France Heatwave: ಪ್ಯಾರಿಸ್ ನಲ್ಲಿ ಬಿಸಿಲ ಝಳ ಹೆಚ್ಚಾಗ್ತಿದ್ದಂತೆ ಆಲ್ಕೋಹಾಲ್ ಬ್ಯಾನ್ - ಏನಿದು ಕನೆಕ್ಷನ್ ?

Published : Jun 30, 2026, 12:17 PM IST
France Heatwave

ಸಾರಾಂಶ

ಫ್ರಾನ್ಸ್, ಪ್ಯಾರಿಸ್ ಜನರು ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ದಿನದಿನಕ್ಕೂ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಪ್ಯಾರಿಸ್ ನಲ್ಲಿ ಆಲ್ಕೋಹಾಲ್ ಬ್ಯಾನ್ ಆಗಿದ್ದು, ಕಾರಣ ಇಲ್ಲಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್ (France) ಬಿಸಿಲ ಝಳಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ದಿನ ದಿನಕ್ಕೂ ಏರ್ತಿರುವ ಶಾಖ ತಡೆಯಲಾರದೇ ಈಗಾಗಲೇ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಪೊಲೀಸರು ಆಲ್ಕೋಹಾಲ್ ಮೇಲೆ ನಿಷೇಧ ಹೇರಿದ್ದಾರೆ. ಬಿಸಿಲಿಗೂ, ಆಲ್ಕೋಹಾಲ್ ಗೂ ಏನು ಸಂಬಂಧ ಗೊತ್ತಾ?

ಮದ್ಯಪಾನ ನಿಷೇಧ 

ಜೂನ್ 2026 ರಲ್ಲಿ, ಪ್ಯಾರಿಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ. ಫ್ರಾನ್ಸ್ನಾದ್ಯಂತ ಸುಮಾರು 61 ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಾಲೆ , ರೈಲು ಸಂಚಾರದ ಮೇಲೆ ಮಾತ್ರವಲ್ಲ ಆಲ್ಕೋಹಾಲ್ ಮಾರಾಟ, ಸೇವನೆ ಮೇಲೂ ಬಿಸಿಲಿನ ಪ್ರಭಾವ ಬೀರಿದೆ. ಪ್ಯಾರಿಸ್ ಪೊಲೀಸ್ ಆಡಳಿತ ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಬೀದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ಸಂಪೂರ್ಣ ನಿಷೇಧಿಸಿದೆ. ಅದ್ರಲ್ಲೂ ವಾರಾಂತ್ಯದಲ್ಲಿ ಪೊಲೀಸ್ ಕಣ್ಗಾವಲಿರಲಿದೆ. ವಾರಾಂತ್ಯದಲ್ಲಿ ಜನರು ಹೊರಗೆ ಹೋಗಿ ಪಾರ್ಟಿ ಮಾಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ನಿಷೇಧ ಜಾರಿಯಲ್ಲಿದೆ.

ವಾಟ್ಸಾಪ್‌ನಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆ: ಇನ್ಮುಂದೆ ಫೋನ್ ನಂಬರ್ ಇಲ್ಲದೆಯೂ ಚಾಟ್! ಸೆಟ್ಟಿಂಗ್ ಬದಲಾಯಿಸಿ!

ಆಲ್ಕೋಹಾಲ್ ಗೆ ಏಕೆ ಬ್ರೇಕ್? 

ಬೇಸಿಗೆ ಬಿಸಿ ಹೆಚ್ಚಾಗ್ತಿದ್ದಂತೆ ಶಾಲೆ- ಕಾಲೇಜುಗಳಿಗೆ ರಜೆ ನೀಡೋದು ಸೂಕ್ತ. ಆದ್ರೆ ಮದ್ಯಪಾನ ನಿಷೇಧ ಏಕೆ ಎನ್ನುವ ಪ್ರಶ್ನೆಗೆ ಸರಳ ಕಾರಣವಿದೆ. ಬೇಸಿಗೆಯಲ್ಲಿ ಮದ್ಯಪಾನ ಅತ್ಯಂತ ಅಪಾಯಕಾರಿ. ಮದ್ಯಪಾನ ತ್ವರಿತವಾಗಿ ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ. ಆಲ್ಕೋಹಾಲ್ ದೇಹದಿಂದ ಹೆಚ್ಚಿನ ನೀರನ್ನು ಹೊರಹಾಕುತ್ತದೆ. ಹೊರಗೆ ತುಂಬಾ ಬಿಸಿ ಇರುವ ಟೈಂನಲ್ಲಿ ಮದ್ಯಪಾನ ಮಾಡಿದ್ರೆ ದೇಹದ ಉಷ್ಣತೆ ನಿಯಂತ್ರಣ ಕಷ್ಟ. ಇದು ಹೀಟ್ ಸ್ಟ್ರೋಕ್ ಕೆಲವೊಮ್ಮೆ ಸಾವಿಗೂ ಕಾರಣವಾಗುತ್ತದೆ.

Indus Water Treaty dispute: ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))

ಹೀಗೂ ಸಾಯ್ತಿದ್ದಾರೆ ಜನ 

ಮದ್ಯಪಾನ ಸೇವನೆ, ಹೀಟ್ ಸ್ಟ್ರೋಕ್ ನಿಂದ ಮಾತ್ರವಲ್ಲ ಫ್ರಾನ್ಸ್ ನಲ್ಲಿ ಬಿಸಿಲಿಗೆ ಬೇರೆ ಬೇರೆ ರೀತಿಯಲ್ಲಿ ಸಾಯ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಬಿಸಿಲು ತಾಳಲಾರದೆ ಜನರು ಕೆರೆ, ಕಾಲುವೆಗಳಿಗೆ ಹಾರ್ತಿದ್ದು, ಅಲ್ಲಿ ಮುಳುಗಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಫ್ರೆಂಚ್ ಕ್ರೀಡಾ ಸಚಿವರ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ದೇಶಾದ್ಯಂತ 55 ಜನರು ಮುಳುಗಿ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಟ್ಸಾಪ್‌ನಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆ: ಇನ್ಮುಂದೆ ಫೋನ್ ನಂಬರ್ ಇಲ್ಲದೆಯೂ ಚಾಟ್! ಸೆಟ್ಟಿಂಗ್ ಬದಲಾಯಿಸಿ!
Indus Water Treaty dispute: ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))