ಮೊದಲ ಬಾರಿ ಕೇಳಿಸಿಕೊಂಡ ಪುಟಾಣಿ... ಬಾಲಕಿಯ ರಿಯಾಕ್ಷನ್ ಹೇಗಿದೆ ನೋಡಿ

Published : Oct 31, 2022, 08:47 PM IST
ಮೊದಲ ಬಾರಿ ಕೇಳಿಸಿಕೊಂಡ ಪುಟಾಣಿ... ಬಾಲಕಿಯ ರಿಯಾಕ್ಷನ್ ಹೇಗಿದೆ ನೋಡಿ

ಸಾರಾಂಶ

ಬಾಲ್ಯದಲ್ಲೇ ಅನಾರೋಗ್ಯದಿಂದಾಗಿ ಶ್ರವಣಶಕ್ತಿ ಕಳೆದುಕೊಂಡ ಪುಟ್ಟ ಬಾಲಕಿಯೊಬ್ಬಳು ಶ್ರವಣ ಸಾಧನದ ಸಹಾಯದಿಂದ ಮೊದಲ ಬಾರಿ ಕೇಳಿಸಿಕೊಂಡಿದ್ದು, ಆಕೆಯ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದೆ.

ಕೀನ್ಯಾ: ಕಣ್ಣು ಇಲ್ಲದವರಿಗೆ ಹೇಗೆ ನೇತ್ರದಾನ ಬದುಕಿನಲ್ಲಿ ಬೆಳಕು ಮೂಡಿಸಬಲ್ಲುದೋ ಹಾಗೆಯೇ ಕಿವಿ ಕೇಳಿಸದವರಿಗೆ ಶ್ರವಣ ಸಾಧನಗಳು ಹೊಸ ಭರವಸೆ ಮೂಡಿಸುತ್ತವೆ. ಹಾಗೆಯೇ ಹುಟ್ಟಿನಿಂದಲೇ ಶ್ರವಣದೋಷದಿಂದ ಒಂದು ಸಣ್ಣ ಸದ್ದನ್ನು ಕೂಡ ಕೇಳಿಸಿಕೊಂಡಿರದ ಪುಟಾಣಿ ಬಾಲಕಿಯೊಬ್ಬಳು, ಮೊದಲ ಬಾರಿಗೆ ಶ್ರವಣಸಾಧನದ ಮೂಲಕ ಸದ್ದನ್ನು ಕೇಳಿಸಿಕೊಂಡಿದ್ದು, ಮೊದಲ ಬಾರಿಗೆ ಕೇಳಿಸಿದ ಪುಟಾಣಿ ಬಾಲಕಿಯ ಪ್ರತಿಕ್ರಿಯೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೀನ್ಯಾದ ಪುಟ್ಟ ಬಾಲಕಿಯೊಬ್ಬಳ ವಿಡಿಯೋ ಇದಾಗಿದೆ.

ಗುಡ್‌ನ್ಯೂಸ್ ಎಂಬ ಇನ್ಸ್ಟಾಗ್ರಾಮ್ (Instagram) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಪುಟಾಣಿಯೊಬ್ಬಳಿಗೆ ಶ್ರವಣ ಸಾಧನವನ್ನು ಅಳವಡಿಸಲಾಗಿದ್ದು ಅದರ ಮೂಲಕ ಮೊದಲ ಬಾರಿಗೆ ಅವರು ಆಕೆಗೆ ಚಪ್ಪಾಳೆ ತಟ್ಟುವ ಮೂಲಕ ಸದ್ದು ಮಾಡಿ ಕೇಳಿಸಲಾಗುತ್ತದೆ. ಮೊದಲ ಬಾರಿ ಸದ್ದು ಕೇಳಿಸಿಕೊಂಡ ಬಾಲಕಿ ನಂತರ ಮುಖಕ್ಕೆ ಕೈ ಅಡ್ಡ ಹಿಡಿದು ಅಳಲು ಶುರು ಮಾಡುತ್ತಾಳೆ. ಈ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. ಕೀನ್ಯಾದ ವಜೀರ್ (Wajir) ಎಂಬ ನಗರದ ಏಳು ವರ್ಷದ ಬಾಲಕಿ ನೆಸ್ತಯ್ಹಾ (Nestayha) ಎಳವೆಯಲ್ಲಿರುವಾಗಲೇ ಅನಾರೋಗ್ಯಕ್ಕೆ ಒಳಗಾಗಿ ಕಿವಿ ತಮಟೆ (Ear Drum) ಒಡೆದು ಹೋದ ಪರಿಣಾಮ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಳು. ಆದರೆ ಇತ್ತೀಚೆಗೆ ಆಕೆಗೆ ಶ್ರವಣ ಸಾಧನದ ಮೂಲಕ ಕಿವಿ ಕೇಳಿಸುವಂತೆ ಮಾಡಲಾಗಿತ್ತು. ಆ ಕ್ಷಣ ಬಹಳ ಭಾವುಕವಾಗಿತ್ತು. 

ಮರ್ಡರ್‌ ಕೇಸ್‌: ಕಿವುಡಗೆ ಶಿಕ್ಷಣ ಕೊಡಿಸಿ ಹೇಳಿಕೆ ಪಡೆದ ಕೋರ್ಟ್‌..!

ವಿಡಿಯೋದಲ್ಲಿ ಕಾಣಿಸುವಂತೆ ಈ ಪುಟಾಣಿ ಬಾಲಕಿ ನೆಸ್ತಾಹ್‌ಳನ್ನು ಕುರ್ಚಿಯೊಂದರ ಮೇಲೆ ಕೂರಿಸಿ ಶ್ರವಣತಜ್ಞರು (E&T Specialist) ಆಕೆಯ ಕಿವಿಗೆ ಶ್ರವಣ ಸಾಧನವನ್ನು ಅಳವಡಿಸುತ್ತಾರೆ. ಶ್ರವಣ ಸಾಧನವನ್ನು ಅಳವಡಿಸಿದ ಬಳಿಕ ಶ್ರವಣತಜ್ಞರು ಆಕೆಯ ಕಿವಿಯ ಹಿಂಭಾಗದಲ್ಲಿ ಚಪ್ಪಾಳೆ ತಟ್ಟಿ ಆಕೆಗೆ ಕೇಳುವುದೋ ಎಂಬುದನ್ನು ಪರೀಕ್ಷಿಸುತ್ತಾರೆ. ಆ ಕ್ಷಣ ಬಾಲಕಿಗೆ ಚಪ್ಪಾಳೆ ಸದ್ದು ಕೇಳಿಸಿದ್ದು, ಸುತ್ತಲೂ ತಿರುಗಿದ ಬಾಲಕಿ ಸದ್ದು ಕೇಳಿದೊಡನೆ ಬಹಳ ಭಾವುಕಳಾಗುತ್ತಾಳೆ. 

ಸೋಲೊಪ್ಪದ ವಿದಿಶಾ, ಮಿಸ್ ಡೆಫ್ ವರ್ಲ್ಡ್ ಗೆದ್ದ ಮೊದಲ ಭಾರತೀಯಳು!

ತನಗೆ ಕೊನೆಗೂ ಕಿವಿ (Ear) ಕೇಳಿಸುತ್ತದೆ ಎಂಬುದನ್ನು ತಿಳಿದು ಖುಷಿಯಿಂದ ಆಕೆ ಕಣ್ಣೀರಿಟ್ಟಿದ್ದಾಳೆ. ಇದೇ ವೇಳೆ ಮಹಿಳೆಯೊಬ್ಬರು ಆಕೆಯ ಬಳಿ ಧಾವಿಸಿ ಆಕೆಯನ್ನು ಸಮಾಧಾನಪಡಿಸುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದು, ಪುಟ್ಟ ಬಾಲಕಿಯ ಬಗ್ಗೆ ಕರುಣೆ ತೊರುತ್ತಾರೆ. ಈ ವಿಡಿಯೋ ತುಂಬಾ ಸುಂದರವಾಗಿದೆ. ಆಕೆಗೆ ಈ ಜಗತ್ತಿನ ಎಲ್ಲಾ ಖುಷಿ ಸಿಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು 1.6 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಒಂದು ವರ್ಷದ ಪುಟ್ಟ ಮಗುವೊಂದು ಮೊದಲ ಬಾರಿ ತಾಯಿಯ ಧ್ವನಿ ಕೇಳಿಸಿಕೊಂಡು ಖುಷಿಯಾಗಿ ಅದಕ್ಕೆ ನಗುತ್ತಾ ಹಾ ಹಾ ಎಂದು ಪ್ರತಿಕ್ರಿಯಿಸುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.

 

ಬದುಕಿನಲ್ಲಿ ಎಲ್ಲವೂ ಇದ್ದರೂ  ಅಯ್ಯೋ ನಮಗೆ ಶ್ರೀಮಂತಿಕೆ ಇಲ್ಲ, ಹಣವಿಲ್ಲ, ಕಾರಿಲ್ಲ ಮನೆಯಿಲ್ಲ ಎಂದು ಇಲ್ಲದರ ಬಗ್ಗೆಯೇ ಯೋಚಿಸುತ್ತಾ ಹಲುಬುವವರು ಅನೇಕರು. ಎಲ್ಲವೂ ಇದ್ದರೂ ಕೊನೆಗೆ ನೆಮ್ಮದಿ ಇಲ್ಲ ಎಂದು ಮರುಗುವ ಅನೇಕರನ್ನು ನೋಡಿದ್ದೇವೆ. ಆದರೆ ದೇಹದ ಇಂದ್ರಿಯಗಳೆನಿಸಿದ ಕಣ್ಣು, ಕಿವಿ, ಮೂಗು, ನಾಲಗೆ, ವಾಸನೆ, ಸ್ಪರ್ಶಜ್ಞಾನ ಇವುಗಳಿಲ್ಲದವರ ಬಗ್ಗೆ ನಾವು ಎಂದಿಗೂ ಯೋಚನೆ ಮಾಡಲು ಹೋಗುವುದಿಲ್ಲ. ಅವುಗಳಿಲ್ಲದವರಿಗಷ್ಟೇ ಅವುಗಳ ಮಹತ್ವವೇನು ಎಂಬುದರ ಅರಿವಿರುತ್ತದೆ.  ಮಾನವ ದೇಹದ ಪ್ರಮುಖ ಇಂದ್ರಿಯಗಳೆನಿಸಿದ ಸ್ಪರ್ಶ ಜ್ಞಾನ, ಕಣ್ಣು ದೃಷ್ಟಿ, ವಾಸನೆ, ರುಚಿ ಮತ್ತು ಶ್ರವಣ ಶಕ್ತಿ ಇಲ್ಲದವರು ಕೂಡ ನಮ್ಮ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಬದುಕುತ್ತಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ