ಬಹು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪರ್ವೇಜ್ ಮುಷರಫ್ ದುಬೈನ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ದುಬೈ (ಫೆಬ್ರವರಿ 5, 2023): ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಜನರಲ್ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ. ದುಬೈ ಆಸ್ಪತ್ರೆಯಲ್ಲಿ ಪರ್ವೇಜ್ ಮುಷರಫ್ ನಿಧನರಾಗಗಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಬಹು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 79 ವರ್ಷ ವಯಸ್ಸಿನ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ ಎಂದೂ ವರದಿ ತಿಳಿಸಿದೆ.
ದೆಹಲಿಯಲ್ಲಿ ಆಗಸ್ಟ್ 11, 1943 ರಂದು ಜನಿಸಿದ್ದ ಪರ್ವೇಜ್ ಮುಷರಫ್ ಕರಾಚಿಯ ಸೇಂಟ್ ಪ್ಯಾಟ್ರಿಕ್ ಹೈಸ್ಕೂಲ್‌ನಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರೈಸಿದ್ದರು. ನಂತರ, ಪಾಕ್ ಮಾಜಿ ಅಧ್ಯಕ್ಷರು ಲಾಹೋರ್‌ನ ಫಾರ್ಮನ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಅಧ್ಯಯನ ಮಾಡಿದ್ದರು.
ಇದನ್ನು ಓದಿ: ಮುಷರಫ್ ಚೇತರಿಕೆ ಕ್ಷೀಣ: ಆ್ಯಂಬುಲೆನ್ಸಲ್ಲಿ ಪಾಕ್‌ಗೆ ತರುವ ಸಾಧ್ಯತೆ
Former President of Pakistan, General Pervez Musharraf (Retd) passes away after a prolonged illness, at a hospital in Dubai: Pakistan's Geo News pic.twitter.com/W1fGRVb6xZ
— ANI (@ANI)ಇನ್ನು, ಅವರ ಮೃತದೇಹವನ್ನು (Dead Body) ಪಾಕಿಸ್ತಾನಕ್ಕೆ (Pakistan) ಕರೆ ತರುತ್ತಾರೋ ಇಲ್ಲವೋ ಎಂ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಈವರೆಗೆ ಬಂದಿಲ್ಲ. ಆದರೂ ಅವರ ಕುಟುಂಬವು (Family) ಕಳೆದ ವರ್ಷದಿಂದ ಅವರನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿತ್ತು ಎಂದು ತಿಳಿದುಬಂದಿದೆ.
ಪರ್ವೇಜ್ ಮುಷರಫ್ (Pervez Musharraf) ಅವರ ಕುಟುಂಬವು ಕಳೆದ ವರ್ಷ ಅವರ ಅಧಿಕೃತ ಖಾತೆಯಿಂದ ಪಾಕಿಸ್ತಾನ ಮಾಜಿ ಅಧ್ಯಕ್ಷರಿಗೆ (Ex President) ಚೇತರಿಕೆ ಸಾಧ್ಯವಿಲ್ಲ ಎಂದು ಟ್ವೀಟ್ (Tweet) ಮಾಡಿತ್ತು. ಪಾಕಿಸ್ತಾನದ ಮಾಜಿ ಅಧ್ಯಕ್ಷರನ್ನು ವೆಂಟಿಲೇಟರ್‌ನಲ್ಲಿ (Ventilator) ಇರಿಸಲಾಗಿದೆ ಎಂಬ ವರದಿಗಳ ನಂತರ ಕುಟುಂಬವು ಈ ಸ್ಪಷ್ಟೀಕರಣವನ್ನು ನೀಡಿತ್ತು.
ಆದರೆ, ಅಮಿಲೋಯ್ಡೋಸಿಸ್ ಎಂಬ ಕಾಯಿಲೆಯಿಂದ ಅವರ ಅಂಗಾಂಗಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ವದಂತಿಯನ್ನು ಅವರ ಕುಟುಂಬ ನಿರಾಕರಿಸಿತ್ತು. ಈ ರೋಗವು ಸಂಯೋಜಕ ಅಂಗಾಂಶಗಳು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ, ಹಾಗೂ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಪ್ರತಿಬಂಧಿಸುತ್ತದೆ. 2007 ರಲ್ಲಿ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಹತ್ಯೆಯ ಆರೋಪಗಳನ್ನು ಎದುರಿಸುತ್ತಿರುವ ಪರ್ವೇಜ್ ಮುಷರಫ್ ಕಳೆದ 7 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಪಾಕ್ ಮಾಜಿ ಅಧ್ಯಕ್ಷಗೆ ಬಹು ಅಂಗಾಂಗ ವೈಫಲ್ಯ: ಪರ್ವೇಜ್ ಮುಷರಫ್ ಸ್ಥಿತಿ ಗಂಭೀರ
1999 ರಲ್ಲಿ ಯಶಸ್ವಿ ಮಿಲಿಟರಿ ದಂಗೆಯ ನಂತರ ಪರ್ವೇಜ್ ಮುಷರಫ್ ದಕ್ಷಿಣ ಏಷ್ಯಾ ರಾಷ್ಟ್ರವಾದ ಪಾಕಿಸ್ತಾನದ 10ನೇ ಅಧ್ಯಕ್ಷರಾಗಿದ್ದರು. ಅವರು 1998 ರಿಂದ 2001 ರವರೆಗೆ ಪಾಕಿಸ್ತಾನದ 10 ನೇ ಅಧ್ಯಕ್ಷ ಜಂಟಿ ಮುಖ್ಯಸ್ಥರು (CJCSC) ಮತ್ತು 1998 ರಿಂದ 2007 ರವರೆಗೆ 7 ನೇ ಉನ್ನತ ಜನರಲ್ ಆಗಿಯೂ ಸೇವೆ ಸಲ್ಲಿಸಿದರು.
ಇದನ್ನೂ ಓದಿ: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ!