ಹ್ಯಾಲೋ​ವೀನ್‌ ಆಚರಣೆ ವೇಳೆ ಭೀಕರ ಕಾಲ್ತುಳಿತ, 24ರ ಹರೆಯದ ನಟ-ಗಾಯಕ ಲಿ ಜಿಹಾನ್ ನಿಧನ!

By Suvarna News  |  First Published Oct 31, 2022, 6:35 PM IST

ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿತ ದುರಂತ ಸಂಭವಿಸಿ 134 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಭಾರತೀಯರಿಗೆ ಆಘಾತ ತಂದಿದೆ. ಇತ್ತ ದಕ್ಷಿಣ ಕೊರಿಯಾ ಮಂದಿಗೆ ಕಾಲ್ತುಳಿತ ಶಾಕ್ ಎದುರಾಗಿದೆ. 


ಸೌತ್ ಕೊರಿಯಾ(ಅ.31): ಗುಜರಾತ್ ಸೇತುವೆ ಕುಸಿತ ಘಟನೆ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ 134 ಮಂದಿ ಮೃತಪಟ್ಟಿದ್ದಾರೆ. ಅತ್ತ ಸೌತ್ ಕೊರಿಯಾದಲ್ಲಿ ಹ್ಯಾಲೋವೀನ್ ಆಚರಣೆ ವೇಳೆ ಕಾಲ್ತುಳಿತ ದುರಂತ ಸಂಭವಿಸಿದೆ. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಈ ಶಾಕ್‌ನಲ್ಲಿರುವ ಸೌತ್ ಕೊರಿಯಾ ಜನತೆಗೆ ಮತ್ತೊಂದು ಸುದ್ಧಿ ಬರಸಿಡಿಲಿನಂತೆ ಎರಗಿದೆ. ಇದೇ ಘಟನೆಯಲ್ಲಿ ಸೌತ್ ಕೊರಿಯಾದ ಖ್ಯಾತ ನಟ ಹಾಗೂ ಗಾಯಕ ಲಿ ಜಿಹಾನ್ ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದ ಜನ ಆಘಾತಕ್ಕೊಳಗಾಗಿದ್ದಾರೆ. 24ರ ಹರೆಯದ ಲೀ ಜಿಹಾನ್ ನಿಧನವನ್ನು 935 ಎಂಟರ್ಟೈನ್ಮೆಂಟ್ ಎಜೆನ್ಸಿ ಖಚಿತಪಡಿಸಿದೆ. ಲಿ ಜಿಹಾನ್ ಕುಟುಂಬ, ಆಪ್ತರು ಹಾಗೂ ಅಪಾರ ಅಭಿಮಾನಿ ಬಳಗ್ಗೆ ಸಂತಾಪ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಸೌತ್ ಕೊರಿಯಾ ಕಾಲ್ತುಳಿತ ಘಟನೆಯಿಂದ ತೀವ್ರ ದುಃಖಿತರಾಗಿದ್ದೇವೆ. ಇದೇ ಘಟನೆಯಲ್ಲಿ ನಟ ಲಿ ಜಿಹಾನ್ ನಿಧನರಾಗಿದ್ದಾರೆ ಅನ್ನೋ ಸುದ್ಧಿಯಿಂದ ತೀವ್ರ ಆಘಾತಕ್ಕೊಳಾಗಿದ್ದೇವೆ ಎಂದು 935 ಎಂಟರ್ಟೈನ್ಮೆಂಟ್ ಎಜೆನ್ಸಿ ಹೇಳಿದೆ.  ಯಾರೆ ಸಿಕ್ಕರು ಪ್ರೀತಿಯಿಂದ ಮಾತನಾಡಿಸುವ, ಗೌರವಿಸುವ ವ್ಯಕ್ತಿತ್ವ ಇನ್ನಿಲ್ಲ ಅನ್ನೋದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿದೆ. 

Tap to resize

Latest Videos

ಕೊರಿಯಾದಲ್ಲಿ ಹ್ಯಾಲೊವಿನ್‌ ಆಚರಣೆ ವೇಳೆ ಭೀಕರ ನೂಕುನುಗ್ಗಲು: 150 ಬಲಿ

ದಕ್ಷಿಣ ಕೋರಿ​ಯಾ ರಾಜಧಾನಿ ಸಿಯೋಲ್‌ನಲ್ಲಿ ಶನಿವಾರ ಹ್ಯಾಲೋ​ವೀನ್‌ ಆಚ​ರ​ಣೆಯ ವೇಳೆ ಈ ಘಟನೆ ನಡೆದಿದೆ. ಕಾಲ್ತುಳಿತಿಂದ ಆಸ್ಪತ್ರೆ ದಾಖಲಾಗಿದ್ದ ಇನ್ನೂ 31 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಘಟನೆಗೆ ಬಲಿಯಾದವರ ಸಂಖ್ಯೆ 151ಕ್ಕೆ ತಲುಪಿದೆ. ಈ ನಡುವೆ ಕಾಲ್ತುಳಿತದಲ್ಲಿ ಗಾಯಗೊಂಡವರ ಪೈಕಿ 104 ಜನರು ಚಿಕಿತ್ಸೆ ಪಡೆ​ಯು​ತ್ತಿದ್ದು ಅವರಲ್ಲಿ 24 ಜನರ ಸ್ಥಿತಿ ಗಂಭೀ​ರ​ವಾ​ಗಿದೆ. ಹಾಗಾಗಿ ಸಾವಿನ ಸಂಖ್ಯೆ ಇನ್ನ​ಷ್ಟುಹೆಚ್ಚಾ​ಗುವ ಆತಂಕ ಇದೆ. ಸಾವನ್ನಪ್ಪಿದವರಲ್ಲಿ ಬಹುತೇಕರು 25 ವರ್ಷಕ್ಕಿಂತ ಕೆಳಗಿನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿರಿದಾದ ಪ್ರದೇಶದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾರೀ ಪ್ರಮಾಣದ ಜನರು ಆಗಮಿಸಿದ ಕಾರಣ ಈ ದುರ್ಘಟನೆ ಸಂಭವಿಸಿತ್ತು.

 

 

ಹ್ಯಾಲೊವಿನ್‌ ಹಬ್ಬದಾಚರಣೆಯ ವೇಳೆಗೆ ಕಿರಿದಾದ ಬೀದಿಗಳಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ನಡೆದ ತಳ್ಳಾಟದಿಂದಾಗಿ  ಈ ಘಟನೆ ನಡೆದಿದೆ. ಹ್ಯಾಲೋವಿನ್‌ ಪಾರ್ಟಿ ಸ್ಥಳ ಕಿರಿದಾಗಿದ್ದು, ವೇಳೆ ಹಚ್ಚು ಜನಸಂದಣಿ ಸೇರಿತ್ತು. ಈ ವೇಳೆ ಮುನ್ನುಗ್ಗಲು ಒಬ್ಬರ ಮೇಲೊಬ್ಬರು ಮುಗಿಬಿದ್ದಾಗ ಭೀಕರ ನೂಕುನುಗ್ಗಾಟ ಉಂಟಾಯಿತು. ಈ ವೇಳೆ ಅನೇಕರು ಉಸಿರುಗಟ್ಟಿಹೃದಯ ಸ್ತಂಭನದಿಂದ ಮೃತಪಟ್ಟರು. 74 ಜನರ ಶವಗಳನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನೂ 46 ಮಂದಿಯ ಶವ ಶನಿವಾರ ಮಧ್ಯರಾತ್ರಿಯಾದರೂ ರಸ್ತೆಯಲ್ಲೇ ಬಿದ್ದಿದ್ದವು. ಭೀಕರ ತಳ್ಳಾಟ, ಹೃದಯಸ್ತಂಭನಕ್ಕೆ ಒಳಗಾದವರ ಎದೆ ಒತ್ತಿ ಬದುಕಿಸುವ ಯತ್ನದ ದೃಶ್ಯಗಳು ಮನಕಲಕುವಂತಿದ್ದವು. ಈ ಹಿನ್ನೆಲೆಯಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಯುನ್‌ ಸುಕ್‌ ಯಿಯೋಲ್‌ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿಸಿ, ಹಬ್ಬದಾಚರಣೆ ಸ್ಥಳಗಳಲ್ಲಿ ಸುರಕ್ಷತಾ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. 3 ದಿನಗಳ ಕಾಲ ಶೋಕೋಚಾರಣೆ ಘೋಷಿಸಿದ್ದಾರೆ.
 

click me!