ಜಮೀನಿನಲ್ಲಿ ರೈತನಿಗೆ ಸಿಕ್ತು 36 ಸಾವಿರ ಕೋಟಿ ಮೌಲ್ಯದ ಚಿನ್ನ; ಕ್ಷಣಾರ್ಧದಲ್ಲಿ ಬದಲಾಯ್ತು ಅನ್ನದಾತನ ಬದುಕು

Published : May 15, 2025, 09:40 PM IST
ಜಮೀನಿನಲ್ಲಿ ರೈತನಿಗೆ ಸಿಕ್ತು 36 ಸಾವಿರ ಕೋಟಿ ಮೌಲ್ಯದ ಚಿನ್ನ; ಕ್ಷಣಾರ್ಧದಲ್ಲಿ ಬದಲಾಯ್ತು ಅನ್ನದಾತನ ಬದುಕು

ಸಾರಾಂಶ

Farmer becomes billionaire: ರೈತನೊಬ್ಬ ತನ್ನ ಜಮೀನಿನಲ್ಲಿ ₹36,000 ಕೋಟಿ ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆಹಚ್ಚಿದ್ದಾನೆ. ಈ ನಿಧಿಯಲ್ಲಿ 100 ಕೆಜಿಗೂ ಹೆಚ್ಚು ಚಿನ್ನ, ಚಿನ್ನದ ಇಟ್ಟಿಗೆಗಳು ಮತ್ತು ಪ್ರಾಚೀನ ನಾಣ್ಯಗಳು ಸೇರಿವೆ.

Farmer Discovers Gold on Land: ಅದೃಷ್ಟ ಹೇಗೆ ಖುಲಾಯಿಸುತ್ತೆ ಅಂತ ಯಾರಿಂದಲೂ ಹೇಳಲು ಅಸಾಧ್ಯ. ಅದೃಷ್ಟವನ್ನು ರಾಜಯೋಗ ಅಂತಾನೂ ಕರೆಯಲಾಗುತ್ತದೆ. ಇತ್ತೀಚೆಗೆ ರೈತನೋರ್ವನಿಗೆ ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ 36 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಧಿ (Farmer finds gold in France) ಸಿಕ್ಕಿದೆ. ಕ್ಷಣಾರ್ಧದಲ್ಲಿ ರೈತನ ಜೀವನವೇ ಬದಲಾಗಿದೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿನ್ನದ ನಿಧಿ ಸಿಕ್ಕಿರುವ ಫ್ರಾನ್ಸ್‌ನಲ್ಲಿ ಈ ಸುದ್ದಿ ಕೋಲಾಹಲವೇ ಸೃಷ್ಟಿಯಾಗಿದೆ. ಫ್ರಾನ್ಸ್ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. 

ಯುನಿಯನ್ ರಿಯೋ ವರದಿ ಪ್ರಕಾರ, ಫ್ರಾನ್ಸ್‌ನ ಪುಟ್ಟ ಗ್ರಾಮವಾದ ಆವೆರ್ಗ್ನೆಯಲ್ಲಿ 36 ಸಾವಿರ ಕೋಟಿ ರೂಪಾಯಿ ಮೌಲ್ಯದ ನಿಧಿ (RS 36000 crore gold discovery) ಸಿಕ್ಕಿದೆ. ಆವೆರ್ಗ್ನೆಯ ನಿವಾಸಿಯಾಗಿರುವ 52 ವರ್ಷದ ರೈತ ಮೈಕೆಲ್ ಡುಪಾಂಟ್ ಇಂದು ಸಾವಿರಾರು ಕೋಟಿಯ ಒಡೆಯನಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಕೃಷಿ ಮಾಡಿಕೊಂಡಿರುವ ಮೈಕೆಲ್ ಡುಪಾಂಟ್, ಇತ್ತೀಚೆಗೆ ತಮ್ಮ ಜಮೀನಿನಲ್ಲಿ (Gold treasure found in farmland)  ಅಗೆಯುವ ಕೆಲಸ ಮಾಡುತ್ತಿದ್ದರು. ಈ ಸಮಯದಲ್ಲಿ ಹೊಳೆಯುವ ವಸ್ತುವೊಂದು ಕಾಣಿಸಿದೆ. ಮೊದಲು ನುಣುಪಾಗಿರುವ ಕಲ್ಲು ಎಂದು ಮೈಕೆಲ್ ಡುಪಾಂಟ್ ಭಾವಿಸಿದ್ದರು. ನಂತರ ಮತ್ತಷ್ಟು ಅಗೆದಾಗ ಅದು ಚಿನ್ನ ಎಂದು ಗೊತ್ತಾಗಿದೆ. 

ನಂತರ ನಿಧಿಯನ್ನು ಹೊರಗೆ ತೆಗೆದು ಪರಿಶೀಲಿಸಿದಾಗ ಸುಮಾರು 100 ಕೆಜಿಗೂ ಅಧಿಕ ಚಿನ್ನ ಪತ್ತೆಯಾಗಿದೆ. ಇಟ್ಟಿಗೆ ಮಾದರಿಯ ಚಿನ್ನದ ಗಟ್ಟಿಗಳು ಮತ್ತು ಪ್ರಾಚೀನ ಕಾಲದ ಹಳೆಯ ನಾಣ್ಯಗಳು ಸೇರಿವೆ ಎಂದು ವರದಿಯಾಗಿದೆ. ಕೃಷಿ ಜಮೀನಿನಲ್ಲಿ ಪತ್ತೆಯಾಗಿರುವ ಪ್ರಾಚೀನ ಕಾಲದ ಚಿನ್ನದ ಮೌಲ್ಯ ಸುಮಾರು 4.2 ಬಿಲಿಯನ್ ಯುರೋ (36,000 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಪರ್ವತಾರೋಹಿಗಳಿಗೆ ಸಿಕ್ಕ ₹2.8 ಕೋಟಿ ಬೆಲೆಬಾಳುವ ಚಿನ್ನದ ನಿಧಿ ಪೆಟ್ಟಿಗೆ!

ಈ ಎಲ್ಲಾ ಚಿನ್ನ ರೈತನಿಗೆ ಸಿಗುತ್ತಾ?
36 ಸಾವಿರ ಕೋಟಿ ರೂ. ಮೌಲ್ಯದ ಚಿನ್ನ ಖಾಸಗಿ ಜಮೀನಿನನಲ್ಲಿ. ಹಾಗಾಗಿ ಈ ಎಲ್ಲಾ ನಿಧಿ ರೈತ ಮೈಕೆಲ್ ಡುಪಾಂಟ್ ಅವರಿಗೆ ಸಿಗುತ್ತಾ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಫ್ರಾನ್ಸ್ ಕಾನೂನುಗಳ ಪ್ರಕಾರ, ಇಂತಹ ನಿಧಿ ಮೇಲೆ ಸರ್ಕಾರ ಹಕ್ಕು ಹೊಂದಿರುತ್ತದೆ. ನಿಧಿ ಸಿಕ್ಕಿರುವ ಭೂಮಿ ಖಾಸಗಿಯಾಗಿದ್ರೆ, ಅದರ ಮಾಲೀಕನಿಗೆ ಪಾಲು ನೀಡಲಾಗುತ್ತದೆ. ಆದ್ರೆ ಎಷ್ಟು ಪಾಲು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಜನರ ಪ್ರತಿಕ್ರಿಯೆ ಏನು?
ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಬರಹಗಳಡಿ ವೈರಲ್ ಆಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೈಕೆಲ್ ಡುಪಾಂಟ್ ರೈತ ಓರ್ವ ಅದೃಷ್ಟವಂತ. ಸಿಕ್ಕಿರುವ ನಿಧಿಯಲ್ಲಿನ ಸಿಂಹಪಾಲು ಮೈಕೆಲ್ ಡುಪಾಂಟ್ ಅವರಿಗೆ ಸೇರಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಸುದ್ದಿ ಎಂದು ವಾದಿಸಿದ್ದಾರೆ. ಇಷ್ಟು ದೊಡ್ಡ ಮೊತ್ತದ ನಿಧಿ ಸಿಕ್ಕರೆ ಸರ್ಕಾರಗಳೇ ವಶಕ್ಕೆ ಪಡೆದುಕೊಳ್ಳುತ್ತವೆ. ಆದ್ರೂ ರೈತನಿಗೆ ಇದು ಒಳ್ಳೆಯ ಸುದ್ದಿ ಎಂದು ಬಹುತೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೊಂದಿಷ್ಟು ಆ ನಿಧಿಯ ಫೋಟೋ ಸಿಕ್ಕರೆ ಅಪ್ಲೋಡ್ ಮಾಡಿ, ನೋಡಿ ಕಣ್ತುಂಬಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ಸಿಕ್ತು 2600 ವರ್ಷಗಳಷ್ಟು ಹಳೆಯದಾದ ಚಿನ್ನದ ನಿಧಿ; ನೋಡುವವರು ನೋಡುತ್ತಲೇ ನಿಂತ್ರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!