Woman Bites: ನಾಯಿ ವಿಚಾರವಾಗಿ ಜಗಳ... ಶ್ವಾನದ ಮಾಲಕಿಗೆ ಕಚ್ಚಿದ್ದು ನಾಯಿ ಅಲ್ಲ ಮಹಿಳೆ...!

By Suvarna News  |  First Published Dec 27, 2021, 6:06 PM IST
  • ನಾಯಿ ವಿಚಾರವಾಗಿ ಇಬ್ಬರು ಮಹಿಳೆಯರ ಮಧ್ಯೆ ಜಗಳ
  • ನಾಯಿಯ ಮಾಲಕಿಗೆ ಕಚ್ಚಿದ ಮತ್ತೊಬ್ಬ ಮಹಿಳೆ
  • ಇಬ್ಬರ ಜಗಳ ನೋಡುತ್ತಾ ನಿಂತ ನಾಯಿ

ಜರ್ಮನಿ: ನಾಯಿ ವಿಚಾರವಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಮಹಿಳೆಯೊಬ್ಬರು ನಾಯಿಯ ಮಾಲಕಿಗೆ ಕಚ್ಚಿದ ವಿಚಿತ್ರ ಘಟನೆ ಜರ್ಮನಿಯಲ್ಲಿ ನಡೆದಿದೆ. ಪೂರ್ವ ಜರ್ಮನಿ (eastern Germany) ಯಲ್ಲಿ ಸಾಕು ನಾಯಿಗೆ ಶಿಸ್ತು ಕಲಿಸುವ ಬಗ್ಗೆ ಇಬ್ಬರು ಮಹಿಳೆಯ ಮಧ್ಯೆ ಕಲಹ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ ನಾಯಿಗೆ ಹೊಡೆದಿರುವುದನ್ನು ಪ್ರಶ್ನಿಸಿದ್ದಕ್ಕೆ 51 ವರ್ಷದ ಮಹಿಳೆಯೊಬ್ಬಳು ಆಕೆಗೆ ಕಚ್ಚಿದ್ದಾಳೆ. ಮೊಣಕಾಲಿನ ಕೆಳಗೆ ಕಾಲಿನ ಹಿಂಭಾಗ ಮಹಿಳೆ ಕಚ್ಚಿದ್ದು ಪರಿಣಾಮ 27 ವರ್ಷದ ಮಹಿಳೆ ಇದರಿಂದ ತೀವ್ರ ನೋವಿಗೊಳಗಾಗಿ ಕೆಳಗೆ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಈ ಇಬ್ಬರು ಮಹಿಳೆಯರು ಈಗ ಕೋರ್ಟ್‌ ಮೆಟ್ಟಿಲೇರಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಜರ್ಮನ್‌ ಪೊಲೀಸರ ಹೇಳಿಕೆ ಪ್ರಕಾರ ಈ ಇಬ್ಬರು ಮಹಿಳೆಯರ ಜಗಳದ ವೇಳೆ ನಾಯಿ ಮಾತ್ರ ಯಾರಿಗೂ ಕಚ್ಚದೇ ಸುಮ್ಮನೇ ನೋಡುತ್ತಾ ನಿಂತಿತ್ತು ಎಂದು ಹೇಳಿದ್ದಾರೆ. 

Latest Videos

undefined

ಜರ್ಮನ್‌ನ ಕಾನೂನಿನ ಪ್ರಕಾರ, ನಾಯಿ ಸಾಕುವವರು ತಮ್ಮ ನಾಯಿಗಳನ್ನು ಗಾರ್ಡನ್‌ಗಳಲ್ಲಿ ದಿನಕ್ಕೆ ಎರಡು ಬಾರಿ ಒಟ್ಟು ಒಂದು ಗಂಟೆ ವಾಕ್‌ ಕರೆದುಕೊಂಡು ಹೋಗುಬೇಕು ಅಥವಾ ರನ್ನಿಂಗ್ ಮಾಡಿಸಬೇಕು ಎಂಬ ನಿಯಮವಿದೆ. ಜರ್ಮನಿಯ ತುಂಬಾ ಜನಪ್ರಿಯ ನಾಯಿ ತಳಿ ಎಂದರೆ ಜರ್ಮನ್‌ ಶೆಫರ್ಡ್‌(German Shepherd) ಹಾಗೂ ಚಿಕ್ಕ ಕಾಲುಗಳ ಉದ್ದ ದೇಹದ ಡ್ಯಾಶ್‌ಹೊಂಡಾ(Dachshund)ತಳಿ. ಈ ತಳಿಯನ್ನು ಸಾಸೇಜ್ ನಾಯಿಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲದೇ ಲ್ಯಾಬ್ರಡಾರ್‌ಗಳು, ರಿಟ್ರೈವರ್‌ಗಳು ಮತ್ತು ಜ್ಯಾಕ್ ರಸ್ಸೆಲ್ ಟೆರಿಯರ್‌ಗಳು ಮತ್ತು ಪಗ್‌ಗಳು ಕೂಡ ಇಲ್ಲಿನ ತಳಿಗಳೇ ಆಗಿವೆ. 

Emotional Video : ಆನೆ ಹಾಗೂ ಸಾಕಿದಾತನ ಅಪೂರ್ವ ಸಮ್ಮಿಲನ... ಮತ್ತೆ ಮತ್ತೆ ನೋಡುವಂತೆ ಮಾಡುವ ವಿಡಿಯೋ

ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ ಮತ್ತು ನಂಬಲಾಗಿದೆ. ಕೆಲವೊಮ್ಮೆ ನಾಯಿ ಮಾಲೀಕರು ಅವುಗಳನ್ನು ಮುದ್ದಿಸುವ ಸಲುವಾಗಿ ವಿಪರೀತವಾದುದನ್ನು ಮಾಡುತ್ತಾರೆ. ಈ ಹಿಂದೆ ಆಸ್ಟ್ರೇಲಿಯನ್ ದಂಪತಿಗಳು (Australian couple) ಕ್ರಿಸ್ಮಸ್ ಸಮಯದಲ್ಲಿ ನ್ಯೂಜಿಲೆಂಡ್‌ನಿಂದ ತಮ್ಮ ನಾಯಿಯನ್ನು ಮನೆಗೆ ತರಿಸಲು ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆಯಲು ಹತ್ತಾರು ಸಾವಿರ ಡಾಲರ್‌ಗಳನ್ನು ಖರ್ಚು ಮಾಡಿದ್ದರು. ಈ ಇಡೀ ಪ್ರಕ್ರಿಯೆಗೆ ತುಂಬಾ ಹಣ ಖರ್ಚಾಗಿದ್ದು, ಇದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ನಾಯಿಗೆ 'ಮಿಲಿಯನ್ ಡಾಲರ್ ಮಂಚ್ಕಿನ್ ಎಂದು ನಾಮಕರಣ ಮಾಡಿದ್ದರು.

ನವ ದಂಪತಿಯ ಡಾನ್ಸ್‌ಗೆ ಜೊತೆಯಾದ ಪ್ರೀತಿಯ ಶ್ವಾನ  

ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್‌, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ.

ಇತ್ತೀಚೆಗೆ ನವ ಜೋಡಿಯೊಂದು ಮದುವೆಯ ಸಂಭ್ರಮದಲ್ಲಿ ಡಾನ್ಸ್‌ ಮಾಡ್ತಿರಬೇಕಾದರೆ ಅವರ ನಾಯಿಯೊಂದು ಜೋಡಿ ಮಧ್ಯೆ ನುಗ್ಗಿ ಬಂದು ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿತ್ತು. ವಿದೇಶಿ ಜೋಡಿಯೊಂದು ತಮ್ಮ ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದರು. ಈ ವೇಳೆ ಎಲ್ಲಿತ್ತು ಇವರ ಪ್ರೀತಿಯ ಸಾಕು ನಾಯಿ, ಇವರತ್ತ ಓಡಿ ಬಂದು ಡಾನ್ಸ್‌ ಮಾಡುತ್ತಿದ್ದ ನವ ವಧು ವರನ ಮಧ್ಯೆ ನಿಂತು ಅವರ ಡಾನ್ಸ್‌ಗೆ ಅಡ್ಡಿ ಪಡಿಸಿದೆ. ಈ ಮುದ್ದಾದ ವಿಡಿಯೋವನ್ನು 71,000 ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದಾರೆ. 

ಒಟ್ಟಿನಲ್ಲಿ ಅವರ ಖಾಸಗಿ ಕ್ಷಣಗಳಿಗೆ ಈ ನಾಯಿ  ಅಡ್ಡಿಪಡಿಸಿತ್ತು. ವೇದಿಕೆಗೆ ನಾಯಿ ಬರುತ್ತಿದ್ದಂತೆ ಮದುವೆಗೆ ಬಂದಿದ್ದವರೆಲ್ಲಾ ಜೋರಾಗಿ ನಗಲು ಶುರು ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಪೋಸಲ್‌ ಹಾಗೂ ಮದುವೆ (Proposals & Weddings) ಎಂಬ ಖಾತೆಯಿಂದ ಶೇರ್‌ ಮಾಡಲಾಗಿದ್ದು, ನೋಡಲು ತುಂಬಾ ಮುದ್ದಾಗಿದೆ. 'ಎಕ್ಸ್‌ಕ್ಯೂಸ್‌ ಮಿ ನಾನು ಕೂಡ ಡಾನ್ಸ್‌' ಮಾಡುತ್ತೇನೆ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ನೀಡಲಾಗಿದೆ.  

click me!