಡಿಕೆ ಇದೆ. 

Tap to resize

Latest Videos

ಬರೀ ಇಷ್ಟೇ ಅಲ್ಲದೇ ಈ ಸೋವಾ ಮೀನುಗಳು ಸಾಂಸ್ಕೃತಿಕವಾಗಿ ಹಾಗೂ ಸಂಪ್ರದಾಯಿಕವಾಗಿ ಮಹತ್ವವನ್ನು ಹೊಂದಿದ್ದು, ಸಾಂಪ್ರದಾಯಿಕ ಔಷಧಗಳು ಮತ್ತು ಸ್ಥಳೀಯ ಪಾಕಪದ್ಧತಿಯಲ್ಲಿಯೂ ಅದನ್ನು ಬಳಸಲಾಗುತ್ತದೆ.  ನಾವು ಕರಾಚಿಯ ತೆರೆದ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದೆವು .ಈ ವೇಳೆ ಬೃಹತ್ ಗಾತ್ರದ ಗೋಲ್ಡನ್ ಫಿಶ್ ನಮ್ಮ ಬಲೆಗೆ ಬಿತ್ತು ಎಂದು ಅವರು ಹೇಳಿದ್ದಾರೆ.  ತಮಗೆ ಈ ಮೀನಿನ ಹರಾಜಿನಿಂದ ಸಿಕ್ಕಿದ ಹಣವನ್ನು ತಮ್ಮ 7 ಜನ ಸಿಬ್ಬಂದಿ ಜೊತೆ ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅಂದಹಾಗೆ ಈ ಗೋಲ್ಡನ್ ಫಿಶ್ ಕೇವಲ ಬ್ರೀಡಿಂಗ್ ಸಮಯದಲ್ಲಿ ಮಾತ್ರ ಸಮುದ್ರ ತೀರದ ಸಮೀಪ ಬರುತ್ತದೆ. 

click me!